newsics.com
ಕೊಲೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ರನ್ನು ನೋಡಲು ರಚಿತಾ ರಾಮ್ ಸ್ಪೆಷಲ್ ಎಂಟ್ರಿ ಮೂಲಕ ಒಳಗೆ ಹೋಗಿದ್ದಾರೆ. ನಟಿ ಜೊತೆ ಬಿಜೆಪಿ ಮುಖಂಡ ಸಚ್ಚಿದಾನಂದ ಕೂಡ ಆಗಮಿಸಿದ್ರು. ದರ್ಶನ್ ಜೈಲು ಸೇರಿ 2 ತಿಂಗಳಾದ ಬಳಿಕ ಮೊದಲ ಬಾರಿಗೆ ರಚಿತಾ ರಾಮ್ ನಟನನ್ನು ನೋಡಲು ಜೈಲಿಗೆ ಆಗಮಿಸಿದ್ರು.
ನಟ ದರ್ಶನ್ ಅವರಿಗಾಗಿ ನಟಿ ರಚಿತಾ ರಾಮ್ ಮೂರು ಬ್ಯಾಗ್ ಗಳಲ್ಲಿ ಹಣ್ಣು ಹಂಪಲು ತಂದಿದ್ರು. ಜೈಲೂಟ ತಿಂದು ಬೇಸತ್ತಿರುವ ನಟ ದರ್ಶನ್ ಗಾಗಿ ರಚಿತಾ ಇಷ್ಟದ ಹಣ್ಣುಗಳನ್ನು ತಂದಿದ್ರು.
ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಚಿತಾ ರಾಮ್ ಅವರನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದು ನಟ ದರ್ಶನ್ ಹೀಗಾಗಿ ನಟಿಗೆ ದರ್ಶನ್ ಮೇಲೆ ಅಪಾರ ಗೌರವ ಇದೆ. ಬುಲ್ ಬುಲ್ ಸಿನಿಮಾದಲ್ಲಿ ರಚಿತಾ ರಾಮ್, ದರ್ಶನ್ ಗೆ ನಾಯಕಿಯಾಗಿದ್ರು. ಸಿನಿಮಾ ಕೂಡ ಸೂಪರ್ ಹಿಟ್ ಆಯ್ತು. ದರ್ಶನ್ ಆ್ಯಂಡ್ ರಚಿತಾ ಜೋಡಿ ಅಭಿಮಾನಿಗಳಿಗೂ ಇಷ್ಟವಾಗಿತ್ತು. ಆನಂತರ ದರ್ಶನ್ ಜೊತೆಗೆ ಅಂಬರೀಷ್, ಕ್ರಾಂತಿ ಸಿನಿಮಾಗಳಲ್ಲೂ ರಚಿತಾ ನಟಿಸಿದ್ದಾರೆ.