newsics.com/ನ್ಯೂಸಿಕ್ಸ್
ಕ್ಷುಲಕ ಕಾರಣಕ್ಕೆ ರೆಸಾರ್ಟ್‌ವೊಂದರ ಈಜುಕೊಳದಲ್ಲಿ ಗಲಾಟೆ ನಡೆದಿದ್ದು, 8 ಜನರು ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ. ಈ ಘಟನೆಯಲ್ಲಿ ಕೊಪ್ಪಳದ ಮಹಿಳಾ ಪೇದೆ ಮೇಲೆ ಹಲ್ಲೆ ನಡೆದಿದ್ದು, ಅವರ ಚಿನ್ನದ ಸರ ನಾಪತ್ತೆಯಾಗಿದೆ.
ತಾಲೂಕಿನ ಚಿಕ್ಕ ಜಂತಕಲ್ ಗ್ರಾಮದಿಂದ ರೆಸಾರ್ಟ್‌ಗೆ ಬಂದಿದ್ದ ಮಹಿಳೆಯರು ಸೇರಿದಂತೆ 8 ಜನರ ಗುಂಪು ಈಜುಗೊಳದಲ್ಲಿ ಇಳಿದಿದ್ದಾರೆ. ಇದೇ ಸಮಯದಲ್ಲಿ ಗಂಗಾವತಿಯಿಂದ ಬಂದಿದ್ದ ಕೆಲ ಯುವಕರು ನೀರಿನ ಬಾಟಲು ಎಸೆದಾಡುವ ಪ್ರಸಂಗ ನಡೆದು ವಿಕೋಪಕ್ಕೆ ಹೋಗಿದೆ. ನಂತರ ಅಂಜನಾದ್ರಿಯ ಬಳಿಯಲ್ಲಿ ಮಾತಿನ ಚಕಮಕಿ ನಡೆದು ಕೈ ಕೈ ಮಿಸಲಾಯಿಸಿದ್ದಾರೆ. ಇದರಲ್ಲಿ ಪೇದೆ ಮೇಲೆ ಹಲ್ಲೆ ನಡೆದಿದ್ದು, ಚಿನ್ನದ ಸರ ಕಿತ್ತುಕೊಂಡ್ಡಿದ್ದಾರೆ. ಸದ್ಯ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಭಾರಿ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ, ಗ್ರಾಮೀಣ ಪೋಲಿಸ್ ಠಾಣೆ ಸಿಪಿಐ ರಂಗಪ್ಪ ದೊಡ್ಮನಿ,ಗಂಗಾವತಿ ನಗರ ಪೋಲಿಸ್ ಠಾಣೆ ಪಿಐ ಪ್ರಕಾಶ ಯಾತನೂರ ನಗರದ ಸಾರ್ವಜನಿಕ ಆಸ್ಪತ್ರೆ ಭೇಟಿ ನೀಡಿ, ವಿಚಾರಣೆ ಕೈಗೊಂಡಿದ್ದಾರೆ.
Liquor new price list ಆಲ್ಕೋಹಾಲ್ ಪ್ರಮಾಣ ಆಧರಿಸಿ ಮದ್ಯದ ಬೆಲೆ ನಿಗದಿ: ಹೊಸ ದರಪಟ್ಟಿ ಬಿಡುಗಡೆ