Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಮನೆಯಲ್ಲಿ ಜಿರಳೆಗಳ ಕಾಟವೇ; ಟೊಮೆಟೊದಲ್ಲಿ ಈ ಎರಡು ವಸ್ತುಗಳನ್ನು ಬೆರೆಸಿ ಇಡಿ
ಲೈಫ್‌ಸ್ಟೈಲ್ಆರೋಗ್ಯ

ಮನೆಯಲ್ಲಿ ಜಿರಳೆಗಳ ಕಾಟವೇ; ಟೊಮೆಟೊದಲ್ಲಿ ಈ ಎರಡು ವಸ್ತುಗಳನ್ನು ಬೆರೆಸಿ ಇಡಿ

Share
2 Min Read
SHARE

newsics.com/ನ್ಯೂಸಿಕ್ಸ್

ಮನೆಯನ್ನು ಎಷ್ಟೇ ಸ್ವಚ್ಛವಾಗಿ ಇಟ್ಟುಕೊಂಡರೂ ಜಿರಳೆಗಳ  ಹಾವಳಿ ಇದ್ದೇ ಇರುತ್ತದೆ. ಅದರಲ್ಲೂ ಅಡುಗೆ ಮನೆಯಲ್ಲಿ ಇವುಗಳ ಕಾಟ ತುಸು ಹೆಚ್ಚೇ ಇರುತ್ತದೆ. ಆಹಾರ ಪದಾರ್ಥಗಳನ್ನಿಟ್ಟಿರುವ ಸ್ಥಳ, ಸಿಂಕ್‌, ಕಸದ ಬುಟ್ಟಿ ಇತ್ಯಾದಿ ಸ್ಥಳಗಳಲ್ಲಿ ಜಿರಳೆಗಳು ಹೆಚ್ಚಾಗಿ ಓಡಾಡುತ್ತಿರುತ್ತವೆ.
ಹೀಗೆ ಸುಳಿದಾಡುವ ಇವು ಪಾತ್ರೆಗಳು, ಆಹಾರ ಪದಾರ್ಥಗಳನ್ನು ಸ್ಪರ್ಶಿಸುವ ಮೂಲಕ ನಮಗೆ ರೋಗಗಳನ್ನು ಹರಡುತ್ತವೆ. ಇದು ಅಲರ್ಜಿ, ಕೆಂಪು, ತುರಿಕೆ ಮತ್ತು ಉಸಿರಾಟದ ಸಮಸ್ಯೆಗಳು ಸೇರಿದಂತೆ ಹಲವು ಕಾಯಿಲೆಗಳನ್ನು ಉಂಟು ಮಾಡಬಹುದು. ಹಾಗಾಗಿ ಇವುಗಳ ಹಾವಳಿಯಿಂದ ಮುಕ್ತಿ ಪಡೆಯಲು ಬಹುತೇಕರು ರಾಸಯನಿಕಯುಕ್ತ ಸ್ಪ್ರೇ ಇತ್ಯಾದಿ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಇದು ಆರೋಗ್ಯದ ದೃಷ್ಟಿಯಿಂದ ಅಷ್ಟೇನೂ ಒಳ್ಳೆಯದಲ್ಲ. ಹೀಗಿರುವಾಗ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ಜೊತೆಗೆ ಟೊಮೆಟೋದಲ್ಲಿ ಈ ಎರಡು ವಸ್ತುಗಳನ್ನು ಬೆರೆಸಿ ಜಿರಳೆಗಳು ಓಡಾಡುವ ಸ್ಥಳದಲ್ಲಿ ಇರುವ ಮೂಲಕ ಇವುಗಳ ಹಾವಳಿಯಿಂದ ಮುಕ್ತಿ ಪಡೆಯಬಹುದು.

ಜಿರಳೆಗಳ ಹಾವಳಿಯಿಂದ ಮುಕ್ತಿ ಪಡೆಯಲು ಇಲ್ಲಿದೆ ಸುಲಭ ಉಪಾಯ:

ನಿಮ್ಮ ಅಡುಗೆಮನೆಯಲ್ಲಿ ಮತ್ತು ನಿಮ್ಮ ಕೋಣೆಗಳಲ್ಲಿ ಜಿರಳೆಗಳು ಓಡಾಡುವುದನ್ನು ನೀವು ನೋಡಿದರೆ, ಅವುಗಳು ಎಲ್ಲಿ ಓಡಾಡುತ್ತದೆಯೋ ಅಲ್ಲಿ ಟೊಮೆಟೊದಲ್ಲಿ ಅಡುಗೆ ಸೋಡಾ ಮತ್ತು ಸಕ್ಕರೆಯನ್ನು ಮಿಶ್ರಣ ಮಾಡಿ ಇಟ್ಟುಬಿಡಿ. ಈ ಪರಿಣಾಮಕಾರಿ ಮನೆಮದ್ದು ಜಿರಳೆಗಳನ್ನು ಪರಿಣಾಮಕಾರಿಯಾಗಿ ತೊಡೆದು ಹಾಕುತ್ತವೆ. ಇದಕ್ಕಾಗಿ ಟೊಮೆಟೊವನ್ನು ಕತ್ತರಿಸಿ, ಅದರ ಬೀಜಗಳು ಮತ್ತು ತಿರುಳನ್ನು ತೆಗೆದುಹಾಕಿ ಬಳಿಕ ಅದಕ್ಕೆ ಅರ್ಧ ಟೀಚಮಚ ಅಡಿಗೆ ಸೋಡಾ ಮತ್ತು ಒಂದು ಟೀಚಮಚ ಸಕ್ಕರೆಯನ್ನು ಹಾಕಿ ಮಿಶ್ರಣ ಮಾಡಿ, ಜಿರಳೆಗಳು ಹೆಚ್ಚಾಗಿ ಇರುವ ಪ್ರದೇಶಗಳಲ್ಲಿ ಇರಿಸಿ. ಸಕ್ಕರೆ ಮತ್ತು ಟೊಮೆಟೊದ ವಾಸನೆಗೆ ಈ ಮಿಶ್ರಣದತ್ತ ಬರುವ ಜಿರಳೆಗಳು ಈ ಮಿಶ್ರಣವನ್ನು ತಿಂದು ಸಾಯುತ್ತವೆ.

ಜಿರಳೆಗಳನ್ನು ಓಡಿಸುವ ಇತರೆ ಪರಿಣಾಮಕಾರಿ ಮನೆಮದ್ದುಗಳು:

ನಿಮ್ಮ ಅಡುಗೆಮನೆಯ ಸಿಂಕ್, ಕಪಾಟು ಅಥವಾ ಡ್ರಾಯರ್‌ನಲ್ಲಿ ಕೆಲವು ಪಲಾವ್‌ ಎಲೆಗಳನ್ನು ಇರಿಸಿ. ಅವುಗಳ ವಾಸನೆಯು ಜಿರಳೆಗಳನ್ನು ಓಡಿಸುತ್ತವೆ.
1-2 ಚಮಚ ಬೇವಿನ ಎಣ್ಣೆಯನ್ನು ನೀರಿನೊಂದಿಗೆ ಬೆರೆಸಿ. ಅದನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ ಜಿರಳೆಗಳು ಓಡಾಡಸುವ ಸ್ಥಳದಲ್ಲಿ ಸಿಂಪಡಿಸಿ.
ನಿಮ್ಮ ಅಡುಗೆಮನೆ ಮತ್ತು ಸ್ನಾನಗೃಹದಲ್ಲಿ ಎಲ್ಲೆಡೆ ಕರ್ಪೂರದ ತುಂಡುಗಳನ್ನು ಇರಿಸಿ. ಇದರ ವಾಸನೆಗೆ ಜಿರಳೆಗಳು ಓಡಿ ಹೋಗುತ್ತವೆ.
ನೆಲ ಒರೆಸುವ ನೀರಿಗೆ ಬಿಳಿ ವಿನೆಗರ್ ಮತ್ತು ನಿಂಬೆ ರಸವನ್ನು ಸೇರಿಸಿ, ಆ ನೀರಿನಲ್ಲಿ ನೆಲ ಒರೆಸಿ, ಇದು ಜಿರಳೆಗಳು ಮತ್ತು ಇರುವೆಗಳನ್ನು ಓಡಿಸುತ್ತವೆ. ನೆಲದ ಮೇಲೆ ಅಂಟಿರುವ ಇದು ಬ್ಯಾಕ್ಟೀರಿಯಾಗಳನ್ನು ಸಹ ಕೊಲ್ಲುತ್ತದೆ.

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ ಎಚ್ಚರಿಕೆ

TAGGED:To get rid of cockroaches in your house; mix these two ingredients in tomatoes and keep them there
Share This Article
Facebook Twitter Copy Link Print
Previous Article ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ ಎಚ್ಚರಿಕೆ
Next Article ಕೇರಳಂ ಸಿಎಂ ಆಗಿ ವಿ.ಡಿ.ಸತೀಶನ್ ಪ್ರಮಾಣವಚನ: ವಿಜಯ್‌, ಸಿದ್ದರಾಮಯ್ಯಗೆ ಆಹ್ವಾನ

Popular Posts

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read
ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?