newsics.com/ನ್ಯೂಸಿಕ್ಸ್
ಅಹಮದಾಬಾದ್: ಗುಜರಾತ್‌ನ ಮೋರ್ಬಿಯಲ್ಲಿ ಬಾಡಿಗೆ ಪಾವತಿಸಲು ಸಾಧ್ಯವಾಗದ ಕಾರಣ, ತನ್ನ ಪತ್ನಿ ಮತ್ತು ಅಪ್ರಾಪ್ತ ಮಗಳ ಮೇಲೆ ಪದೇ ಪದೇ ಅತ್ಯಾಚಾರ ಮಾಡಲು ಮನೆ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ಗುಜರಾತ್‌ನ ಸುರೇಂದ್ರನಗರದ ಈ ಕುಟುಂಬವು ಜೀವನೋಪಾಯವನ್ನು ಹುಡುಕುತ್ತಾ ಸುಮಾರು ಆರು ತಿಂಗಳ ಹಿಂದೆ ಮೋರ್ಬಿಗೆ ಸ್ಥಳಾಂತರಗೊಂಡಿತ್ತು.
ಅವರಿಗೆ ಮಾಸಿಕ 2,000 ರೂ. ಬಾಡಿಗೆಯೊಂದಿಗೆ ವಸತಿ ಸಿಕ್ಕಿತ್ತು. ಆದಾಗ್ಯೂ, ಅವರು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸಿದ್ದರ ಪರಿಣಾಮ, ನಾಲ್ಕು ತಿಂಗಳವರೆಗೆ ಮನೆ ಬಾಡಿಗೆ ಬಾಕಿ ಉಳಿದುಕೊಂಡಿತ್ತು.
ಮನೆ ಮಾಲೀಕನ ಒತ್ತಡಕ್ಕೆ ಒಳಗಾದ ಬಾಡಿಗೆದಾರ, ಕೊನೆಗೆ ತನ್ನ ಪತ್ನಿ ಮತ್ತು ಮಗಳ ಮೇಲೆ ಅತ್ಯಾಚಾರ ಮಾಡಲು ಆತನಿಗೆ ಅವಕಾಶ ನೀಡಿದ್ದಾನೆ. ಬಾಕಿ ಇರುವ ಬಾಡಿಗೆ ಮೊತ್ತದ ಬದಲಿಗೆ, ತನ್ನ ಹೆಂಡತಿ ಮತ್ತು ಮಗಳನ್ನು ಲೈಂಗಿಕವಾಗಿ ಬಳಸಿಕೊಳ್ಳುವಂತೆ ಆತ ಮನೆ ಮಾಲೀಕನಿಗೆ ತಿಳಿಸಿದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡಿದೆ.
ಈ ಅಮಾನವೀಯ ಕೃತ್ಯದ ಬಗ್ಗೆ ಈ ವ್ಯಕ್ತಿಯ ಅತ್ತೆಗೆ ತಿಳಿದಾಗ, ಅವರು ಮೋರ್ಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ನಂತರ ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಸೇರಿದಂತೆ ಕಠಿಣ ಕಾನೂನು ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ಇಬ್ಬರೂ ದುರಳುರನ್ನು ಬಂಧಿಸಿದ್ದಾರೆ.
ಅಪ್ರಾಪ್ತ ಬಾಲಕಿಯ ತಂದೆ ಮತ್ತು ಮನೆ ಮಾಲೀಕರು ದೌರ್ಜನ್ಯವನ್ನು ಸಂಘಟಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಆದೇಶ ನೀಡಲಾಗಿದೆ” ಎಂದು ಮೊರ್ಬಿ ಉಪ ಪೊಲೀಸ್ ವರಿಷ್ಠಾಧಿಕಾರಿ ಜೆ.ಎಂ. ಲಾಲ್ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಅಪರಾಧದಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಮೂರನೇ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಘಟನೆಯ ಸುದ್ದಿ ಹೊರಬೀಳುತ್ತಿದ್ದಂತೇ, ಈ ರಾಕ್ಷಸೀ ಕೃತ್ಯ ನಡೆಸಿದ ಇಬ್ಬರೂ ವ್ಯಕ್ತಿಗಳ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಇಬ್ಬರಿಗೂ ಉಗ್ರ ಶಿಕ್ಷೆ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ. ಸದ್ಯ ಪೊಲೀಸರು ನಿರಂತರ ಅತ್ಯಾಚಾರಕ್ಕೊಳಗಾದ ತಾಯಿ ಮತ್ತು ಮಗಳ ಆರೋಗ್ಯ ಪರೀಕ್ಷೆ ನಡೆಸಿದ್ದು, ಅವರ ಸುರಕ್ಷತೆಯನ್ನು ಖಾತರಿಪಡಿಸಿದ್ದಾರೆ.
ಇತ್ತೀಚಿಗೆ ಬೆಂಗಳೂರಿನಲ್ಲಿ ತಂದೆತಾಯಿ ಇಲ್ಲದ ಹೆಣ್ಣುಮಕ್ಕಳನ್ನು ಮಾವನಿಂದಲೇ ದುಡ್ಡಿಗಾಗಿ ಮಾರಾಟ ಮಾಡಿದ ಘಟನೆ ನಡೆದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಈ ಇಬ್ಬರೂ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳನ್ನು ದುಡ್ಡಿಗೆ ಕೊಂಡುಕೊಂಡಿದ್ದ ಇಬ್ಬರೂ ಆರೋಪಿಗಳು, ಅವರ ಮೇಲೆ ಅತ್ಯಾಚಾರ ಎಸಗುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಪೊಲೀಸರು ಮೂವರೂ ಆರೋಪಿಗಳನ್ನು ಬಂಧಿಸಿದ್ದರು.
Relationship- Obstacles to s*ex life ಸುಖಮಯ ಲೈಂಗಿಕ ಜೀವನಕ್ಕೆ ಈ ಅಭ್ಯಾಸಗಳೇ ಅಡ್ಡಿ!