ನಟಿ ತ್ರಿಶಾ ಕೃಷ್ಣನ್ ಮತ್ತೆ ತೀವ್ರ ಚರ್ಚೆಯ ಕೇಂದ್ರಬಿಂದು ಆಗಿದ್ದಾರೆ. ರಾಜಕಾರಣಿ ಹಾಗೂ ಚಿತ್ರನಿರ್ಮಾಪಕರಾದ ಉದಯನಿಧಿ ಸ್ಟಾಲಿನ್ ಅವರು ಬಂಡವಾಳ ಹಾಕುತ್ತಿರುವ ಒಂದು ಚಿತ್ರಕ್ಕೆ ನಾಯಕಿಯಾಗಿ ಅಭಿನಯಿಸಲು ತ್ರಿಶಾ ಕೃಷ್ಣನ್ ಗೆ 12 ಕೋಟಿ ರೂಪಾಯಿ ಆಫರ್ ನೀಡಲಾಗಿದೆ ಎಂದು ವದಂತಿ ತಮಿಳು ನಾಡಿನಲ್ಲಿ ಹಬ್ಬಿದೆ.
ಇದರ ನಡುವೆಯೇ ತ್ರಿಶಾ ಅವರ ಕುರಿತು ಮತ್ತೊಂದು ಅಚ್ಚರಿ ಸುದ್ದಿ ಸದ್ದು ಮಾಡುತ್ತಿದೆ. ಸೂಪರ್ ಸ್ಟಾರ್ ನಟರಾದ ಕಮಲ್ ಹಾಸನ್, ರಜಿನಿಕಾಂತ್ ಬರೋಬ್ಬರಿ 46 ವರ್ಷಗಳ ಬಳಿಕ ಒಟ್ಟಿಗೆ ಸಿನಿಮಾ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ನೆಲ್ಸನ್ ದಿಲೀಪ್ ಕುಮಾರ್ ಅವರು ನಿರ್ದೇಶನ ಮಾಡುತ್ತಿರುವ ಈ ಸಿನಿಮಾಗೆ ತ್ರಿಶಾ ಅವರಿಗೆ ಆಫರ್ ನೀಡಲಾಗಿದೆ. ಇದಕ್ಕಾಗಿ ಬರೋಬ್ಬರಿ 12 ಕೋಟಿ ರೂಪಾಯಿ ರೆಮ್ಯೂನರೇಶನ್ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಈ ಆಫರ್ ಅನ್ನು ತ್ರಿಶಾ ನಿರಾಕರಿಸಿದ್ದಾರೆ ಎಂಬ ವರದಿಗಳನ್ನು ಆಧಾರಿಸಿ ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿವೆ.
ಬಹುತೇಕ ದಶಕಗಳ ಬಳಿಕ ಇಬ್ಬರು ಸೂಪರ್ ಸ್ಟಾರ್ ಗಳು ಒಂದಾಗುತ್ತಿದ್ದು, ಇವರ ಸ್ಟಾರ್ಡಮ್‌ಗೆ ಸೂಕ್ತವಾಗುವಂತೆ ಹೀರೋಯಿನ್ ಗಳನ್ನು ಆಯ್ಕೆ ಮಾಡಿಕೊಳ್ಳಲು ತ್ರಿಶಾ ಅವರಿಗೆ ಆಫರ್ ನೀಡಲಾಗುತ್ತಂತೆ. ಭಾರೀ ರೆಮ್ಯೂನರೇಶನ್ ನೀಡಿದ ಬಳಿಕವೂ ಸಿನಿಮಾಗೆ ನೋ ಎಂದಿರುವುದಕ್ಕೆ ಬಲವಾದ ಕಾರಣವಿದೆಯಂತೆ. ಈ ಸಿನಿಮಾಗೆ ಉದಯನಿಧಿ ಸ್ಟಾಲಿನ್ ಅವರ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿದ್ದು, ತ್ರಿಶಾ ನೋ ಎಂದು ಹೇಳಲು ಇದೆ ಕಾರಣ ಎನ್ನಲಾಗಿದೆ. ಆದರೆ ತ್ರಿಶಾ ಅವರ ಈ ಪ್ರಾಜೆಕ್ಟ್ ನಲ್ಲಿ ನಟಿಸುತ್ತಿದ್ದಾರಾ ಇಲ್ಲವೇ ಎಂಬುವುದರ ಬಗ್ಗೆ ಅಧಿಕೃತ ಘೋಷಣೆ ಆಗಬೇಕಿದೆ.
ಜುವೆಲ್ಲರೀ ಶಾಪ್ ನಲ್ಲಿ ತಿಜೋರಿ ಸಮೇತ 70 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ!