newsics.com
ಲಂಡನ್: ಬ್ರಿಟನ್ ದೇಶದ ವೀರ್ಯಕ್ಕೆ ವಿಶ್ವದೆಲ್ಲೆಡೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಯೂರೋಪ್ ಖಂಡ, ಅದರಾಚೆಗೂ ಬ್ರಿಟನ್ ವೀರ್ಯವೇ ವೈದ್ಯಕೀಯ ಮಾರುಕಟ್ಟೆಯಲ್ಲಿ ನಂಬರ್ 1 ಸ್ಥಾನದಲ್ಲಿದೆ.
ಬ್ರಿಟನ್ ವಿಶ್ವದ ಅತಿ ದೊಡ್ಡ ವೀರ್ಯ ರಫ್ತು ದೇಶವಾಗಿ ಹೊರಹೊಮ್ಮಿದೆ. ವಿಶ್ವದೆಲ್ಲೆಡೆ ಈ ವೀರ್ಯಗಳಿಂದ ಹುಟ್ಟುವ ಮಕ್ಕಳ ಮೂಲ ಇದೀಗ ಬ್ರಿಟನ್ ದೇಶವಾಗುತ್ತಿದೆ.
ಬ್ರಿಟನ್ ವೀರ್ಯ ನಿಯಮದಲ್ಲಿನ ಕೆಲ ಲೋಪಗಳನ್ನೇ ಬಂಡವಾಳ ಮಾಡಿಕೊಂಡಿರುವ ಹಲವರು ವೀರ್ಯವನ್ನು ಸುಲಭವಾಗಿ ನೀಡುತ್ತಿದ್ದಾರೆ. ಇದರ ಪರಿಣಾಮ ಬ್ರಿಟನ್ ಅತೀ ದೊಡ್ಡ ವೀರ್ಯ ರಫ್ತು ಮಾಡುತ್ತಿರುವ ದೇಶ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.
ಬ್ರಿಟನ್ ದೇಶದಲ್ಲಿ ವೀರ್ಯ ದಾನ, ವೀರ್ಯ ನೀಡುವಿಕೆಯಲ್ಲಿ ಕೆಲ ನಿಯಮಗಳಿವೆ. ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದೆ. ಈ ನಿಯಮದ ಪ್ರಕಾರ ಬ್ರಿಟನ್‌ನಲ್ಲಿ ಒಬ್ಬ ವ್ಯಕ್ತಿ 10ಕ್ಕಿಂತ ಹೆಚ್ಟು ಕುಟುಂಬಕ್ಕೆ ವೀರ್ಯ ನೀಡುವಂತಿಲ್ಲ. ಈ ನಿಯಮ ಉಲ್ಲಂಘಿಸಿದರೆ ಕಠಿಣ ಶಿಕ್ಷೆ ಕೂಡ ವಿಧಿಸಲಾಗುತ್ತದೆ. ದುಬಾರಿ ದಂಡವನ್ನು ಹಾಕಲಾಗುತ್ತದೆ.
ಆದರೆ ಬ್ರಿಟನ್ ಪುರುಷರು ಬ್ರಿಟನ್ ದೇಶದೊಳಗೆ 10 ಕುಟುಂಬಕ್ಕೆ ಮಾತ್ರ ನೀಡುತ್ತಿದ್ದಾರೆ. ಆದರೆ ವಿದೇಶ ರಫ್ತಿನಲ್ಲಿ ಈ ನಿಯಮ ಅನ್ವಯವಾಗುತ್ತಿಲ್ಲ. ಹೀಗಾಗಿ ಬ್ರಿಟನ್ ಪುರುಷರು ಯಥೇಚ್ಚವಾಗಿ ವೀರ್ಯ ರಫ್ತು ಮಾಡುತ್ತಿದ್ದಾರೆ.
ಬ್ರಿಟನ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೀರ್ಯ ದಾನ ಮಾಡುತ್ತಿದ್ದಾರೆ. ಹೀಗಾಗಿ ಬ್ರಿಟನ್ ವೀರ್ಯ ರಫ್ತಿನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಹಲವರು ಡಜನ್‌ಗಟ್ಟಲೇ ಕುಟುಂಬಕ್ಕೆ ವೀರ್ಯ ನೀಡಿದ್ದಾರೆ ಎಂದು ಗಾರ್ಡಿಯನ್ ವರದಿ ಮಾಡಿದೆ.
ವೀರ್ಯ ರಫ್ತು ಮಾಡುತ್ತಿರುವವರ ಸಂಖ್ಯೆ ದುಪ್ಪಟ್ಟಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಬ್ರಿಟನ್ ಮಾನ ಫಲೀಕರಣ ಹಾಗೂ ಭ್ರೂಣಶಾಸ್ತ್ರ ಪ್ರಾಧಿಕಾರ(HFEA), ವಿದೇಶಗಳಿಗೆ ವೀರ್ಯ ರಫ್ತಿನಲ್ಲೂ ನಿಯಂತ್ರಣ ಹೇರಲು ಮುಂದಾಗಿದೆ ಎಂದು ವರದಿ ಹೇಳಿದೆ.
HFEA ಒದಗಿಸಿದ ಮಾಹಿತಿಯ ಪ್ರಕಾರ, 2019-21 ರಿಂದ 7,542 ವೀರ್ಯದ ಸ್ಟ್ರಾಗಳನ್ನು UK ನಿಂದ ರಫ್ತು ಮಾಡಲಾಗಿದೆ (ಒಂದು IVF ಚಕ್ರಕ್ಕೆ ಸಾಮಾನ್ಯವಾಗಿ ಒಂದು ವೀರ್ಯದ ಸ್ಟ್ರಾ ಅಗತ್ಯವಿದೆ).
ಯುರೋಪಿಯನ್ ಸ್ಪರ್ಮ್ ಬ್ಯಾಂಕ್, 90% ರಫ್ತುಗಳನ್ನು ಹೊಂದಿದೆ. ವಿಶ್ವಾದ್ಯಂತ 75 ಕುಟುಂಬಗಳ ದಾನಿಗಳ ಮಿತಿಯನ್ನು ಅನ್ವಯಿಸುತ್ತದೆ ಮತ್ತು ಅದರ ದಾನಿಗಳು ಸರಾಸರಿ 25 ಕುಟುಂಬಗಳಿಗೆ ಸಹಾಯ ಮಾಡುತ್ತಾರೆ ಎಂದು ಅಂದಾಜಿಸಲಾಗಿದೆ.
ಏಪ್ರಿಲ್‌ನಲ್ಲಿ ಮ್ಯಾಂಚೆಸ್ಟರ್‌ನಲ್ಲಿ ವೀರ್ಯ ದಾನ ಘಟಕವನ್ನು ತೆರೆದ ವಿಶ್ವದ ಅತಿದೊಡ್ಡ ವೀರ್ಯ ಮತ್ತು ಮೊಟ್ಟೆಯ ಬ್ಯಾಂಕ್ ಕ್ರಯೋಸ್, ಇದು ವಿಶ್ವಾದ್ಯಂತ ಪ್ರತಿ ದಾನಿಗಳಿಗೆ 25-50 ಕುಟುಂಬಗಳನ್ನು ಗುರಿಪಡಿಸುತ್ತದೆ ಎಂದು ಹೇಳಿದೆ.