newsics.com/ನ್ಯೂಸಿಕ್ಸ್
ತಮಿಳುನಾಡು ರಾಜಕೀಯ ವಲಯದಲ್ಲಿ ನಟ ವಿಜಯ್ ಅವರ ಪ್ರವೇಶದ ನಂತರ ಹೊಸ ಚರ್ಚೆಗಳು, ಹೊಸ ಬದಲಾವಣೆಗಳು ಜೋರಾಗಿವೆ. ವಿಶೇಷವಾಗಿ ಮಿತ್ರ ಪಕ್ಷಗಳ ಬೆಂಬಲ ಪಡೆಯಲು ವಿಜಯ್ ನಾನಾ ಕಸರತ್ತು ನಡೆಸುತ್ತಿದ್ದು, ವಿಸಿಕೆ ಪಕ್ಷದ ಬೆಂಬಲದ ವಿಚಾರ ಹೆಚ್ಚು ಗಮನ ಸೆಳೆದಿದೆ.
ಈಗಾಗಲೇ ವಿಸಿಕೆ ಶಾಸಕರ ಬೆಂಬಲ ವಿಜಯ್ ಕಡೆ ಇರುವ ಸಾಧ್ಯತೆಗಳು ಗಟ್ಟಿಯಾಗಿರುವುದಾಗಿ ರಾಜಕೀಯ ವಲಯದಲ್ಲಿ ಮಾತು ಕೇಳಿಬರುತ್ತಿದೆ.
ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ವಿಸಿಕೆ ಬೆಂಬಲದೊಂದಿಗೆ ಸರ್ಕಾರ ರಚಿಸಲು ಬೇಕಾದ 118 ಸ್ಥಾನಗಳ ಮ್ಯಾಜಿಕ್ ನಂಬರ್ ತಲುಪಿದೆ. ಈ ಮೂಲಕ ತಮಿಳುನಾಡಿನಲ್ಲಿ 62 ವರ್ಷಗಳ ದ್ರಾವಿಡ ಪಕ್ಷಗಳ ಆಡಳಿತಕ್ಕೆ ತೆರೆಬಿದ್ದಿದ್ದು, ಮೊದಲ ಬಾರಿಗೆ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.
ಸತತ ಮೂರು ದಿನಗಳಿಂದ ತಮಿಳುನಾಡು ರಾಜಕೀಯದಲ್ಲಿ ಮನೆಮಾಡಿದ್ದ ಅನಿಶ್ಚಿತತೆ ಕೊನೆಗೂ ಅಂತ್ಯವಾಗಿದೆ. ಸೂಪರ್‌ಸ್ಟಾರ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 118ನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ವಿಸಿಕೆ (VCK) ಪಕ್ಷವು ವಿಜಯ್‌ಗೆ ಬೇಷರತ್ ಬೆಂಬಲ ಘೋಷಿಸುವುದರೊಂದಿಗೆ, ತಮಿಳುನಾಡಿನಲ್ಲಿ ಮೊದಲ ಬಾರಿಗೆ ‘ಮೈತ್ರಿ ಸರ್ಕಾರ’ ಅಸ್ತಿತ್ವಕ್ಕೆ ಬರಲಿರುವುದು ದೃಢಪಟ್ಟಿದೆ.
ತಮಿಳುನಾಡು ವಿಧಾನಸಭೆಯ ಒಟ್ಟು 234 ಸ್ಥಾನಗಳಲ್ಲಿ ಬಹುಮತಕ್ಕೆ 118 ಶಾಸಕರ ಅಗತ್ಯವಿತ್ತು. ವಿಜಯ್ ಮೈತ್ರಿಕೂಟವು ಈ ಮೊದಲು 116 ಶಾಸಕರ (ಟಿವಿಕೆ 107, ಕಾಂಗ್ರೆಸ್ 5, ಎಡಪಕ್ಷಗಳು 4) ಬಲ ಹೊಂದಿತ್ತು. ಈಗ ವಿಸಿಕೆಯ ಇಬ್ಬರು ಶಾಸಕರು ಬೆಂಬಲ ಸೂಚಿಸಿರುವುದರಿಂದ ಮೈತ್ರಿಕೂಟದ ಸಂಖ್ಯಾಬಲ 118ಕ್ಕೆ ಏರಿಕೆಯಾಗಿದ್ದು, ಬಹುಮತದ ಗಡಿಯನ್ನು ತಲುಪಿದೆ.
ವಿಸಿಕೆ ಶಾಸಕಾಂಗ ಪಕ್ಷದ ನಾಯಕ ವನ್ನಿ ಅರಸು ಅವರು ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರಿಗೆ ಪತ್ರ ಬರೆದಿದ್ದು, “ತಮಿಳುನಾಡಿನಲ್ಲಿ ಸ್ಥಿರ ಮತ್ತು ಪ್ರಜಾಪ್ರಭುತ್ವ ಸರ್ಕಾರವನ್ನು ಖಚಿತಪಡಿಸುವ ಹಿತದೃಷ್ಟಿಯಿಂದ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆಗೆ ನಮ್ಮ ಇಬ್ಬರು ಶಾಸಕರು ಬೇಷರತ್ ಬೆಂಬಲ ನೀಡುತ್ತಿದ್ದಾರೆ,” ಎಂದು ತಿಳಿಸಿದ್ದಾರೆ.
ಬುಧವಾರದಿಂದಲೇ ವಿಜಯ್ ಹಲವು ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ್ದರೂ, ಸಂಖ್ಯಾಬಲದ ಲಿಖಿತ ದಾಖಲೆ ನೀಡದ ಕಾರಣ ಸರ್ಕಾರ ರಚಿಸಲು ಆಹ್ವಾನ ಸಿಕ್ಕಿರಲಿಲ್ಲ. ವಿಸಿಕೆ ನೀಡುತ್ತಿದ್ದ ಪರಸ್ಪರ ವಿರೋಧಿ ಹೇಳಿಕೆಗಳಿಂದಾಗಿ ವಿಜಯ್ ಅವರ ರಾಜಕೀಯ ಭವಿಷ್ಯ ಅತಂತ್ರವಾಗಿತ್ತು. ಆದರೆ ಶನಿವಾರ ಮಧ್ಯಾಹ್ನ ವಿಸಿಕೆ ಮುಖ್ಯಸ್ಥ ತಿರುಮಾವಳವನ್ ಅವರು ಬೆಂಬಲ ಪತ್ರವನ್ನು ಹಸ್ತಾಂತರಿಸುವುದರೊಂದಿಗೆ ಎಲ್ಲಾ ಗೊಂದಲಗಳು ಬಗೆಹರಿದಿವೆ.
ಕೇವಲ ಎರಡು ವರ್ಷಗಳ ಹಿಂದೆ ಪಕ್ಷ ಸ್ಥಾಪಿಸಿದ್ದ ವಿಜಯ್, ಈ ಚುನಾವಣೆಯಲ್ಲಿ 108 ಸ್ಥಾನಗಳನ್ನು (ವಿಜಯ್ ಎರಡು ಕ್ಷೇತ್ರಗಳಲ್ಲಿ ಗೆದ್ದಿರುವುದರಿಂದ ಪ್ರಸ್ತುತ 107 ಶಾಸಕರು) ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ 62 ವರ್ಷಗಳ ಸುದೀರ್ಘ ಆಡಳಿತದ ಏಕಸ್ವಾಮ್ಯವನ್ನು ಮುರಿದು ಇತಿಹಾಸ ಸೃಷ್ಟಿಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಡಿಎಂಕೆ 59, ಎಐಎಡಿಎಂಕೆ 47, ಕಾಂಗ್ರೆಸ್ 5, ಪಿಎಂಕೆ 4 ಸ್ಥಾನಗಳನ್ನು ಗೆದ್ದಿವೆ. ವಿಸಿಕೆ, ಎಡಪಕ್ಷಗಳು ಮತ್ತು ಐಯುಎಂಎಲ್ ತಲಾ 2 ಸ್ಥಾನಗಳನ್ನು ಪಡೆದಿದ್ದರೆ, ಬಿಜೆಪಿ, ಡಿಎಂಡಿಕೆ ಮತ್ತು ಎಎಮ್‌ಎಂಕೆ ತಲಾ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿವೆ.
ಎಡಪಕ್ಷಗಳು ವಿಜಯ್ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಲು ನಿರ್ಧರಿಸಿದ್ದು, ಸಂಪುಟ ಸೇರದಿರಲು ತೀರ್ಮಾನಿಸಿವೆ. ಆದರೆ, ಬೆಂಬಲ ನೀಡಿರುವ ಕಾಂಗ್ರೆಸ್ ಎರಡು ಸಚಿವ ಸ್ಥಾನಗಳ ನಿರೀಕ್ಷೆಯಲ್ಲಿದೆ ಎನ್ನಲಾಗಿದೆ. ಇದೇ ವೇಳೆ ಎಐಎಡಿಎಂಕೆಯ ಮೂವರು ಶಾಸಕರು ಬಂಡಾಯವೆದ್ದು ಟಿವಿಕೆ ಸೇರುವ ಸಾಧ್ಯತೆ ಇರುವುದು ದ್ರಾವಿಡ ಪಕ್ಷಗಳಿಗೆ ಮತ್ತೊಂದು ಆಘಾತ ನೀಡಿದೆ
ವಿಜಯ್ ಅವರ ಟಿವಿಕೆ ಪಕ್ಷದ ಅಧ್ಯಕ್ಷರಾಗಿರುವ ಕಾರಣ, ಅವರು ರಾಜಕೀಯವಾಗಿ ಮುಂದಿನ ಹಂತಕ್ಕೆ ಹೋಗುವುದು ಖಚಿತವಾಗಿದೆ ಎಂದು ಕಾಣುತ್ತಿದೆ. ಈ ಬೆನ್ನಲ್ಲೇ ಬಹಳ ಇಕ್ಕಟ್ಟಿಗೆ ಕಾರಣವಾಗಿದ್ದ ವಿಸಿಕೆ ಕೂಡ ಬೆಂಬಲ ನೀಡಲು ಒಪ್ಪಿದೆ ಎಂದು ಹೇಳಲಾಗಿದೆ.
ವಿಜಯ್‌ಗೆ ಬೆಂಬಲ ಸೂಚಿಸಲು ಒಪ್ಪಿದ ವಿಸಿಕೆ
ನಟ ಮತ್ತು ಟಿವಿಕೆ ಪಕ್ಷದ ನಾಯಕ ವಿಜಯ್ ಅವರು ಚೆನ್ನೈಯಲ್ಲಿರುವ ವಿಸಿಕೆ ಕಚೇರಿಗೆ ಶೀಘ್ರದಲ್ಲೇ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ವಿಜಯ್ ಕಚೇರಿಗೆ ಬಂದ ಕೂಡಲೇ ವಿಸಿಕೆ ನಾಯಕ ತಿರುಮಾವಳವನ್ ತಮ್ಮ ಬೆಂಬಲವನ್ನು ಅಧಿಕೃತವಾಗಿ ಘೋಷಿಸುವ ನಿರೀಕ್ಷೆ ಇದೆ. ಈಗಾಗಲೇ ಆಂತರಿಕವಾಗಿ ವಿಸಿಕೆ ನಾಯಕರ ನಡುವೆ ಈ ಬಗ್ಗೆ ಚರ್ಚೆಗಳು ಪೂರ್ಣಗೊಂಡಿದ್ದು, ವಿಜಯ್ ಪರ ಬೆಂಬಲ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.
ರಾಜ್ಯಪಾಲರಿಗೆ ಬೆಂಬಲ ಪತ್ರ ನೀಡಲು ಸಿದ್ಧತೆ
ವಿಸಿಕೆ ಶಾಸಕರಿಂದ ಬೆಂಬಲ ಪತ್ರವನ್ನು ಪಡೆದು, ಅದನ್ನು ರಾಜ್ಯಪಾಲರಿಗೆ ಸಲ್ಲಿಸುವ ಸಿದ್ಧತೆಗಳು ಕೂಡ ನಡೆಯುತ್ತಿವೆ. ವಿಸಿಕೆ ನಾಯಕರ ಪರವಾಗಿ, ಟಿವಿಕೆ ಪಕ್ಷದ ಪ್ರತಿನಿಧಿಗಳು ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿ ಮಾಡಿ, ತಮ್ಮ ಬೆಂಬಲದ ಬಗ್ಗೆ ತಿಳಿಸಲು ಮನವಿ ಸಲ್ಲಿಸಿದ್ದಾರೆ. ಈ ಮನವಿಯ ಮೇರೆಗೆ ಗವರ್ನರ್ ಕೂಡ ಪರಿಸ್ಥಿತಿಯನ್ನು ಗಮನಿಸಿ, ಮುಂದಿನ ಬೆಳವಣಿಗೆಗಾಗಿ ಕಾದು ನೋಡುತ್ತಿರುವಂತಿದೆ. ವಿಜಯ್ ಅವರು ಅಧಿಕೃತವಾಗಿ ಭೇಟಿ ನೀಡಿ ಮಾತನಾಡುವವರೆಗೆ ವಿಸಿಕೆ ಪಕ್ಷ ಮೌನ ನೀತಿ ಅನುಸರಿಸುತ್ತಿದೆ. ಆದರೆ ವಿಜಯ್ ಆಗಮನದ ಬಳಿಕ ವಿಸಿಕೆ ಶಾಸಕರ ಬೆಂಬಲವನ್ನು ಸಾರ್ವಜನಿಕವಾಗಿ ಘೋಷಿಸುವುದಾಗಿ ಪಕ್ಷದ ಮೂಲಗಳು ಸೂಚಿಸುತ್ತಿವೆ. ಇದರಿಂದ ವಿಜಯ್ ರಾಜಕೀಯವಾಗಿ ಬಲಿಷ್ಠ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.
ದಳಪತಿ ಸರ್ಕಾರದಲ್ಲಿ ಇಬ್ಬರು ಡಿಸಿಎಂ?
ಇದೇ ಸಂದರ್ಭದಲ್ಲಿ, ವಿಜಯ್ ಸರ್ಕಾರ ರಚನೆಯಾದರೆ ಎರಡು ಉಪಮುಖ್ಯಮಂತ್ರಿಗಳ (ಡಿಸಿಎಂ) ಹುದ್ದೆಗಳನ್ನು ಸೃಷ್ಟಿಸುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. 1 ಡಿಸಿಎಂ ಹುದ್ದೆ ಕಾಂಗ್ರೆಸ್ ಪಕ್ಷದ ಪಾಲಾಗುವ ಸಾಧ್ಯತೆ ಇದ್ದರೆ, ಮತ್ತೊಂದು ಡಿಸಿಎಂ ಹುದ್ದೆ ವಿಸಿಕೆ ಪಕ್ಷದ ನಾಯಕರಿಗೆ ನೀಡುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರಿಂದ ಒಕ್ಕೂಟ ಸರ್ಕಾರದೊಳಗೆ ಎಲ್ಲಾ ಪ್ರಮುಖ ಮೈತ್ರಿ ಪಕ್ಷಗಳಿಗೆ ಸಮಸ್ಥಾನಮಾನ ನೀಡುವ ಉದ್ದೇಶ ವಿಜಯ್ ಕಡೆ ಇದೆ ಎಂಬ ಮಾತು ಹೊರ ಬೀಳುತ್ತದೆ.
ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್ ಕೊಟ್ಟ ಸುವೇಂದು