Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಮಮತಾ ಬ್ಯಾನರ್ಜಿಗೆ ಬಿಗ್​ ಶಾಕ್​​ ಕೊಟ್ಟ ಸುವೇಂದು
ಪ್ರಮುಖ

ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಮಮತಾ ಬ್ಯಾನರ್ಜಿಗೆ ಬಿಗ್​ ಶಾಕ್​​ ಕೊಟ್ಟ ಸುವೇಂದು

Share
3 Min Read
SHARE

newsics.com/ನ್ಯೂಸಿಕ್ಸ್

ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಸುವೇಂದು ಅಧಿಕಾರಿ ಅಧಿಕಾರ ವಹಿಸಿಕೊಂಡಿದ್ದಾರೆ.ಈ ಬೆನ್ನಲ್ಲೇ ಬಂಗಾಳದ ಚಿತ್ರಣ ಸಂಪೂರ್ಣ ಬದಲಾಗಿದ್ದು, ಮಮತಾ ಬ್ಯಾನರ್ಜಿ ಶಾಕ್​ ಆಗಿದ್ದಾರೆ.

ವಿಶೇಷವಾಗಿ ಕೋಲ್ಕತ್ತಾ ನಗರ ಪೊಲೀಸರು ನಡೆಸುತ್ತಿರುವ ಕ್ರಮಗಳು ಸಾಕಷ್ಟು ಚರ್ಚೆಗೆ ಕಾರಣವಾಗಿವೆ. ಇದರಿಂದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಶಾಕ್​​ ಆಗಿದ್ದಾರೆ. ಇದ್ದಕ್ಕಿದ್ದಂತೆ ಈ ಬದಲಾವಣೆ ಕಂಡು ಆಘಾತಕ್ಕೊಳಗಾಗಿದ್ದಾರೆ.

ಬಂಗಾಳದಲ್ಲಿ ಕೇಸರಿ ಕಲರವ, ಮಮತಾ ಶಾಕ್​!

ಸುವೇಂದು ಅಧಿಕಾರ ವಹಿಸಿಕೊಂಡ ನಂತರ, ಬಂಗಾಳದಲ್ಲಿ ಕೇಸರಿ ಕಲರವ ಜೋರಾಗಿದೆ. ಸುವೇಂದು ಅಧಿಕಾರಿ ಇನ್ನುಮುಂದೆ ಬಂಗಾಳದ ಸಿಎಂ ಆಗಿ ಆಳ್ವಿಕೆ ಮಾಡಲಿದ್ದಾರೆ. ಇಂದು ಪ್ರಮಾಣವಚನ ಸ್ವೀಕರಿಸಿದ್ದು, ಹೊಸ ಸರ್ಕಾರ ರಚನೆ ಮಾಡುತ್ತಿದ್ದಾರೆ, ಇದರಿಂದ ಬಂಗಾಳದಲ್ಲಿ ಸಂಪೂರ್ಣ ಚಿತ್ರಣ ಬದಲಾಗಿದೆ. ಟಿಎಂಸಿ ನೆಲಕಚ್ಚಿದೆ, ಜನರಿಗೆ ಮೋದಿ ಮೇಲಿನ ವಿಶ್ವಾಸ ಹೆಚ್ಚಾಗಿದ. ಜೊತೆಗೆ ಕೋಲ್ಕತ್ತಾ ಪೊಲಿಸರಿಗೂ ಈ ಅಭಿಮಾನ ಹೆಚ್ಚಾದಂತೆ ಕಾಣುತ್ತಿದೆ.

ಕೋಲ್ಕತ್ತಾ ಪೊಲೀಸರ ಅಧಿಕೃತ ‘ಎಕ್ಸ್’ ಖಾತೆಯಿಂದ ದೀದಿ ಅನ್​ಫಾಲೋ!

ಕೋಲ್ಕತ್ತಾ ಪೊಲೀಸರ ಅಧಿಕೃತ ‘ಎಕ್ಸ್’ (ಹಳೆಯ ಟ್ವಿಟರ್) ಖಾತೆಯಲ್ಲೊಂದು ಸಾಂಕೇತಿಕ ಬದಲಾವಣೆ ನಡೆದಿದೆ. ಈ ಡಿಜಿಟಲ್ ಬದಲಾವಣೆಯನ್ನು ಹಲವರು ರಾಜಕೀಯ ಸಂದೇಶವೆಂದು ನೋಡುತ್ತಿದ್ದಾರೆ. ಮೊದಲು ಈ ಖಾತೆಯು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಕೆಲ ಪ್ರಮುಖ ಟಿಎಂಸಿ ನಾಯಕರನ್ನು ಫಾಲೋ ಮಾಡುತ್ತಿತ್ತು. ಈಗ ಆ ಖಾತೆಯಿಂದ ಅವರುಗಳನ್ನು ಅನ್‌ಫಾಲೋ ಮಾಡಲಾಗಿದೆ ಎಂದು ವರದಿಯಾಗಿದೆ.

ಸಾಮಾನ್ಯವಾಗಿ ಪೊಲೀಸ್ ಇಲಾಖೆ ಅಥವಾ ಸರ್ಕಾರಿ ಅಧಿಕೃತ ಖಾತೆಗಳು ಎಲ್ಲ ಪಕ್ಷಗಳಿಗೂ ಸಮಾನ ಅಂತರದಲ್ಲಿರುವಂತೆ ನಡೆದುಕೊಳ್ಳಬೇಕು ಎನ್ನುವ ನಿರೀಕ್ಷೆ ಇರುತ್ತದೆ. ಆದರೆ ಅಧಿಕಾರ ಬದಲಾದ ತಕ್ಷಣ ಈ ರೀತಿಯ ಅನ್‌ಫಾಲೋ ಕ್ರಮ ನಡೆದಿರುವುದು, ಹೊಸ ರಾಜಕೀಯ ವಾತಾವರಣಕ್ಕೆ ಹೊಂದಿಕೊಳ್ಳುವ ಪ್ರಯತ್ನವೆಂದು ಕಾಣಲಾಗುತ್ತಿದೆ. ಇದು ಕೇವಲ ಸಾಮಾಜಿಕ ಜಾಲತಾಣದ ಬದಲಾವಣೆ ಮಾತ್ರವಲ್ಲ, ರಾಜ್ಯದ ಆಡಳಿತ ನೀತಿಯಲ್ಲಿ ನಡೆಯುತ್ತಿರುವ ಬದಲಾವಣೆಯನ್ನೂ ಸೂಚಿಸುತ್ತದೆ.

ಮೋದಿ, ಅಮಿತ್​ ಶಾ, ಬಿಜೆಪಿ ನಾಯಕರಿಗೆ ಫಾಲೋ

ಇದರ ಜೊತೆಗೆ, ಕೋಲ್ಕತ್ತಾ ಪೊಲೀಸರ ಅಧಿಕೃತ ಎಕ್ಸ್ ಹ್ಯಾಂಡಲ್ ಈಗ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪ್ರಧಾನಿ ಕಚೇರಿ (PMO) ಮತ್ತು ಗೃಹ ಸಚಿವಾಲಯದ ಅಧಿಕೃತ ಖಾತೆಗಳನ್ನು ಫಾಲೋ ಮಾಡಲು ಆರಂಭಿಸಿದೆ. ಇದರಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯದ ಹೊಸ ಆಡಳಿತ ನಡುವಿನ ಸಮನ್ವಯ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಎಂಬ ಅರ್ಥಬಂದಿದೆ.

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ದೀರ್ಘಕಾಲ ಬಂಗಾಳದಲ್ಲಿ ಅಧಿಕಾರದಲ್ಲಿತ್ತು. ಆ ಅವಧಿಯಲ್ಲಿ ಟಿಎಂಸಿ ಪ್ರಧಾನ ಕಚೇರಿ, ಪಕ್ಷದ ಪ್ರಮುಖ ನಾಯಕರು ಮತ್ತು ಅವರ ಮನೆಗಳಿಗೆ ವಿಶೇಷ ಭದ್ರತೆ ಒದಗಿಸಲಾಗುತ್ತಿತ್ತು. ಆದರೆ ಈಗ ಆ ಚಿತ್ರಣವೂ ಬದಲಾಗುತ್ತಿದೆ. ತೃಣಮೂಲ ಕಾಂಗ್ರೆಸ್ ಪ್ರಧಾನ ಕಚೇರಿ ಮತ್ತು ನಗರದಾದ್ಯಂತ ಇರುವ ಹಲವಾರು ನಾಯಕರ ಮನೆಗಳಿಂದ ಹೆಚ್ಚುವರಿ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಗುತ್ತಿದೆ. ಇದನ್ನು ಕೂಡಾ ಹೊಸ ಆಡಳಿತದ ಕಠಿಣ ಸಂದೇಶದಂತೆ ನೋಡಲಾಗುತ್ತಿದೆ.

ಸರ್ಕಾರಿ ವ್ಯವಸ್ಥೆಯಲ್ಲಿಯೂ ಬದಲಾವಣೆ

ರಾಜಕೀಯ ಬದಲಾವಣೆಯ ನಂತರ ಸಾಮಾನ್ಯವಾಗಿ ಸರ್ಕಾರಿ ವ್ಯವಸ್ಥೆಯಲ್ಲಿ ಕೆಲವು ಮಟ್ಟದ ಬದಲಾವಣೆಗಳು ಸರ್ವಸಾಧಾರಣ. ಆದರೆ ಬಂಗಾಳದಂತಹ ರಾಜಕೀಯವಾಗಿ ಸಂವೇದನಶೀಲ ರಾಜ್ಯದಲ್ಲಿ ಈ ಬದಲಾವಣೆಗಳು ಹೆಚ್ಚು ಗಮನ ಸೆಳೆಯುತ್ತವೆ. ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಈಗ ವಿರೋಧ ಪಕ್ಷದ ಪಾತ್ರಕ್ಕೆ ಇಳಿದಿರುವ ಸಂದರ್ಭದಲ್ಲಿ, ಅವರ ಮೇಲೆ ಇರುವ ಸರ್ಕಾರಿ ಅನುಕೂಲತೆಗಳು ಕಡಿಮೆಯಾಗುವುದು ಸಹಜ. ಆದರೆ ಇದು ಎಷ್ಟು ಮಟ್ಟಿಗೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಹೊಂದಿಕೊಳ್ಳುತ್ತದೆ ಎಂಬ ಪ್ರಶ್ನೆ ಕೂಡ ಎದುರಾಗುತ್ತದೆ.

ಮಮತಾ ಬ್ಯಾನರ್ಜಿಗೆ ಶಾಕ್​!

ಕೋಲ್ಕತ್ತಾ ಪೊಲೀಸರ ಎಕ್ಸ್ ಖಾತೆಯ ಈ ಬದಲಾವಣೆಗಳನ್ನು ಕೆಲವರು ಕೇವಲ ತಾಂತ್ರಿಕ ಅಥವಾ ಆಡಳಿತಾತ್ಮಕ ಕ್ರಮವೆಂದು ಹೇಳಬಹುದು, ಆದರೆ ತೃಣಮೂಲ ಬೆಂಬಲಿಗರು ಇದನ್ನು ರಾಜಕೀಯ ಪ್ರತೀಕಾರದ ಭಾಗವೆಂದೂ ಕಾಣಬಹುದು. ಮಮತಾ ಬ್ಯಾನರ್ಜಿ ಅವರಿಗೆ ಇದು ಒಂದು ರೀತಿಯ ಶಾಕ್ ಆಗಿರುವುದು ಸಹಜ, ಏಕೆಂದರೆ ದೀರ್ಘಕಾಲ ಅವರೊಂದಿಗೆ ಇತ್ತಿದ್ದ ವ್ಯವಸ್ಥೆಯು ಈಗ ಹೊಸ ನಾಯಕರತ್ತ ಮುಖ ಮಾಡುತ್ತಿದೆ.

ವಿಜಯಲಕ್ಷ್ಮಿ ದರ್ಶನ್ ವಿಡಿಯೋ ವೈರಲ್ ರೀಲ್ಸ್‌ಗೆ ಭಾರೀ ವ್ಯೂಸ್

TAGGED:Suvendu gave Mamata Banerjee a big shock as she took office.
Share This Article
Facebook Twitter Copy Link Print
Previous Article ವಿವಾಹಿತ ಮಹಿಳೆ ಜತೆ ಲಿವ್-ಇನ್ ಸಂಬಂಧದಲ್ಲಿದ್ದ ಯುವಕ ಅನುಮಾನಾಸ್ಪದವಾಗಿ ಸಾವು
Next Article ನಂಬರ್​​ ಗೇಮ್​​ನಲ್ಲಿ ದಳಪತಿ​ ವಿನ್!​​; ಟಿವಿಕೆ ಸರ್ಕಾರದಲ್ಲಿ ಇಬ್ಬರು ಡಿಸಿಎಂ?

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?