Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ದಳಪತಿ ಪತ್ನಿ ಸಂಗೀತಾ ಮಿಸ್ಸಿಂಗ್​? 500 ಕೋಟಿ ಒಡತಿ ಹೋಗಿದ್ದೆಲ್ಲಿ?
ಪ್ರಮುಖಮನರಂಜನೆ

ದಳಪತಿ ಪತ್ನಿ ಸಂಗೀತಾ ಮಿಸ್ಸಿಂಗ್​? 500 ಕೋಟಿ ಒಡತಿ ಹೋಗಿದ್ದೆಲ್ಲಿ?

Share
2 Min Read
SHARE

newsics.com/ನ್ಯೂಸಿಕ್ಸ್

ದಳಪತಿ ವಿಜಯ್​ ಅವರು ಈಗ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಹಿಡಿಯಲಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಇವರ ಹೆಸರು ಬಂದಾಗಲೆಲ್ಲಾ ಇವರ ಜೊತೆ ನಟಿ ತ್ರಿಷಾ ಹೆಸರು ಥಳಕು ಹಾಕಿಕೊಳ್ಳುತ್ತಿದೆ.
ಇದಾಗಲೇ ವಿಜಯ್​ ಅವರ ವೋಟಿಂಗ್​ ರಿಸಲ್ಟ್​ ಬರುತ್ತಲೇ ತ್ರಿಷಾ ಅವರ ಮನೆಗೆ ಓಡೋಡಿ ಬಂದು ಸುದ್ದಿ ಮಾಡಿದ್ದರು. ಅಷ್ಟಕ್ಕೂ ಮೇ 4 ತ್ರಿಷಾ ಅವರ ಹುಟ್ಟುಹಬ್ಬದಂದೇ ದಳಪತಿ ಅವರಿಗೆ ವಿಜಯದ ಮಾಲೆ ಕೊರಳಿಗೆ ಬಿದ್ದಿತ್ತು. ಆದರೆ ಇವುಗಳ ನಡುವೆಯೇ ಇದೀಗ ವಿಜಯ್​ ಅವರ ಪತ್ನಿ ಸಂಗೀತಾ ಎಲ್ಲಿ ಹೋದರು ಎನ್ನುವ ಮಾತುಗಳು ಕೇಳಿಬರುತ್ತಿವೆ.

 

ಡಿವೋರ್ಸ್​ ಪ್ರಕರಣ

ಅಷ್ಟಕ್ಕೂ ದಳಪತಿ ವಿಜಯ್ (Thalapathy Vijay divorce c ase) ಮತ್ತು ಅವರ ಪತ್ನಿ ಸಂಗೀತಾ ಸೊರ್ನಲಿಂಗಂ ನಡುವಿನ ವಿಚ್ಛೇದನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ವಿಜಯ್ ಅವರ ವಿವಾಹೇತರ ಸಂಬಂಧಗಳು ಮತ್ತು ಗಂಭೀರ ವೈವಾಹಿಕ ಸಮಸ್ಯೆಗಳ ಆರೋಪ ಹೊರಿಸಿ ಸಂಗೀತಾ ಇತ್ತೀಚೆಗೆ ಚೆಂಗಲ್ಪಟ್ಟು ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿ ಸದ್ದು ಮಾಡಿದ್ದಾರೆ. ಆದರೆ ಇದೀಗ ಅವರ ಈ ಕೇಸ್​ಗೆ ಭಾರಿ ಟ್ವಿಸ್ಟ್​ ಸಿಕ್ಕಿತ್ತು. ಫೆಬ್ರವರಿ 24 ರಂದು ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಸಂಗೀತಾ ಅವರು ಕೇಸ್ ದಾಖಲಿಸಿದ್ದರು. ಕೋರ್ಟ್​ ಆದೇಶದ ಪ್ರಕಾರ ಇವತ್ತು (ಏಪ್ರಿಲ್ 20) ವಿಚಾರಣೆ ವೇಳೆ ಇಬ್ಬರೂ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಬೇಕಿತ್ತು. ರಾಜಕೀಯ ಚುನಾವಣೆ ಮತ್ತು ಭದ್ರತಾ ಕಾರಣಗಳಿಂದಾಗಿ ವಿಜಯ್ ಅವರು ಖುದ್ದಾಗಿ ಕೋರ್ಟ್‌ಗೆ ಬರಲು ಸಾಧ್ಯವಾಗಲಿಲ್ಲ. ಆದರೆ ಕೇಸ್​ ಕುತೂಹಲದ ತಿರುವು ಪಡೆದುಕೊಂಡಿದೆ.

ಪರಸ್ಪರ ಕಾದಾಟ

ಅದೇನೆಂದರೆ, ಇಲ್ಲಿಯವರೆಗೆ ಇಬ್ಬರೂ ಪರಸ್ಪರ ಕಾದಾಟ ನಡೆಸಿದ್ದರು. ಆದರೆ ಇದೀಗ ವಿಜಯ್ ಮತ್ತು ಸಂಗೀತಾ ಇಬ್ಬರೂ ಸೇರಿ ಒಂದು ಹೊಸ ಜಂಟಿ ಅರ್ಜಿ (Joint Petition) ಸಲ್ಲಿಸಿದ್ದಾರೆ. ಪರಸ್ಪರ ಒಪ್ಪಿಗೆಯೊಂದಿಗೆ ನಾವು ಬೇರೆಯಾಗಲು ನಿರ್ಧರಿಸಿದ್ದೇವೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಇದರೊಂದಿಗೆ ಇಷ್ಟು ದಿನ ನಡೆಯುತ್ತಿದ್ದ ವಾದ-ಪ್ರತಿವಾದಗಳಿಗೆ ಫುಲ್ ಸ್ಟಾಪ್ ಇಟ್ಟಂತಾಗಿದ್ದು, ನ್ಯಾಯಾಧೀಶರು ಪ್ರಕರಣವನ್ನು ಜೂನ್ 15 ಕ್ಕೆ ಮುಂದೂಡಿದ್ದಾರೆ. ಇಂದು ಸಲ್ಲಿಸಿದ್ದ ಅರ್ಜಿಯಲ್ಲಿ, ಚುನಾವಣಾ ಕೆಲಸದ ಕಾರಣದಿಂದಾಗಿ ವಿಜಯ್ ವೈಯಕ್ತಿಕವಾಗಿ ಹಾಜರಾಗಲು ಸಾಧ್ಯವಿಲ್ಲ ಮತ್ತು ವೀಡಿಯೊ ಕಾನ್ಫರೆನ್ಸ್ ಮೂಲಕ ಈ ವಿಷಯವನ್ನು ಆಲಿಸಲು ಅವಕಾಶ ನೀಡಬೇಕೆಂದು ಕೋರಿದ್ದರು ವಿಜಯ್​. ಆದರೆ ಅದನ್ನು ಸದ್ಯ ಕೋರ್ಟ್​ ಒಪ್ಪದೇ ಇಬ್ಬರ ಮ್ಯೂಚುವಲ್​ ಪಿಟಿಷನ್​ ಕೇಸ್​​ ಅನ್ನು ಜೂನ್ 15 ಕ್ಕೆ ಮುಂದೂಡಿದ್ದು, ಅಂದು ಇಬ್ಬರ ಹಾಜರಿ ಅವಶ್ಯ ಎಂದಿದೆ ಕೋರ್ಟ್​.

ಸಂಗೀತಾ ಎಲ್ಲಿ?

ಆದರೆ ಇದರ ನಡುವೆಯೇ ಇದೀಗ ಸಂಗೀತಾ ಎಲ್ಲಿ ಎನ್ನುವ ಸಂಶಯ ಕಾಡುತ್ತಿದೆ. ಅಷ್ಟಕ್ಕೂ ಸಂಗೀತಾ ಅವರು ಸುಮಾರು 500 ಕೋಟಿ ರೂಪಾಯಿಗಳ ಒಡತಿಯಾಗಿದ್ದಾರೆ. ಶ್ರೀಲಂಕಾದ ತಮಿಳು ಕುಟುಂಬಕ್ಕೆ ಸೇರಿದ ಇವರು ಲಂಡನ್‌ನಲ್ಲಿ ಬೆಳೆದವರು. ಸದ್ಯ ಇವರು ಲಂಡನ್‌ನಲ್ಲಿ ನೆಲೆಸಿದ್ದು, ವಿಚ್ಛೇದನ ಪ್ರಕ್ರಿಯೆಗಳ ನಡುವೆ ತಮ್ಮ ಕುಟುಂಬದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ವಿಜಯ್ ಅವರು ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ಆಗಿ ಬೆಳೆದರೂ, ಸಂಗೀತಾ ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಲಂಡನ್‌ನಲ್ಲಿಯೇ ಉಳಿದರು. ಇತ್ತೀಚೆಗೆ 25 ವರ್ಷಗಳ ದಾಂಪತ್ಯ ಜೀವನದ ನಂತರ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವಿಜಯ್ ಅವರ ರಾಜಕೀಯ ಯಶಸ್ಸಿನ ನಡುವೆಯೂ, ಸಂಗೀತಾ ಲಂಡನ್‌ನಲ್ಲಿಯೇ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಅವರ ಮೊದಲ ರಿಯಾಕ್ಷನ್​ ಹೇಗಿರಬಹುದು ಎಂದು ಜನರು ಕಾದು ಕಾದು ಸುಸ್ತಾಗಿದ್ದಾರೆ. ಆದರೆ ಮಿಸ್ಸಿಂಗ್​ ಆಗಿರೋ ಸಂಗೀತಾ ಸದ್ಯ ಸದ್ದು ಮಾಡುತ್ತಿಲ್ಲ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ “ಸು ಫ್ರಂ ಸೋ’ ಖ್ಯಾತಿಯ ಜೆ.ಪಿ. ತೂಮಿನಾಡು

TAGGED:Dalpati's wife Sangeeta missing? Where did the 500 crore wife go?
Share This Article
Facebook Twitter Copy Link Print
Previous Article ದಾಂಪತ್ಯ ಜೀವನಕ್ಕೆ ಕಾಲಿಟ್ಟ “ಸು ಫ್ರಂ ಸೋ’ ಖ್ಯಾತಿಯ ಜೆ.ಪಿ. ತೂಮಿನಾಡು
Next Article ಅರಣ್ಯ ಸಚಿವರಿಗೆ ಘೇರಾವ್ ಹಾಕಲು ಬಿಜೆಪಿ ಯತ್ನ: ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?