Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > Today’s Horoscope ಇಂದಿನ ರಾಶಿ ಭವಿಷ್ಯ, 06-05-2026, ಬುಧವಾರ, ಹೇಗಿದೆ ನಿಮ್ಮ ಗ್ರಹಗತಿ?
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

Today’s Horoscope ಇಂದಿನ ರಾಶಿ ಭವಿಷ್ಯ, 06-05-2026, ಬುಧವಾರ, ಹೇಗಿದೆ ನಿಮ್ಮ ಗ್ರಹಗತಿ?

Share
4 Min Read
SHARE

newsics.com/ನ್ಯೂಸಿಕ್ಸ್ 

ಶುಭ ದಿನ

ಇಂದಿನ ಪಂಚಾಂಗ/ ರಾಶಿ ಭವಿಷ್ಯ

06-05-2026, ಬುಧವಾರ

ಪರಾಭವ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ವೈಶಾಖ ಮಾಸ ಕೃಷ್ಣ ಪಕ್ಷ ಪಂಚಮಿ.

—

ಶಾಲಿವಾಹನ ಶಕೆ 1949ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಭರಣೀ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಪೂರ್ವಾಷಾಢ, ಯೋಗ : ಸಿದ್ಧ, ಕರಣ : ಕೌಲವ, ಸೂರ್ಯೋದಯ – 06 – 01 am, ಸೂರ್ಯಾಸ್ತ – 06 – 40 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:31 – 17:06, ಯಮಗಂಡ ಕಾಲ 09:11 – 10:46, ಗುಳಿಕ ಕಾಲ 12:21 – 13:56

 

=====

ರಾಶಿ ಭವಿಷ್ಯ

ಮೇಷ

ಸಂಗಾತಿಗೆ ಮಕ್ಕಳ ಆರೋಗ್ಯದ ವಿಷಯದಲ್ಲಿ ಗಮನವಿರಲಿ. ಪಾಲುದಾರರ ಕೈಜೋಡಿಸುವ ಮುನ್ನ ಯೋಚಿಸಿ. ಮಕ್ಕಳಿಂದ ನಿಮಗೆ ಬೆಂಬಲ ಮತ್ತು ಸಂತೋಷ ಸಿಗುತ್ತದೆ. ಮಾಡುವ ಕಾರ್ಯದ ಉದ್ದೇಶ ನಿಮಗೆ ಅರಿವಿಲ್ಲದೇ ಬದಲಾಗುವುದು. ಉತ್ತಮ‌ ಆದಾಯವನ್ನು ಉಳಿಸಿಕೊಳ್ಳಿ. ಎಷ್ಟೇ ತೊಂದರೆಯಾದರೂ ಇನ್ನೊಬ್ಬರಿಗೆ ನೋವನ್ನು ಕೊಡುವುದು ಇಷ್ಟವಾಗದು. ಕೇಳಿದವರಿಗೆ ನಿಮ್ಮ ಸಹಾಯವು ಸಿಗಲಿದೆ.

ವೃಷಭ 

ನಿಮ್ಮ ಸಾಮರ್ಥ್ಯವನ್ನು ವ್ಯಕ್ತಪಡಿಸಲು ಸಕಾಲ. ಅಹಂಕಾರದಿಂದ ವರ್ತಿಸಿ ಮನೆಯವರಿಂದ ನಿಂದನೆ. ನೀವು ಸಾಲವಾಗಿ ನೀಡಿದ ಹಣವನ್ನು ಮರಳಿ ಪಡೆಯುವ ಮೂಲಕ ನಿಮ್ಮ ಹಣದ ಸಮಸ್ಯೆ ಬಗೆಹರಿಯುತ್ತದೆ. ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳಿ. ಸಮಾಜಮುಖಿಯಾಗಿ ನಿಮ್ಮ ಕಾರ್ಯಗಳು ಹೆಚ್ಚು ಪ್ರಬಲವಾಗಬಹುದು. ವಿವಾಹಕ್ಕೆ ಸಂಬಂಧಿಸಿದ ದೋಷಗಳನ್ನು ದೈವಜ್ಞರ ಬಳಿ ಕೇಳಿ ಸರಿಪಡಿಸಿಕೊಳ್ಳಿ.

ಮಿಥುನ 

ಇಂದು ಅತಿಯಾದ ಪ್ರಶಂಸೆ ನಿಮ್ಮನ್ನು ಹಾಳುಮಾಡುವುದು. ಅತಿಥಿಗಳ ಆಗಮನದಿಂದ ಮನೆಯ ವಾತಾವರಣ ಆಹ್ಲಾದಕರವಾಗಿರುತ್ತದೆ. ಮೊದಲು ವಾದ ಮಾಡಿ ಅನಂತರ ಭಯಗೊಳ್ಳುವಿರಿ. ವಿರೋಧಿಗಳು ಸಕ್ರಿಯರಾಗಿರುತ್ತಾರೆ. ವಿವಾದಾತ್ಮಕ ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಯಂತ್ರಜ್ಞರು ಇಂದು ಬಹಳ ಒತ್ತಡದಿಂದ ಇರುವರು. ಸ್ವಲ್ಪ ಮಾನಸಿಕ ಆಲಸ್ಯವು ಇರುವುದು. ಗೊಂದಲವನ್ನು ಇನ್ನೊಬ್ಬರ ಬಳಿ ಹೇಳಿ.

ಕರ್ಕಾಟಕ 

ಉದ್ಯೋಗದಲ್ಲಿ ಸ್ವಲ್ಪ ಏರಳಿತಗಳನ್ನು ಎದುರಿಸಬೇಕಾದೀತು. ಪ್ರಯತ್ನಗಳು ಇಂದು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ನೀವು ಸಾಲವಾಗಿ ನೀಡಿದ ಅಥವಾ ಸಿಲುಕಿಕೊಂಡಿದ್ದ ಹಣವನ್ನು ಮರಳಿ ಪಡೆಯಬಹುದು. ವಿವಾಹಕ್ಕೆ ಒತ್ತಡ ಅಧಿಕವಾಗಲಿದೆ. ಹೆಚ್ಚು ಒತ್ತಡ ತೆಗೆದುಕೊಂಡು ಓಡಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೊಸ ಜನ, ಹೊಸ ಸ್ಥಳ ಹಾಗೂ ಹೊಸ ವಿಚಾರದ ಕಡೆ ಗಮನವು ಬೇಕೆನಿಸುವುದು. ನಿಮ್ಮ ಯಶಸ್ಸನ್ನು ಮನೆಯವರು ಸಂಭ್ರಮಿಸಬಹುದು.

ಸಿಂಹ 

ಅಪರಿಚಿತ ಸ್ಥಳದಲ್ಲಿ ವಾಸ ಮಾಡಿ ಭಯಪಡುವಿರಿ. ನಿಮ್ಮ ಕನಸುಗಳನ್ನು ನನಸಾಗಿಸುವ ಸಮಯ ಬಂದಿದೆ. ಕೆಲಸವನ್ನು ಸರಿಯಾಗಿ ಮಾಡುವುದು ನಿಮ್ಮನ್ನು ಯಶಸ್ವಿಯಾಗಿಸುತ್ತದೆ. ಭವಿಷ್ಯದ ಬಗ್ಗೆ ಯುವಕರ ಪ್ರಯತ್ನಗಳು ಅಫಲವಾಗುವುದು. ನೀವು ಅಂದುಕೊಂಡಿದ್ದನ್ನೇ ಮಾಡುವ ಛಾತಿ ಇರುವುದು. ಎಲ್ಲವನ್ನೂ ನಂಬಿಕೆಯ ಆಧಾರದ ಮೇಲೆ ಸ್ವೀಕರಿಸಬೇಕಿಲ್ಲ. ಸರ್ಕಾರಿ ಉದ್ಯೋಗಿಗಳಿಗೆ ನಿಮ್ಮ ಚಾತುರ್ಯದ ಕಾರಣದಿಂದ ಹೆಚ್ಚಿನ ಅಧಿಕಾರ ಪ್ರಾಪ್ತಿ

ಕನ್ಯಾ 

ಸಂಗಾತಿಯ ಜೊತೆ ಕಾಲ ಕಳೆದು ಖುಷಿಕೊಡುವಿರಿ. ನೀವು ದೇಹಕ್ಕೆ ಪರಿಮಳ ದ್ರವ್ಯಗಳನ್ನು ಲೇಪಿಸಿಕೊಳ್ಳುವಿರಿ ಹಾಗೂ ಅನೇಕ ವಸ್ತುಗಳನ್ನು ಖರೀದಿಸುವಿರಿ. ಕೆಲಸವನ್ನು ಮಾಡುವ ಮೊದಲು, ಅದರ ಪ್ರತಿಯೊಂದು ಅಂಶದ ಬಗ್ಗೆ ಎಚ್ಚರಿಕೆಯಿಂದ ಯೋಚಿಸಿ. ಇದು ಪ್ರಗತಿಯ ಹೊಸ ಹಾದಿಗಳನ್ನು ತೆರೆಯುತ್ತದೆ. ಬಂಧುಗಳು ನಿಮ್ಮವರ ಬಗ್ಗೆ ಆಡಿಕೊಳ್ಳುವಾಗ ನಿಮಗೆ ಸಹಿಸಲಾಗದು. ನಿಮ್ಮ ಶ್ರಮದ‌ ಸಾಧನೆಯನ್ನು ಇತರರ ಜೊತೆ ಹಂಚಿಕೊಳ್ಳುವಿರಿ.

ತುಲಾ 

ಪರರಿಗೆ ಕೊಟ್ಟ ಧನವು ನಿಮ್ಮ ಕೈ ಸೇರುವುದು. ಸರಳ ಸ್ವಭಾವವು ನಿಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಸುಧಾರಿಸುತ್ತದೆ. ಇಂದು ನೀವು ನಿಮ್ಮ ಗುರಿಯ ಮೇಲೆ ಪೂರ್ಣ ಗಮನ ಹರಿಸಿ ಮುಂದುವರಿಯುತ್ತೀರಿ ಮತ್ತು ಯಶಸ್ಸು ಸಿಗುತ್ತದೆ. ಸೂಕ್ಷ್ಮ ವಿಚಾರಗಳನ್ನು ತಾಳ್ಮೆಯಿಂದ ನಿರ್ವಹಿಸುವುದು ಒಳ್ಳೆಯದು. ಮನೆಯ ನಿರ್ಮಾಣವು ಅಪೂರ್ಣವಾಗಿ ನಿಲ್ಲುವುದು. ಜೀವನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಗಟ್ಟಿಯಾದ ತೀರ್ಮಾನವನ್ನು ಪಡೆಯುವುದು ಕಷ್ಟವಾಗುವುದು.

ವೃಶ್ಚಿಕ 

ಪಾಲುದಾರಿಕೆಯ ವ್ಯವಹಾರಗಳಲ್ಲಿ ಸಂಯಮವಿರಲಿ. ತಪ್ಪು ಕಲ್ಪನೆ ಹೊಂದಿರುವ ಜನರಿಂದ ದೂರವಿರಿ, ದೇವರಲ್ಲಿ ಭಕ್ತಿ ಹೆಚ್ಚಾಗುವುದು. ಅವರ ತಪ್ಪು ಸಲಹೆಯು ನಿಮ್ಮ ಗುರಿಯಿಂದ ನಿಮ್ಮನ್ನು ಬೇರೆಡೆಗೆ ಸೆಳೆಯಬಹುದು. ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೊದಲು ಚಿಂತನಶೀಲವಾಗಿ ಹೆಜ್ಜೆಗಳನ್ನು ಇರಿಸಿ. ಮಾತುಗಾರರಿಗೆ ಒಳ್ಳೆಯ ಅವಕಾಶಗಳು ಸಿಗಲಿದೆ. ದಾಂಪತ್ಯದಲ್ಲಿ ಪರಸ್ಪರ ನೋವು ಹಂಚಿಕೊಂಡು ಸಮಾಧಾನವಾಗುವಿರಿ.

ಧನುಸ್ಸು

ಆರ್ಥಿಕ ಸ್ಥಿತಿಯಿಂದ ಸಂತಸ. ಮನಸ್ತಾಪವನ್ನು ಮುಂದುವರಿಸದೇ ಅರ್ಧಕ್ಕೆ ನಿಲ್ಲಿಸಿ. ಹೆಚ್ಚಿನ ಕೆಲಸದ ಹೊರೆ ಇರುತ್ತದೆ. ಆದರೆ ಬೆಂಬಲ ಸಿಗಲಿದೆ. ಎದುರಾಳಿಗಳ ಮೇಲೆ ಪ್ರಾಬಲ್ಯ ಸಾಧಿಸುವಿರಿ. ಮಧ್ಯಾಹ್ನದ ಸಮಯವು ಅತ್ಯುತ್ತಮವಾಗಿರುತ್ತದೆ. ಆದಾಯ ಹೆಚ್ಚಾಗಬಹುದು ಮತ್ತು ಸಾಕಷ್ಟು ಹಣ ಸಿಗಬಹುದು. ಪ್ರಯಾಣದ ಸಾಧ್ಯತೆ ಇದೆ. ನಿಮ್ಮ ಹಠದ ಸ್ವಭಾವವು ಜೊತೆಗಾರರಿಗೆ ಕಷ್ಟವಾದೀತು. ಯಾರಮೇಲೂ ಒತ್ತಡಬೇಡ.

ಮಕರ 

ಯಾರೋ ಮಾಡಿದ ತಪ್ಪನ್ನು ನಿಮ್ಮ ಮೇಲೆ ಹಾಕಲು ಪ್ರಯತ್ನಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುವಿರಿ. ನೀವಾಡುವ ಮಾತಿನ ಮೇಲೆ ನಂಬಿಕೆ ವಾರದು. ಕೆಲವು ಸಮಯದಿಂದ ಅಡೆತಡೆಗಳನ್ನು ಎದುರಿಸುತ್ತಿದ್ದ ಕೆಲಸಗಳು ಇಂದು ಸುಲಭವಾಗಿ ಪೂರ್ಣಗೊಳ್ಳುತ್ತವೆ. ದೂರ ಪ್ರಯಾಣವನ್ನು ಮಾಡಬೇಕಾಗಬಹುದು. ಸ್ಥಿರಾಸ್ತಿಗಾಗಿ ಹೆಚ್ಚು ಓಡಾಡುವಿರಿ. ವಿದೇಶ ಪ್ರಯಾಣವು ನಿಮಗೆ ಇಷ್ಟವಿಲ್ಲದಿದ್ದರೂ ಮಾಡುವುದು ಅನಿವಾರ್ಯವಾದೀತು.

ಕುಂಭ 

ಆರೋಗ್ಯದಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಾಸವಾಗಬಹುದು. ಹಸ್ತಕ್ಷೇಪ ಮಾಡಬೇಡಿ ಮತ್ತು ಪರಿಸ್ಥಿತಿಯನ್ನು ಸುಧಾರಿಸಲು ತಪ್ಪು ಕೆಲಸಗಳನ್ನು ಮಾಡಬೇಡಿ. ನಿಮ್ಮ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸುವುದನ್ನು ಮುಂದುವರಿಸಿ. ಸರ್ಕಾರಿ ಕಛೇರಿಯ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತವೆ. ಮನೆಯಲ್ಲಿ ನಡೆಯುವ ಶುಭ ಕಾರ್ಯಗಳಿಗೆ ಮಕ್ಕಳ ಸಹಕಾರವಿರುವುದು. ಸರ್ಕಾರದ ಕಡೆಯಿಂದ ಆಗಬೇಕಾದ ನಿಮ್ಮ ಕೆಲಸವು ಬೇಗನೆ ಮುಕ್ತಾಯ.

ಮೀನ 

ಇಂದು ವ್ಯಾವಹಾರಿಕ ನಷ್ಟವು ನಿಮ್ಮ ಗಮನಕ್ಕೆ ಬಾರದೇ ಇರುವುದು. ಬೇಜವಾಬ್ದಾರಿಯ ಉತ್ತರವನ್ನು ಕೊಡುವುದು ಬೇಡ. ಆಲೋಚಿಸದೇ ಯಾವುದೇ ಸಾಹಸದ ಕಾರ್ಯದಲ್ಲಿ ತೊಡಗುವುದು ಬೇಡ. ಸಮಯವನ್ನು ವ್ಯರ್ಥ ಮಾಡದೆ ನಿಮ್ಮ ಗುರಿಯ ಕಡೆ ಮುಖ ಮಾಡಲಿದ್ದೀರಿ. ತಂದೆಯಿಂದ ಬೆಂಬಲ ಸಿಗಲಿದೆ. ಉದ್ಯೋಗಸ್ಥ ಮಹಿಳೆಯರು ವರ್ಗಾವಣೆಗೆ ಪ್ರಯತ್ನಿಸುವಿರಿ. ಆಪ್ತರ ಜೊತೆಗಿನ ಮಾತುಕತೆಯು ನಿಮಗೆ ಆಹ್ಲಾದವನ್ನು ಉಂಟುಮಾಡುವುದು.

 

 

TAGGED:#almanac #zodiac #prediction #06-05-2026 #wednesday #horoscope #planetary #positions #news #newsics #ನ್ಯೂಸಿಕ್ಸ್ #ಭವಿಷ್ಯ
Share This Article
Facebook Twitter Copy Link Print
Previous Article ಸರ್ಕಾರ ರಚನೆಗೂ ಮುನ್ನ ರಾಜ್ಯಪಾಲರಿಗೆ ತಮಿಳುನಾಡಿನ ‘ದಳಪತಿ’​ ಮನವಿ
Next Article ದಳಪತಿ ವಿಜಯ್ ಗೆ ಸಾಥ್ ಕೊಟ್ಟ ಕಾಂಗ್ರೆಸ್; ಸಂಪುಟದಲ್ಲಿ 2 ಸ್ಥಾನಕ್ಕೆ ಬೇಡಿಕೆ

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?