newsics.com/ನ್ಯೂಸಿಕ್ಸ್
ಭಾರತದಲ್ಲಿ ಟೋಲ್ ಸಂಗ್ರಹ ಪ್ರಕ್ರಿಯೆಯನ್ನು ಸುಲಭಗೊಳಿಸಲು ಪರಿಚಯಿಸಲಾದ ತಾಂತ್ರಿಕ ವ್ಯವಸ್ಥೆಯೇ ಫಾಸ್ಟ್ಟ್ಯಾಗ್ . ಇದು ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ತಂತ್ರಜ್ಞಾನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ.
https://youtube.com/shorts/1MGAmJmhYq0?si=nMc-nPA4I0KAHwKo
ವಾಹನವು ಟೋಲ್ ಪ್ಲಾಜಾ ಬಳಿ ಬಂದಾಗ, ಫಾಸ್ಟ್ಟ್ಯಾಗ್ನಲ್ಲಿರುವ ಚಿಪ್ ಅನ್ನು ಸ್ಕ್ಯಾನ್ ಮಾಡಿ ಟೋಲ್ ಶುಲ್ಕವನ್ನು ಸ್ವಯಂಚಾಲಿತವಾಗಿ ವಾಹನ ಮಾಲೀಕರ ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಇದರಿಂದಾಗಿ ನಗದು ಪಾವತಿಯ ಅಗತ್ಯತೆ ಕಡಿಮೆಯಾಗಿ, ಟ್ರಾಫಿಕ್ ದಟ್ಟಣೆಯೂ ತಗ್ಗುತ್ತದೆ.
ಆದರೆ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾರ್ಗಸೂಚಿಗಳ ಪ್ರಕಾರ, ಫಾಸ್ಟ್ಟ್ಯಾಗ್ ಅನ್ನು ಕಡ್ಡಾಯವಾಗಿ ವಾಹನದ ಮುಂಭಾಗದ ವಿಂಡ್ಸ್ಕ್ರೀನ್ (ಗಾಜು) ಮೇಲೆ ಅಂಟಿಸಬೇಕು. ಆದರೆ ಕೆಲವರು ವಾಹನ ಸವಾರರು ಅದನ್ನು ಕೈಯಲ್ಲಿ ಹಿಡಿದು ಸ್ಕ್ಯಾನ್ ಮಾಡಿಸುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಈ ವಿಷಯವನ್ನು NHAI ತನ್ನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ತಿಳಿಸಿದೆ.