newsics.com/ನ್ಯೂಸಿಕ್ಸ್
ಇಂದು ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ, ಪುದುಚೇರಿಯ ಪಂಚರಾಜ್ಯ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಆದರೆ ಫಲಿತಾಂಶಕ್ಕೂ ಮುನ್ನ ಬಂಗಾಳದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಬಿಜೆಪಿ-ಟಿಎಂಸಿ ನಡುವೆ ಜಗಳ ತಾರಕಕ್ಕೇರಿದೆ.
https://youtube.com/shorts/1MGAmJmhYq0?si=nMc-nPA4I0KAHwKo
ಗೇಟ್ ಒಳಗೆ ಬಿಜೆಪಿ ಎಣಿಗೆ ಏಜೆಂಟರು ಹೋಗುವಾಗ ಅವರನ್ನು ಪೊಲೀಸರು ತಡೆಯದೆ ಬಿಡುತ್ತಿರುವುದನ್ನು ನೋಡಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ನಿವಾಸಿಗಳೇ ನಾವು ಎಂದು ಹೇಳಿಕೊಂಡ ಟಿಎಂಸಿ ಕಾರ್ಯಕರ್ತರು ಘೋಷಣೆ ಕೂಗುತ್ತ, ಪ್ರತಿಭಟನೆ ಆರಂಭಿಸಿದರು. ಇದರಿಂದ ಅಲ್ಲೇ ವಾಗ್ವಾದ, ತಳ್ಳಾಟ–ಜಗಳಕ್ಕೆ ತಿರುಗುವಂತಹ ಪರಿಸ್ಥಿತಿ ಉಂಟಾಯಿತು.
ಭವಾನಿಪುರ ಕ್ಷೇತ್ದ ಮತ ಎಣಿಕೆ ಕೇಂದ್ರವಾಗಿರುವ ಸಖಾವತ್ ಮೆಮೋರಿಯಲ್ ಶಾಲೆಯ ಹೊರಗೆ ಕೂಡ ಉದ್ವಿಗ್ನತೆ ಹೆಚ್ಚಿತ್ತು. ಇಲ್ಲಿ ಬಿಜೆಪಿ ಎಣಿಕೆ ಏಜೆಂಟರು ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ನೇರ ವಾಗ್ವಾದ ನಡೆಯಿತು.