newsics.com
ಮಾಡರ್ನ್ ಜತೆಗೆ ಟ್ರೆಡಿಷನಲ್ ಆಗಿಯೂ ಕಾಣಬೇಕು ಅಂದ್ರೆ ಸೀರೆಯನ್ನು ಹೀಗೆ ಉಡಿ.
ಹೆವಿ ವರ್ಕ್ ಸೀರೆಯಲ್ಲಿ ಮಹಾರಾಣಿಯಂತೆ ಕಾಣಬಹುದು. ಈ ರೀತಿ ಸೀರೆ ಮದುವೆಗೆ ಬೆಸ್ಟ್. ಎತ್ತರದ ಹುಡುಗಿಯರಿಗಂತೂ ಗ್ರೇಸ್‌ಫುಲ್ ಲುಕ್ ಕೊಡುತ್ತೆ.
ಇನ್ನು ಮಾದಕವಾಗಿ ಕಾಣಬೇಕು ಅಂದ್ರೆ ಸ್ಟಾಟಿನ್ ಸೀರೆ ಹೇಳಿ ಮಾಡಿಸಿದಂತಿರುತ್ತೆ. ಉಡಲು ನೀಟಾಗಿ ಬರೋ ಈ ಸೀರೆಯಿಂದ ಮೈಮಾಟ ಹೆಚ್ಚುತ್ತೆ.
ಅಲ್ಲದೇ, ರೇಷ್ಮೆ ಬಿಟ್ಟರೆ ಶಿಫಾನ್ ಸೀರೆ ಹೆಚ್ಚು ಗ್ರಾಂಡ್ ಲುಕ್ ಕೊಡುವುದು. ಉಡಲೂ ಸುಲಭ. ಸೀರೆಯಲ್ಲಿ ಕಸೂತಿ ಅಥವಾ ತೆಳು ಬಾರ್ಡರ್ ಅದನ್ನು ಇನ್ನಷ್ಟು ಸುಂದರಗೊಳಿಸುತ್ತದೆ.
ಪ್ಯಾಸ್ಟಲ್ ಶೇಡ್ ನೆಟ್ ಸೀರೆಯಲ್ಲಿ ಅದ್ಭುತವಾಗಿ ಕಾಣಬಹುದು. ಎತ್ತರ ಇರೋರಿಗೆ ಪರ್ಫೆಕ್ಟ್ ಕಾಣುವಂತೆ ಮಾಡೋ ಈ ಸೀರೆ, ಸಾಫ್ಟ್ ಲುಕ್ ಹೆಚ್ಚಿಸುತ್ತದೆ.
ಕಪ್ಪು ಬಣ್ಣದ ಶಿಮ್ಮರ್ ಸೀರೆಯೊಂದಿಗೆ ಕೀ- ಹೋಲ್ ನೆಕ್‌ಲೈನ್ ಬ್ರೌಸ್ ಸೂಕ್ತವಾಗಿ ಹೊಂದುತ್ತೆ. ಈ ಸೀರೆಯನ್ನು ನೀವು ಕಾಕ್‌ಟೈಲ್ ಪಾರ್ಟಿಗೆ ಆಯ್ಕೆ ಮಾಡಬಹುದು.
ರಫಲ್ಡ್ ಸೀರೆ ಎತ್ತರದ ಹುಡುಗಿಯರ ದೇಹದ ಕರ್ವ್ ಅನ್ನು ಇನ್ನಷ್ಟು ಉತ್ತಮವಾಗಿ ಕಾಣುವಂತೆ ಮಾಡುತ್ತದೆ. ಇದು ಅವರ ನೋಟವನ್ನು ಇನ್ನಷ್ಟು ಸೊಗಸಾಗಿಸುತ್ತದೆ.
ಮೆಟಾಲಿಕ್ ಬಣ್ಣದ ಪ್ಲೇನ್ ಸಿಲ್ಕ್ ಸೀರೆಯಲ್ಲಿ ಆಕೆ ಸುಂದರವಾಗಿ ಕಾಣುತ್ತಿದ್ದಾರೆ. ಯಾವುದೇ ಕಾರ್ಯಕ್ರಮಕ್ಕಾದರೂ ಈ ಸೀರೆ ಸೂಕ್ತ. ಕೆಲವರು ಪ್ಲೇನ್ ಸೀರೆಯೊಂದಿಗೆ ಬ್ರಾಲೆಟ್ ಬ್ರೌಸ್ ಅನ್ನು ಧರಿಸುತ್ತಾರೆ. ಇದು ಅವರ ಎತ್ತರವನ್ನು ಇನ್ನಷ್ಟು ಹೆಚ್ಚಿರುವಂತೆ ಕಾಣಿಸುತ್ತದೆ.
ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಜಸ್ಟ್ 30 ಸಾವಿರಕ್ಕೆ ಸಿಗುತ್ತೆ 10 ಗ್ರಾಂ ಬಂಗಾರ!