https://youtube.com/shorts/RcxcteKkGZ8?si=yxDv0iURLfg799X9
newsics.com
ತಂದೆಯೊಬ್ಬ ತನ್ನ 11 ವರ್ಷದ ಅವಳಿ ಹೆಣ್ಣು ಮಕ್ಕಳನ್ನು ಕತ್ತು ಸೀಳಿ ಕೊಂದ ಘಟನೆ .ಕಾನ್ಪುರದ ನಿವಾಸವೊಂದರಲ್ಲಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿ ಮತ್ತು ಆತನ ಪತ್ನಿ ರೇಷ್ಮಾ ಛೆಟ್ರಿ 2014 ರಲ್ಲಿ ಪ್ರೀತಿಸಿ ವಿವಾಹವಾಗಿದ್ದರು. ಆರಂಭದಲ್ಲಿ ಚೆನ್ನಾಗಿದ್ದ ಸಂಸಾರದಲ್ಲಿ ನಂತರ ಬಿರುಕು ಮೂಡಿತು. ಆರೋಪಿ ಮದ್ಯವ್ಯಸನಿಯಾಗಿದ್ದು, ಪತ್ನಿಗೆ ಪ್ರತಿದಿನ ಚಿತ್ರಹಿಂಸೆ ನೀಡುತ್ತಿದ್ದ. ಎಷ್ಟರಮಟ್ಟಿಗೆ ಅಂದರೆ, ಮನೆಯ ಪ್ರತಿಯೊಂದು ಮೂಲೆಯಲ್ಲಿ ಹಾಗೂ ಮಲಗುವ ಕೋಣೆಯಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಪತ್ನಿಯ ಮೇಲೆ ನಿಗಾ ಇಟ್ಟಿದ್ದ.
ಕೊಲೆಯ ಹಿಂದಿನ ರಾತ್ರಿ ಕುಟುಂಬದವರೆಲ್ಲರೂ ಒಟ್ಟಿಗೆ ಊಟ ಮಾಡಿದ್ದರು. ನಂತರ ಆರೋಪಿ ತನ್ನಿಬ್ಬರು ಹೆಣ್ಣು ಮಕ್ಕಳನ್ನು ಮಲಗಿಸಲು ತನ್ನ ಕೋಣೆಗೆ ಕರೆದೊಯ್ದಿದ್ದ. ಪತ್ನಿ ರೇಷ್ಮಾ ಸಿಸಿಟಿವಿ ಮಾನಿಟರ್‌ನಲ್ಲಿ ನೋಡುತ್ತಿದ್ದಾಗ, ಪತಿ ಫೋನ್‌ನಲ್ಲಿ ದೀರ್ಘಕಾಲ ಮಾತನಾಡುತ್ತಿದ್ದುದು ಕಂಡುಬಂದಿದೆ. ಬೆಳಗಿನ ಜಾವ 2:30ಕ್ಕೆ ಆತ ಒಬ್ಬ ಮಗಳನ್ನು ಸ್ನಾನಗೃಹಕ್ಕೆ ಕರೆದೊಯ್ದು ನಂತರ ವಾಪಸ್ ಬಂದಿದ್ದಾನೆ. ಸ್ವಲ್ಪ ಸಮಯದ ನಂತರ ಕೋಣೆಯ ದೀಪಗಳನ್ನು ಆಫ್ ಮಾಡಿದ್ದಾನೆ. ಆನಂತರ ಅಲ್ಲಿ ಯಾವುದೇ ಸದ್ದು ಕೇಳಿಸದಿದ್ದಾಗ, ಎಲ್ಲರೂ ಮಲಗಿದ್ದಾರೆ ಎಂದು ರೇಷ್ಮಾ ಭಾವಿಸಿದ್ದರು.
ದೀಪ ಆಫ್ ಮಾಡಿದ ಆ ಕರಾಳ ಕ್ಷಣದಲ್ಲೇ ಆರೋಪಿ ತನ್ನಿಬ್ಬರು ಮಕ್ಕಳ ಕತ್ತನ್ನು ಹರಿತವಾದ ಆಯುಧದಿಂದ ಸೀಳಿ ಹತ್ಯೆ ಮಾಡಿದ್ದಾನೆ. ಕೃತ್ಯ ಎಸಗಿದ ನಂತರ ಏನೂ ಅರಿಯದವನಂತೆ ತಾನೇ ಪೊಲೀಸರಿಗೆ ಫೋನ್ ಮಾಡಿ ಮನೆಯಲ್ಲಿ ಕೊಲೆಯಾಗಿದೆ ಎಂದು ಮಾಹಿತಿ ನೀಡಿದ್ದಾನೆ.
ಹಿರಿಯ ಪೊಲೀಸ್ ಅಧಿಕಾರಿ ದೀಪೇಂದ್ರ ನಾಥ್ ಚೌಧರಿ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ವಿಧಿವಿಜ್ಞಾನ ತಂಡ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಹಂತಕ ತಂದೆಯನ್ನು ಈಗಾಗಲೇ ಬಂಧಿಸಲಾಗಿದ್ದು, ಈ ದಾರುಣ ಹತ್ಯೆಯ ಹಿಂದಿನ ಅಸಲಿ ಉದ್ದೇಶವನ್ನು ಹೊರಹಾಕಲು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
https://www.newsics.com/2026/04/19/live-worm-found-in-famous-food-company-haldirams-save-puri/