https://youtube.com/shorts/RcxcteKkGZ8?si=yxDv0iURLfg799X9
newsics.com
ಮುಂಬೈ: ಖ್ಯಾತ ಆಹಾರ ಸಂಸ್ಥೆ ಹಲ್ದಿರಾಮ್ಸ್ನ ಔಟ್ಲೆಟ್ನಲ್ಲಿ ನೀಡಲಾದ ಸೇವಪುರಿಯಲ್ಲಿ ಜೀವಂತ ಹುಳು ಹರಿದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಹಾರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
‘Indialast24hr’ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಗ್ರಾಹಕರೊಬ್ಬರು ತಮಗೆ ಬಡಿಸಲಾದ ಸೇವಪುರಿ ತಟ್ಟೆಯನ್ನು ತೋರಿಸುತ್ತಿದ್ದಾರೆ. ಅದರಲ್ಲಿ ಮಸಾಲೆ ಮತ್ತು ಪೂರಿಗಳ ನಡುವೆ ಜೀವಂತ ಹುಳು ಚಲಿಸುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ.
ಘಟನೆಯಿಂದ ಆಘಾತಕ್ಕೊಳಗಾದ ಗ್ರಾಹಕರು ತಕ್ಷಣವೇ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹೋಟೆಲ್ ಸಿಬ್ಬಂದಿ ಬದಲಿ ತಟ್ಟೆಯನ್ನು ನೀಡಲು ಮುಂದಾದರೂ, ಗ್ರಾಹಕರು ಅದನ್ನು ನಿರಾಕರಿಸಿದ್ದು, ಈ ವಿಷಯವನ್ನು ಮ್ಯಾನೇಜ್ಮೆಂಟ್ ಹಂತದಲ್ಲಿ ಗಂಭೀರವಾಗಿ ಪರಿಗಣಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ವಿಡಿಯೋ ಚಿತ್ರೀಕರಿಸುವಾಗ ಗ್ರಾಹಕರು ಅಲ್ಲಿನ ಇತರ ಜನರಿಗೂ ಹುಳು ಇರುವುದನ್ನು ತೋರಿಸಿದ್ದಾರೆ. ಇದನ್ನು ಕಂಡು ಅಲ್ಲಿದ್ದ ಇತರ ಗ್ರಾಹಕರು ಸಹ ಆತಂಕ ವ್ಯಕ್ತಪಡಿಸಿದ್ದಾರೆ.