Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಜ್ಯೋತಿಷ್ಯ > Today is Akshaya Triteeya ಇಂದು ಅಕ್ಷಯ ತೃತೀಯ: ಚಿನ್ನ ಬೆಳ್ಳಿ ಕೊಳ್ಳಲಾಗದಿದ್ದರೆ ಇವನ್ನಾದರೂ ಮನೆಗೆ ತನ್ನಿ
ಕರ್ನಾಟಕಜ್ಯೋತಿಷ್ಯದೇಶಪ್ರಮುಖ

Today is Akshaya Triteeya ಇಂದು ಅಕ್ಷಯ ತೃತೀಯ: ಚಿನ್ನ ಬೆಳ್ಳಿ ಕೊಳ್ಳಲಾಗದಿದ್ದರೆ ಇವನ್ನಾದರೂ ಮನೆಗೆ ತನ್ನಿ

Share
2 Min Read
SHARE

newsics.com

ಇಂದು (ಏ.19) ಅಕ್ಷಯ ತೃತೀಯ ಆಚರಿಸಲಾಗುತ್ತಿದೆ. ಇದು ಹಿಂದೂ ಮತ್ತು ಜೈನ ಧರ್ಮದ ಒಂದು ಸಾಂಪ್ರದಾಯಿಕ ಹಬ್ಬ. ಈ ದಿನದಂದು ಏನೇ ಖರೀದಿ ಮಾಡಿದರೂ ಅಕ್ಷಯವಾಗುತ್ತದೆ ಅಂದರೆ ಹೆಚ್ಚುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ, ಈ ದಿನ ಹೆಚ್ಚು ಮಂದಿ ಚಿನ್ನ-ಬೆಳ್ಳಿ ಖರೀದಿ ಮಾಡಲು ಮುಂದಾಗುತ್ತಾರೆ.

ಆದರೆ, ಈಗಿರುವ ಚಿನ್ನ-ಬೆಳ್ಳಿ ದರ ಕಂಡು ಕೆಲವರು ಈ ಅಮೂಲ್ಯ ವಸ್ತು ಖರೀದಿ ಮಾಡಲಾರದೆ ಕೊರಗುತ್ತಾರೆ. ಅಂತವರಿಗೆ ಖುಷಿ ವಿಚಾರ ಒಂದಿದೆ.

ಹೌದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ದಿನ ಪವಿತ್ರವಾದ ಐದು ವಸ್ತು ಖರೀದಿ, ಮನೆಗೆ ತರುವುದರಿಂದ ಲಕ್ಷ್ಮೀ ದೇವಿಯ ಕೃಪಾಕಟಾಕ್ಷ ನಮ್ಮ ಮೇಲೆ ಇರುತ್ತದೆ ಎನ್ನುವ ಪ್ರತೀತಿ ಇದೆ. ಹಾಗಾದ್ರೆ, ನೀವು ಈ ದಿನ ತರಬೇಕಾದ ಆ ಐದು ವಸ್ತು ಯಾವುದು ಎನ್ನುವ ವಿವರ ಇಲ್ಲಿದೆ.

ಉಪ್ಪು ಲಕ್ಷ್ಮೀ ಸ್ವರೂಪ

ಉಪ್ಪು ಲಕ್ಷ್ಮೀ ಸ್ವರೂಪವಾಗಿರುವ ಕಾರಣ ಅಕ್ಷಯ ತೃತೀಯದ ದಿನದಂದು ಚಿನ್ನ ಖರೀದಿ ಮಾಡಲಾಗದೆ ಹೋದರೆ, ಅದಕ್ಕಿಂತ ಶ್ರೇಷ್ಠವಾಗಿರುವ ಉಪ್ಪನ್ನು ಖರೀದಿ ಮಾಡಿ. ಇದರಿಂದ ನಕರಾತ್ರಮ ಶಕ್ತಿ ದೂರವಾಗಿ ಧನಾತ್ಮಕತೆ ನೆಲೆಸುತ್ತದೆ.

ಮಣ್ಣಿನ ಪಾತ್ರೆಯಿಂದ ಕಷ್ಟ ನಿವಾರಣೆ

ಜೇಡಿ ಮಣ್ಣಿನಿಂದ ತಯಾರಾದ ಮಡಿಕೆಯನ್ನು ಮನೆಗೆ ಖರೀದಿಸಿ ತರುವುದು ಇದು ಶುಭದಾಯಕ ಸೂಚನೆ. ಮಡಿಕೆಯನ್ನು ಮನೆಗೆ ತಂದು ತೊಳೆದು, ಅದರಲ್ಲಿ ನೀರು ತುಂಬಿ ಇಡುವುದರಿಂದ ಜೀವನದಲ್ಲಿರುವ ಸಂಕಷ್ಟ, ಅಡೆತಡೆಗಳನ್ನು ನಿವಾರಿಸಿ, ಸುಖ ವೃದ್ಧಿಗೆ ಶ್ರಮಿಸುತ್ತದೆ ಎನ್ನುವ ನಂಬಿಕೆ ಇದೆ.

ತುಳಸಿ ಲಕ್ಷ್ಮಿಯ ವಾಸಸ್ಥಾನ

ರಾತ್ರಿ ಅಡುಗೆಮನೆ ಹಾಗೂ ತುಳಸಿ ಕಟ್ಟೆಯಿಂದ ಲಕ್ಷ್ಮಿ ದೇವರ ಮನೆಯನ್ನು ಪ್ರವೇಶಿಸುತ್ತಾಳೆ ಎನ್ನುವ ನಂಬಿಕೆ ಹಿಂದೆ ಇತ್ತು. ಹೀಗಾಗಿ ಬಾಗಿಲನ್ನು, ಅಡುಗೆ ಮನೆ ಸ್ವಚ್ಛವಾಗಿ ಇಡಬೇಕು. ಇಲ್ಲದಿದ್ದರೆ ಲಕ್ಷ್ಮಿ ಪ್ರವೇಶಿಸುವುದಿಲ್ಲ ಎನ್ನಲಾಗುತ್ತಿತ್ತು. ಹೀಗಾಗಿ, ತುಳಸಿಯನ್ನು ಮನೆಗೆ ತರುವುದು ಶ್ರೇಯಸ್ಸು. ತುಳಸಿ ಮಹಾಲಕ್ಷ್ಮಿಯ ವಾಸಸ್ಥಾನ.

ಅರಿಶಿನ-ಕುಂಕುಮ ಸೌಭಾಗ್ಯದ ಸಂಕೇತ

ಐದರಿಂದ ಐವತ್ತು ರೂಪಾಯಿ ಒಳಗೆ ಸಿಗುವ ಅರಿಶಿನ ಕುಂಕುಮ ಶ್ರೇಯಸ್ಕರ. ಇದು ಸೌಭಾಗ್ಯದ ಸಂಕೇತ ಎಲ್ಲ ಶುಭ ಸಮಾರಂಭದಲ್ಲಿ ಇದನ್ನು ಖರೀದಿ ಮಾಡುವುದರಿಂದ ಯಾವುದೇ ವಿಘ್ನವಿಲ್ಲದೆ ಕಾರ್ಯಕ್ರಮ ಪೂರ್ಣಗೊಳ್ಳುತ್ತದೆ ಎನ್ನುವ ನಂಬಿಕೆ ಇದೆ.

ಪುಸ್ತಕ ಖರೀದಿಯಿಂದ ಲಕ್ಷ್ಮೀ ಕೃಪೆ

ವಿದ್ಯೆಯೇ ಜೀವನದ ಮಹಾಧನ, ಪುಸ್ತಕ ಅಥವಾ ಲೇಖನ ಸಾಮಗ್ರಿ ಖರೀದಿ ಮಾಡುವುದರಿಂದ ಜ್ಞಾನದೇವತೆ, ಸರಸ್ವತಿ, ಐಶ್ವರ್ಯ ದೇವತೆಯ ಕೃಪೆ ಒಟ್ಟೊಟ್ಟಿಗೆ ಸಿಗಲಿದೆ ಎನ್ನುವ ಪ್ರತೀತಿ ಇದೆ.

TAGGED:at least bring this homeToday is Akshaya Tritiya: If you can't buy gold or silver
Share This Article
Facebook Twitter Copy Link Print
Previous Article ಹಳೆಯ ಕಾಟನ್ ಸೀರೆಗಳನ್ನು ಬಳಸಿ ಕರೆಂಟ್ ಬಿಲ್ ಇಲ್ಲದೆ ನಿಮ್ಮ ಮನೆಯನ್ನು ತಂಪಾಗಿಸಿಕೊಳ್ಳುವುದು ಹೇಗೆ?
Next Article ರಾಜ್ಯಾದ್ಯಂತ ಎಲ್ಲಾ ಕೃಷಿಹೊಂಡಗಳಿಗೆ ಬೇಲಿ, ಎಚ್ಚರಿಕೆ ಫಲಕ ಅಳವಡಿಸಲು ಕೃಷಿ ಸಚಿವರಿಗೆ ಸ್ಪೀಕರ್ ಯು.ಟಿ. ಖಾದರ್ ಪತ್ರ

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?