newsics.com
ನೈಜೀರಿಯಾದಲ್ಲಿ ಉಗ್ರರನ್ನು ಸದೆಬಡಿಯಲು ನಡೆಸಿದ ಮಿಲಿಟರಿ ವೈಮಾನಿಕ ದಾಳಿಯು ದಾರಿ ತಪ್ಪಿ ನಾಗರಿಕರ ಮೇಲೆ ಅಪ್ಪಳಿಸಿದ್ದು, ಕನಿಷ್ಠ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ನೈಜೀರಿಯನ್ ವಾಯುಪಡೆಯು ಆ ಭಾಗದಲ್ಲಿ ಸಕ್ರಿಯವಾಗಿರುವ ಜಿಹಾದಿ ಹೋರಾಟಗಾರರನ್ನು ಸದೆಬಡಿಯಲು ಕಾರ್ಯಾಚರಣೆ ನಡೆಸುತ್ತಿತ್ತು. ಬೊರ್ನೊ ಮತ್ತು ಯೋಬೆ ರಾಜ್ಯಗಳ ಗಡಿ ಭಾಗದಲ್ಲಿರುವ ಗ್ರಾಮವೊಂದರ ಮಾರುಕಟ್ಟೆಯಲ್ಲಿ ಜನಜಂಗುಳಿ ಇದ್ದ ಸಮಯದಲ್ಲಿ ಈ ವೈಮಾನಿಕ ದಾಳಿ ನಡೆದಿದೆ.
ಅಧಿಕಾರಿಗಳು ಈ ಘಟನೆಯನ್ನು ‘ಮಿಸ್‌ಫೈರ್’ ಎಂದು ಒಪ್ಪಿಕೊಂಡಿದ್ದಾರೆ. ಉಗ್ರರ ಅಡಗುತಾಣ ಎಂದು ಭಾವಿಸಿ ನಡೆಸಿದ ಬಾಂಬ್ ದಾಳಿಯು ನೇರವಾಗಿ ಮಾರುಕಟ್ಟೆಯ ಮೇಲೆ ಬಿದ್ದಿದೆ. ಬದುಕುಳಿದವರ ಹೇಳಿಕೆಗಳನ್ನು ಉಲ್ಲೇಖಿಸಿರುವ ಅಮ್ನೆಸ್ಟಿ ಇಂಟರ್ನ್ಯಾಷನಲ್, ಕನಿಷ್ಠ 100 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ ಎಂದು ದೃಢಪಡಿಸಿದೆ. ದಶಕಗಳಿಂದ ದಂಗೆಕೋರರ ಹಾವಳಿಯಿಂದ ತತ್ತರಿಸಿರುವ ಈ ಪ್ರದೇಶದಲ್ಲಿ ಈಗ ಸ್ವತಃ ದೇಶದ ಸೇನೆಯೇ ನಡೆಸಿದ ಈ ದಾಳಿ ಜನರಲ್ಲಿ ಆತಂಕ ಮೂಡಿಸಿದೆ.
https://www.newsics.com/2026/04/13/woman-breastfeeding-cat-on-plane-fellow-passenger-attacks-her/