newsics.com
ಬಾಗಲಕೋಟೆ : ಪ್ರೇಮಿಗಳಿಬ್ಬರ ನಡುವೆ ವೈಮನಸ್ಸು ಉಂಟಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಕೆ.ಹೆಚ್.ಡಿ.ಸಿ ಕಾಲೋನಿಯಲ್ಲಿ ನಡೆದಿದೆ.
ಪ್ರಿಯತಮೆ ನೇಣಿಗೆ ಶರಣಾಗಿದ್ದರೆ, ವಿಷಯ ತಿಳಿದ ಪ್ರಿಯತಮ ರಬಕವಿಬನಹಟ್ಟಿ ತಾಲೂಕಿನ ಅಸ್ಕಿ ಗ್ರಾಮದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ.
ಪವಿತ್ರಾ(19) ಮತ್ತು ಕಾರ್ತಿಕ್ ನಾಯಕ್(19) ಮೃತ ಪ್ರೇಮಿಗಳು. ನಿನ್ನೆ ಇಬ್ಬರ ಮಧ್ಯೆಯೂ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಇದಾದ ಬಳಿಕ ಮನನೊಂದು ಮೊದಲು ಪವಿತ್ರಾ ಮನೆಯಲ್ಲಿ ನೇಣಿಗೆ ಶರಣಾಗಿದ್ದಳು. ಸ್ಥಳಕ್ಕೆ ಬನಹಟ್ಟಿ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಪವಿತ್ರಾ ಸಾವನ್ನಪ್ಪಿದ ಸುದ್ದಿ ಕೇಳಿ ಕಾರ್ತಿಕ್ ಕೂಡ ದುಡುಕಿನ ನಿರ್ಧಾರ ಕೈಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ದಾಅಖಲಿಸಿಇಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.