Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Grand welcome ವಿಚ್ಛೇದನ ಪಡೆದ ಮಗಳನ್ನು ಅದ್ಧೂರಿಯಾಗಿ ಸ್ವಾಗತಿಸಿದ ನಿವೃತ್ತ ನ್ಯಾಯಾಧೀಶ!
ದೇಶಪ್ರಮುಖ

Grand welcome ವಿಚ್ಛೇದನ ಪಡೆದ ಮಗಳನ್ನು ಅದ್ಧೂರಿಯಾಗಿ ಸ್ವಾಗತಿಸಿದ ನಿವೃತ್ತ ನ್ಯಾಯಾಧೀಶ!

Share
2 Min Read
SHARE

 

newsics.com

ಮೀರತ್(ಉತ್ತರ ಪ್ರದೇಶ): ನಿವೃತ್ತ ನ್ಯಾಯಧೀಶರೊಬ್ಬರು ತಮ್ಮ ಮಗಳಿಗೆ ಡಿವೋರ್ಸ್​ ಸಿಕ್ಕ ಬಳಿಕ ಆಕೆಯನ್ನು ಸಂಭ್ರಮದಿಂದ ಮನೆಗೆ ಬರಮಾಡಿಕೊಂಡಿದ್ದು, ವಿಚ್ಛೇದನ ಎಂಬುದು ಕಳಂಕ ಅಲ್ಲ ಎಂಬ ಮಹತ್ವದ ಸಂದೇಶ ಸಾರಿದ್ದಾರೆ.

ಮೌನದ ಬದಲು ಸಂಭ್ರಮದಿಂದ ವಿಚ್ಛೇದನವನ್ನು ಸ್ವಾಗತಿಸಿದ ಈ ಕುಟುಂಬ, ಸಿಹಿ ಹಂಚಿ, ಮಗಳಿಗೆ ಹೂ ಮಾಲೆ ಹಾಕಿ ಡೋಲು-ನಗಾರಿಗಳೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಿತು. ಈ ಕ್ಷಣಗಳನ್ನು ನೆನಪಿನಲ್ಲಿಡಲು ತಂದೆ ಮತ್ತು ಕುಟುಂಬದವರು ‘I LOVE MY DAUGHTER’ ಎಂಬ ಕಪ್ಪು ಬಣ್ಣದ ಟೀ ಶರ್ಟ್​ ಧರಿಸಿದ್ದರು.

“ನನ್ನ ಏಕೈಕ ಪುತ್ರಿ ಪ್ರಣೀತಾ ಶರ್ಮಾಗೆ ಉತ್ತರ ಪ್ರದೇಶದ ಮೀರತ್‌ನ​ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ನೀಡಿದೆ” ಎಂದು ತಂದೆ ಹಾಗು ನಿವೃತ್ತ ನ್ಯಾಯಾಧೀಶರಾದ ಜ್ಞಾನೇಂದ್ರ ಶರ್ಮಾ ಹೇಳಿದರು.

ನ್ಯಾಯಾಲಯದಿಂದ ಮನೆಯವರೆಗೆ ಮಗಳನ್ನು ಹಾಡು ಮತ್ತು ನೃತ್ಯದೊಂದಿಗೆ ಕರೆತರಲಾಯಿತು. ಮೆರವಣಿಗೆಯಯಲ್ಲಿ ಕುಟುಂಬಸ್ಥರು ಧರಿಸಿದ್ದ ಕಪ್ಪು ಟಿ ಶರ್ಟ್‌ನಲ್ಲಿ ಪ್ರಣೀತಾ ಅವರ ಪೋಟೋ ಜೊತೆಗೆ “ನಾನು ನನ್ನ ಮಗಳನ್ನು ಪ್ರೀತಿಸುತ್ತೇನೆ” ಎಂದು ಮುದ್ರಿಸಲಾಗಿತ್ತು.

8 ವರ್ಷಗಳ ಹಿಂದೆ ವಿವಾಹ: ಮಗಳ 8 ವರ್ಷಗಳ ನೋವು ಹಾಗೂ ಗೌರವಕ್ಕೆ ಸಂದ ವಿಜಯವಿದು ಎಂದು ತಂದೆ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದರು. ಪ್ರಣೀತಾ ಮದುವೆ 2018ರಲ್ಲಿ ಶಹಜಹಾನ್​ಪುರದ ನಿವಾಸಿ ಹಾಗೂ ಪ್ರಸ್ತುತ ಜಲಂಧರ್​ನಲ್ಲಿ ನಿಯೋಜಿತರಾಗಿರುವ ಸೇನೆಯಲ್ಲಿ ಮೇಜರ್ ಆಗಿರುವ​ ಗೌರವ್​ ಅಗ್ನಿಹೋತ್ರಿ ಅವರೊಂದಿಗೆ ನಡೆದಿತ್ತು. ಬಹಳ ಆಸೆ, ಅಷ್ಟೇ ವಿಜೃಂಭಣೆಯಿಂದ ಮಗಳನ್ನು ಮದುವೆ ಮಾಡಿಕೊಟ್ಟಿದ್ದರು. ಆದರೆ ವಿವಾಹವಾದ ಕೆಲವೇ ದಿನಗಳಲ್ಲಿ ಕಿರುಕುಳ ಆರಂಭವಾಗಿತ್ತು. ಗಂಡು ಮಗು ಜನಿಸಿದರೂ ಪರಿಸ್ಥಿತಿ ಸರಿಹೋಗಲಿಲ್ಲ. ಸುಮಾರು ಏಳು ವರ್ಷಗಳ ಕಾಲ ಅತ್ತೆ ಮನೆಯಲ್ಲಿ ಮಾನಸಿಕ ಮತ್ತು ಭಾವನಾತ್ಮಕ ಕಿರುಕುಳವನ್ನು ಸಹಿಸಿಕೊಂಡಿದ್ದಾಗಿ ಪ್ರಣೀತಾ ತಿಳಿಸಿದ್ದಾರೆ.
ಮಹಿಳೆಯರಿಗೆ ಪ್ರಣೀತಾ ಸಲಹೆ: “ಮೌನ ಮುರಿಯಿರಿ, ಸುಮ್ಮನಿರಬೇಡಿ. ಯಾವುದೇ ರೀತಿಯ ಕಿರುಕುಳವನ್ನು ಸಹಿಸಿಕೊಂಡು ಸುಮ್ಮನಿರುವುದು ನಮಗೆ ನಾವೇ ಮಾಡಿಕೊಳ್ಳುವ ಅನ್ಯಾಯ. ಮದುವೆಗೂ ಮುನ್ನ ಆರ್ಥಿಕವಾಗಿ ಸ್ವತಂತ್ರರಾಗಿ, ಸದೃಢರಾಗಿ” ಎಂದು ಪ್ರಣೀತಾ ಶರ್ಮಾ ಕರೆ ನೀಡಿದರು.

ಈ ಎಲ್ಲಾ ಬದಲಾವಣೆಯ ಬಳಿಕ ಪ್ರಣೀತಾ ತಮ್ಮ ಕುಟುಂಬವನ್ನು ದೊಡ್ಡ ಶಕ್ತಿ ಎಂದು ಬಣ್ಣಿಸಿದರು. ಇವರು 2022ರಲ್ಲಿ ಅಪಘಾತದಲ್ಲಿ ತಮ್ಮ ಸಹೋದರನನ್ನು ಕಳೆದುಕೊಂಡಿದ್ದರು. ಈಗ ತನ್ನ ವಿಚ್ಛೇದನ. ಇಷ್ಟಾದರೂ ಕುಟುಂಬ ತನ್ನೊಂದಿಗೆ ಬೆಂಬಲವಾಗಿ ಇರುವುದಕ್ಕೆ ಪ್ರಣೀತಾ ಸಾರ್ಥಕ ಭಾವನೆ ವ್ಯಕ್ತಪಡಿಸಿದರು.

ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರೆಯಾದ ಪ್ರಣೀತಾ, ತೇಜ್‌ಗಢಿಯಲ್ಲಿರುವ ಪ್ರಣವ್ ವಶಿಷ್ಠ ನ್ಯಾಯಾಂಗ ಅಕಾಡೆಮಿಯಲ್ಲಿ ಹಣಕಾಸು ನಿರ್ದೇಶಕಿಯಾಗಿದ್ದಾರೆ.

Alcohol more expensive ವಾರ್ ಎಫೆಕ್ಟ್: ಮದ್ಯ ಮತ್ತಷ್ಟು ದುಬಾರಿ ಸಾಧ್ಯತೆ

Kerala techie found ಮಡಿಕೇರಿ ಕಾಡಲ್ಲಿ ಕಾಣೆಯಾಗಿದ್ದ ಕೇರಳ ಟೆಕ್ಕಿ ಶರಣ್ಯ ಪತ್ತೆ, ದಾರಿ ತಿಳಿಯದೆ ಕಂಗಾಲು

TAGGED:Retired judge gives grand welcome to his divorced daughter!
Share This Article
Facebook Twitter Copy Link Print
Previous Article ನ್ಯಾಷನಲ್ ಕ್ರಶ್ ಆಹಾರದಲ್ಲಿ ಏನೆಲ್ಲಾ ಇರುತ್ತೆ?
Next Article ವೈಟ್ ಹೌಸ್ ಬಳಿ ಮಧ್ಯರಾತ್ರಿ ಗುಂಡಿನ ಸದ್ದು, ದಿಢೀರ್ ಆತಂಕ

Popular Posts

Relationship ಒಬ್ಬ ವ್ಯಕ್ತಿಗೆ ಎಷ್ಟು ಸಲ ರಿಯಲ್ ಲವ್ ಆಗುತ್ತೆ?ಅಧ್ಯಯನ ಹೇಳಿದ ಅಚ್ಚರಿಯ ಸತ್ಯ ಇಲ್ಲಿದೆ

2 Min Read

Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​

1 Min Read

ಸಿಎಂ ಡಿಕೆ ಶಿವಕುಮಾರ್ ತಲೆನೋವಾದ ಖಾತೆ ಕ್ಯಾತೆ : ರಾಜೀನಾಮೆ ಕೊಟ್ಟೇ ಸಿದ್ದ ಎಂದ ರಾಮಲಿಂಗಾರೆಡ್ಡಿ

1 Min Read

ಡಿಕೆ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

1 Min Read

You Might Also Like

ಕರ್ನಾಟಕಪ್ರಮುಖ

U.T. Khader ಸರ್ಕಾರಿ ಆಸ್ಪತ್ರೆಗೆ ಯು.ಟಿ ಖಾದರ್​ ಭೇಟಿ : ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ

1 Min Read
ಕರ್ನಾಟಕಪ್ರಮುಖ

DK Shivakumar ಸಾರ್ವಜನಿಕರ ದೂರು ಆಲಿಸಲು ಪ್ರತ್ಯೇಕ ಸಚಿವಾಲಯ ಆರಂಭ : ದೇಶದಲ್ಲೇ ಮೊದಲು!

1 Min Read
ದೇಶಪ್ರಮುಖ

ಟಿಸಿಎಸ್‌ ಬಳಿಕ ವಿಪ್ರೋದಲ್ಲಿ ಮತಾಂತರ ಜಾಲ? ಮಾಜಿ ಉದ್ಯೋಗಿ ಹೇಳಿದ ಶಾಕಿಂಗ್‌ ರಹಸ್ಯವೇನು?

1 Min Read
ಕರ್ನಾಟಕಪ್ರಮುಖ

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?