https://youtube.com/shorts/T_aMW9fkptU?si=5dNoX3esn0X-svY6
newsics.com
ಕಾರ್ಕಳ: ದೈವರಾಧನೆಗೆ ತುಳುನಾಡಿನಲ್ಲಿ ಐತಿಹಾಸಿಕ ಪರಂಪರೆ ಇದೆ. ಸಂಸ್ಕೃತಿ ಅಧಃಪತನದತ್ತ ಸಾಗುತ್ತಿದೆ ಎಂಬ ಆರೋಪಗಳ ನಡುವೆ 12 ವರ್ಷದ ಬಾಲಕನೊಬ್ಬ ಭೂತ ಕೋಲ ಕಟ್ಟಿದ ಅಪರೂಪದ ವಿದ್ಯಮಾನ ಕಾರ್ಕಳ ತಾಲೂಕಿನಲ್ಲಿ ಗಮನ ಸೆಳೆದಿದೆ.
ಕಾರ್ಕಳ ತಾಲೂಕಿನ ಸೂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಸಮರ್ಥ್, ಕಿರಿಯ ವಯಸ್ಸಿನಲ್ಲೇ ಭೂತ ಕೋಲ ಕಟ್ಟಿ ಕೋಲ ನೆರವೇರಿಸಿದ್ದಾನೆ. ತನ್ನ ಅಜ್ಜ ಮತ್ತು ತಂದೆಯ ಮೂರು ತಲೆಮಾರುಗಳ ಪರಂಪರೆಯನ್ನು ಮುಂದುವರಿಸಿರುವ ಈ ಬಾಲಕನ ದೈವಾರಾಧನೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅವಿವಾಹಿತರು ಮಾತ್ರ ಪಾಲ್ಗೊಳ್ಳುವ ವಿಶೇಷ ಆಚರಣೆಯ ಈ ಕೋಲದಲ್ಲಿ ಬಾಲಕನ ಭಾಗವಹಿಸುವಿಕೆ ಸ್ಥಳೀಯರಲ್ಲಿ ಸಂತಸ ಮೂಡಿಸಿದೆ. ಕಳೆದ ಬಾರಿ ಶಿರ್ಲಾಲು ಸೂಡಿ ಪಂಗ್ಲಬೆಟ್ಟು ಮುಂಡ್ಲಿ ಮುಗೇರಕಲ ದೈವಸ್ಥಾನದ ವರ್ಧಂತಿ ಉತ್ಸವದಲ್ಲೂ ಕೂಡ ಗಗ್ಗರ ಕಟ್ಟಿದ್ದ. ಯುವಪೀಳಿಗೆ ಸಂಸ್ಕೃತಿಯನ್ನು ಉಳಿಸುವ ದಿಶೆಯಲ್ಲಿ ಇದು ಒಳ್ಳೆಯ ಬೆಳವಣಿಗೆ ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.