Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಜಿಯೋ ಮೊಬೈಲ್‌ ರೀಚಾರ್ಜ್ ಪ್ಲಾನ್‌ಗಳ ‘ಆಟ’ಕ್ಕೆ ಟ್ರಾಯ್ ಬ್ರೇಕ್
ದೇಶ

ಜಿಯೋ ಮೊಬೈಲ್‌ ರೀಚಾರ್ಜ್ ಪ್ಲಾನ್‌ಗಳ ‘ಆಟ’ಕ್ಕೆ ಟ್ರಾಯ್ ಬ್ರೇಕ್

Share
2 Min Read
SHARE

ರಿಲಯನ್ಸ್ ಜಿಯೋದ ಕೆಲವು ರೀಚಾರ್ಜ್ ಯೋಜನೆಗಳು ತಾರತಮ್ಯದಿಂದ ಕೂಡಿದ್ದು, ಪಾರದರ್ಶಕತೆಯ ನಿಯಮಗಳನ್ನು ಉಲ್ಲಂಘಿಸುತ್ತಿವೆ ಎಂದು ಟ್ರಾಯ್ ಹೇಳಿದೆ. ಈ ಹಿನ್ನೆಲೆಯಲ್ಲಿ, ಎಲ್ಲಾ ಪ್ಲಾನ್‌ಗಳನ್ನು ಎಲ್ಲ ವೇದಿಕೆಗಳಲ್ಲಿ ಮತ್ತು ಎಲ್ಲ ಸಾಧನಗಳಿಗೆ ಲಭ್ಯವಾಗುವಂತೆ ಮಾಡಲು ಟ್ರಾಯ್ ಕಟ್ಟುನಿಟ್ಟಿನ ಆದೇಶ ನೀಡಿದೆ.

ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾದ ರಿಲಯನ್ಸ್ ಜಿಯೋಗೆ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಬಿಸಿ ಮುಟ್ಟಿಸಿದೆ. ಜಿಯೋದ ಕೆಲವು ರೀಚಾರ್ಜ್ ಯೋಜನೆಗಳು “ತಾರತಮ್ಯ”ದಿಂದ ಕೂಡಿವೆ ಮತ್ತು ಪಾರದರ್ಶಕತೆಯ ನಿಯಮಗಳನ್ನು ಉಲ್ಲಂಘಿಸುತ್ತಿವೆ ಎಂದು ಹೇಳಿರುವ ಟ್ರಾಯ್, ಏಪ್ರಿಲ್ 14ರೊಳಗೆ ಇವುಗಳನ್ನು ಸರಿಪಡಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಮುಖ್ಯವಾಗಿ ಎರಡು ವಿಷಯಗಳಲ್ಲಿ ಜಿಯೋ ನಿಯಮ ಉಲ್ಲಂಘಿಸಿದೆ ಎಂದು ಟ್ರಾಯ್ ಬೊಟ್ಟು ಮಾಡಿದೆ.

ಕೆಲವು ಅಗ್ಗದ ಪ್ಲಾನ್‌ಗಳನ್ನು ಕೇವಲ ಆಯ್ದ ವೇದಿಕೆಗಳಲ್ಲಿ ಮಾತ್ರ ನೀಡಲಾಗುತ್ತಿದೆ. ಉದಾಹರಣೆಗೆ, ₹249 ಮತ್ತು ₹199ರ ಪ್ಲಾನ್‌ಗಳು ಕೇವಲ ‘ಜಿಯೋ ಸ್ಟೋರ್‌’ಗಳಲ್ಲಿ ಮಾತ್ರ ಲಭ್ಯವಿದ್ದರೆ, ₹209ರ ಪ್ಲಾನ್ ಕೇವಲ ‘ಮೈ ಜಿಯೋ’ ಆಯಪ್‌ನಲ್ಲಿ ಮಾತ್ರ ಲಭ್ಯವಿದೆ. ಇದು ಗ್ರಾಹಕರಿಗೆ ಗೊಂದಲ ಉಂಟುಮಾಡುತ್ತದೆ ಮತ್ತು ನಿಯಮಬಾಹಿರ ಎಂದು ಟ್ರಾಯ್ ಹೇಳಿದೆ.

ಜಿಯೋ ಫೋನ್ ಮತ್ತು ಜಿಯೋ ಭಾರತ್ ಫೋನ್‌ಗಳಿಗಾಗಿಯೇ ಪ್ರತ್ಯೇಕ ಅಗ್ಗದ ಪ್ಲಾನ್‌ಗಳನ್ನು ನೀಡಲಾಗುತ್ತಿದೆ. ಈ ಪ್ಲಾನ್‌ಗಳು ಇತರ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸಿಗುತ್ತಿಲ್ಲ. ಇದನ್ನು ಟ್ರಾಯ್ “ತಾರತಮ್ಯ” ಎಂದು ಕರೆದಿದ್ದು, ಪ್ಲಾನ್‌ಗಳು ಎಲ್ಲಾ ಸಾಧನಗಳಿಗೂ ಸಮಾನವಾಗಿ ಸಿಗಬೇಕು ಎಂದು ಸೂಚಿಸಿದೆ.

ಸುಮಾರು 50 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಜಿಯೋ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. “ನಮ್ಮ ಪ್ಲಾನ್‌ಗಳು ನಿರ್ದಿಷ್ಟ ಬಳಕೆದಾರರ ವಿಭಾಗವನ್ನು ಆಧರಿಸಿರುತ್ತವೆ, ಹಾಗಾಗಿ ಇವುಗಳನ್ನು ತಾರತಮ್ಯ ಎಂದು ಕರೆಯಲು ಸಾಧ್ಯವಿಲ್ಲ. ಅಲ್ಲದೆ, ಪೋಸ್ಟ್‌ಪೇಯ್ಡ್ ಮತ್ತು ಮೊದಲ ಬಾರಿಯ ರೀಚಾರ್ಜ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ” ಎಂದು ಜಿಯೋ ವಾದಿಸಿದೆ. ಆದರೆ, ಟ್ರಾಯ್ ಈ ವಾದವನ್ನು ತಳ್ಳಿಹಾಕಿದ್ದು, ಪ್ಲಾನ್‌ಗಳ ಪ್ರಕಟಣೆ ಮತ್ತು ಲಭ್ಯತೆ ಒಂದಕ್ಕೊಂದು ಸಂಬಂಧ ಹೊಂದಿವೆ ಎಂದು ಸ್ಪಷ್ಟಪಡಿಸಿದೆ.

ಎಲ್ಲಾ ಟ್ಯಾರಿಫ್ ಪ್ಲಾನ್‌ಗಳನ್ನು ರಿಟೇಲ್ ಸ್ಟೋರ್, ವೆಬ್‌ಸೈಟ್, ಆಯಪ್ ಮತ್ತು ಕಸ್ಟಮರ್ ಕೇರ್ ಸೇರಿದಂತೆ ಎಲ್ಲಾ ವೇದಿಕೆಗಳಲ್ಲಿ ಏಕಕಾಲಕ್ಕೆ ಲಭ್ಯವಾಗುವಂತೆ ಮಾಡಬೇಕು. ಡಿವೈಸ್ ಆಧಾರಿತ (ಜಿಯೋ ಫೋನ್ ಇತ್ಯಾದಿ) ವಿಶೇಷ ಪ್ಲಾನ್‌ಗಳನ್ನು ಎಲ್ಲಾ ಮೊಬೈಲ್ ಬಳಕೆದಾರರಿಗೂ ಲಭ್ಯವಾಗುವಂತೆ ರೀಸ್ಟ್ರಕ್ಚರ್ ಮಾಡಬೇಕು.

ಏಪ್ರಿಲ್ 14ರೊಳಗೆ ಜಿಯೋ ಈ ಬದಲಾವಣೆಗಳನ್ನು ಮಾಡದಿದ್ದರೆ ಟ್ರಾಯ್ ಕಾಯ್ದೆ 1997ರ ಅಡಿಯಲ್ಲಿ ಭಾರಿ ದಂಡ ವಿಧಿಸಲಾಗುತ್ತದೆ. ಮೊದಲ ಬಾರಿಯ ಉಲ್ಲಂಘನೆಗೆ 1 ಲಕ್ಷ ರೂ. ದಂಡ. ನಂತರದ ಪ್ರತಿ ಉಲ್ಲಂಘನೆಗೆ 2 ಲಕ್ಷ ರೂ. ದಂಡ. ನಿಯಮ ಪಾಲನೆ ಮಾಡುವವರೆಗೂ ಪ್ರತಿದಿನವೂ ಹೆಚ್ಚುವರಿ ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ.

TAGGED:TRAI puts a stop to the 'game' of Jio mobile recharge plans
Share This Article
Facebook Twitter Copy Link Print
Previous Article ಮೀನುಗಾರಿಕೆ ನಡೆಸುತ್ತಿದ್ದಾಗ ಗಂಟಲಿನಲ್ಲಿ ಜೀವಂತ ಮೀನು ಸಿಲುಕಿ ವ್ಯಕ್ತಿ ಸಾವು
Next Article Health ಸೊಂಟ ನೋವು ನಿವಾರಣೆಗೆ ಹೊಸ ಸೂತ್ರ, ಏನಿದು ವಿಶೇಷ ತಂತ್ರ?

Popular Posts

Puri Jaganath ಪುರಿ ಜಗನ್ನಾಥನ ಪ್ರಸಾದ ಆನ್‌ಲೈನ್‌ನಲ್ಲಿ ಸಿಗುತ್ತೆ ಅನ್ನೋ ಭ್ರಮೆಯಲ್ಲಿದ್ದೀರಾ? ಸೈಬರ್ ವಂಚಕರ ಬಗ್ಗೆ ಇರಲಿ ಎಚ್ಚರ

2 Min Read

Bigg Boss ಕಿರುತೆರೆಯಲ್ಲಿ ಹೊಸ ಇತಿಹಾಸ; ಸೆಪ್ಟೆಂಬರ್‌ನಿಂದ ಕನ್ನಡ ಸೇರಿ 6 ಭಾಷೆಗಳ ‘ಬಿಗ್ ಬಾಸ್’ ಒಟ್ಟಿಗೆ ಆರಂಭ

2 Min Read

Harassment Case ಮಹಿಳಾ IPS ಅಧಿಕಾರಿಗೆ ಟಾರ್ಚರ್..! ಮೈಮೇಲೆ ಕಾಂಡೋಮ್ ಎಸೆದು ಬ್ಲ್ಯಾಕ್‌ಮೇಲ್ ಮಾಡಿದ ಸಹೋದ್ಯೋಗಿ

2 Min Read

Funeral of Chennamma ಸಕಲ ಸರ್ಕಾರಿ ಗೌರವಗಳೊಂದಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಪತ್ನಿ ಚೆನ್ನಮ್ಮ ಅಂತ್ಯಕ್ರಿಯೆ

1 Min Read

You Might Also Like

ಪ್ರಮುಖದೇಶ

First Dengue Vaccine ಡೆಂಗ್ಯೂ ಕಾಟಕ್ಕೆ ಇನ್ಮುಂದೆ ಗುಡ್‌ಬೈ; ದೇಶದ ಮೊದಲ ‘QDENGA’ ಲಸಿಕೆಗೆ ಡಿಸಿಜಿಐ ಗ್ರೀನ್ ಸಿಗ್ನಲ್

1 Min Read
ದೇಶಪ್ರಮುಖ

DGP found dead ಕಚೇರಿಯಲ್ಲೇ ಡಿಜಿಪಿ ನಿಗೂಢ ಸಾವು: ಇಲಾಖೆಯಲ್ಲಿ ತಲ್ಲಣ!

1 Min Read
ಪ್ರಮುಖದೇಶ

Nature’s Mystery ಸಂಜೆ ಅನ್ನೋ ಕಾನ್ಸೆಪ್ಟೇ ಇಲ್ಲದ ವಿಚಿತ್ರ ಹಳ್ಳಿ; ಇಲ್ಲಿ 4 ಗಂಟೆಗೆಲ್ಲಾ ಸಂಪೂರ್ಣ ಕತ್ತಲು

2 Min Read
ಪ್ರಮುಖCrimeದೇಶ

Road Mishap ಲಾರಿ-ಕಾರು ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರು ಸೇರಿ 6 ಮಂದಿ ಸಜೀವ ದಹನ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?