newsics.com
ಬಿಗ್ ಬಾಸ್ ಸ್ಪರ್ಧಿಯಾಗಿದ್ದ ನಟಿ ಸಾನ್ಯಾ ಅಯ್ಯರ್ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಲು ತುದಿಗಾಲಿನಲ್ಲಿ ನಿಂತಿದ್ದಾರೆ. ಸದಾ ಸ್ಟೈಲಿಶ್ ಹಾಗೂ ಬೋಲ್ಡ್ ಫೋಟೋಶೂಟ್ ಮೂಲಕ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ. ಸಖತ್ ಹಾಟ್ ಆಗಿ ನಟಿ ಸಾನ್ಯಾ ಅಯ್ಯರ್ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.
ಪುಟ್ಟಗೌರಿ ಪಾತ್ರ ಮಾಡಿ ಇಡೀ ಕರುನಾಡ ಜನರ ಮನಸ್ಸು ಗೆದ್ದಿದ್ದರು ನಟಿ ಸಾನ್ಯಾ ಐಯ್ಯರ್, ಇದೀಗ ನಟಿ ಬೆಳ್ಳಿತೆರೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಸಖತ್ ಸ್ಟೈಲಿಶ್ ಫೋಟೋಗಳನ್ನು ನಟಿ ಸಾನ್ಯಾ ಹಂಚಿಕೊಂಡಿದ್ದಾರೆ. ಸಖತ್ ಹಾಟ್ ಆಗಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.
ಯಾವ ಬಾಲಿವುಡ್ ಬ್ಯೂಟಿಗೂ ಸಾನ್ಯಾ ಅಯ್ಯರ್ ಕಡಿಮೆ ಇಲ್ಲ. ನಟಿಯ ಫೋಟೋಗಳಿಗೆ ಲೈಕ್‌ಗಳ ಸುರಿಮಳೆ ಆಗಿದೆ. ಸ್ಟೈಲಿಶ್ ಡ್ರೆಸ್ನಲ್ಲಿ ಪೋಸ್ ಕೊಟ್ಟ ನಟಿ ಸಾನ್ಯಾ ಅಯ್ಯರ್, ಕೈಗೆ ಗೌರಿ ಸಿನಿಮಾ ಗ್ಲೌಸ್ ತೊಟ್ಟು, ಸಿನಿಮಾ ಪ್ರಮೋಷನಲ್ ಕೂಡ ಮಾಡಿದ್ದಾರೆ. ಸ್ಟಾರ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ಸಿನಿಮಾದಲ್ಲಿ ಸಾನ್ಯಾ ಅಯ್ಯರ್ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್‌ಗೆ ಸಾನ್ಯಾ ಜೋಡಿಯಾಗಿದ್ದಾರೆ.