newsics.com
ಮದುವೆ ವಿಚಾರವಾಗಿ ನಟಿ ಕೀರ್ತಿ ಸುರೇಶ್ ಸಿಕ್ಕಾಪಟ್ಟೆ ಸುದ್ದಿ ಆಗ್ತಿರುತ್ತಾರೆ. ನಾನು ಸಿಂಗಲ್ ಅಲ್ಲ ಎಂದಿರುವ ಕೀರ್ತಿ ಸುರೇಶ್ ಮಿಂಗಲ್ ಆಗಿರೋದು ಯಾರ ಜತೆ ಎಂದು ಕೇಳ್ತಿದ್ದಾರೆ
ಸೌತ್ ಸಿನಿಮಾ ನಟಿ ಕೀರ್ತಿ ಸುರೇಶ್ ಟಾಲಿವುಡ್ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಾರೆ. ಬಹುಬೇಡಿಕೆಯ ನಟಿಯಾಗಿರುವ ಕೀರ್ತಿ ಇದೀಗ ಬಾಲಿವುಡ್ ಇಂಡಸ್ಟ್ರಿಗೂ ಕಾಲಿಟ್ಟಿದ್ದಾರೆ. ಬಾಲನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ನಟಿ ನಾಯಕಿಯಾಗಿ ಮಿಂಚುತ್ತಿದ್ದಾರೆ.
ಸಂದರ್ಶನವೊಂದರಲ್ಲಿ ಮಾತಾಡಿದ ನಟಿ, ಒಂದು ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಟ್ರೋಲ್ಗಳಿಗೆ ಒಳಗಾಗಬೇಕಾಗಿದ್ದ ನಟಿ ನಾನೇ ಎಂದು ಕೀರ್ತಿ ಸುರೇಶ್ ಹೇಳಿಕೊಂಡಿದ್ದಾರೆ. ನಿಮ್ಮನ್ನು ಟ್ರೋಲ್ ಮಾಡುತ್ತಿದ್ದರೆ ಅದಕ್ಕೆ ಕಾರಣವಿರಬೇಕು ಅಲ್ವಾ ಎಂಬ ಪ್ರಶ್ನೆಗೆ ನಟಿ ಉತ್ತರಿಸಿದ್ದಾರೆ.
ನಾನು ಸಿಂಗಲ್ ಎಂದು ಯಾವತ್ತೂ ಹೇಳಿಲ್ಲ, ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲಿ ಖುಷಿಯಾಗಿದ್ದೇನೆ ಎಂದು ಕೀರ್ತಿ ಹೇಳಿದ್ದಾರೆ. ಮದುವೆ ಯಾವಾಗ ಎಂದು ಕೇಳುವವರಲ್ಲಿ ಅರ್ಧದಷ್ಟು ಮಂದಿ ಅವಿವಾಹಿತರೇ ಆಗಿರುತ್ತಾರೆ. ಆ ವಿಚಾರವಾಗಿ ಯಾರಾದರೂ ನನ್ನನ್ನು ಕೇಳಿದ್ರೆ ನಾನು ದೂರ ಸರಿಯುತ್ತೇನೆ ಎಂದು ಕೀರ್ತಿ ಹೇಳಿದ್ದಾರೆ.
ಪತ್ನಿಗೆ ಫೋನ್ನಲ್ಲೇ ತಲಾಖ್; ಪಾಕಿಸ್ತಾನದ ಯುವತಿ ವರಿಸಿದ ಭಾರತದ ವ್ಯಕ್ತಿ