newsics.com
ತೆಹ್ರಾನ್: ಇರಾನ್‌ನ ರಾಜಧಾನಿ ತೆಹ್ರಾನ್ ಸಮೀಪದ ಕರಾಜ್ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಮಹತ್ವದ ಸೇತುವೆಯ ಮೇಲೆ ಅಮೆರಿಕಾ–ಇಸ್ರೇಲ್ ಸಂಯುಕ್ತ ದಾಳಿ ನಡೆದಿರುವುದಾಗಿ ಇರಾನ್ ರಾಜ್ಯ ಮಾಧ್ಯಮ ವರದಿ ಮಾಡಿದೆ.
ಈ ದಾಳಿಯಲ್ಲಿ ಸೇತುವೆ ಭಾಗಶಃ ಧ್ವಂಸಗೊಂಡಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ತೆಹ್ರಾನ್ ಮತ್ತು ಕರಾಜ್ ನಗರಗಳನ್ನು ಸಂಪರ್ಕಿಸಲು ನಿರ್ಮಿಸಲಾಗುತ್ತಿದ್ದ ಈ ಸೇತುವೆ 136 ಮೀಟರ್ ಎತ್ತರ ಹೊಂದಿದ್ದು, ಮಧ್ಯಪ್ರಾಚ್ಯದ ಪ್ರಮುಖ ಎಂಜಿನಿಯರಿಂಗ್ ಯೋಜನೆಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತಿತ್ತು.
ದಾಳಿಯ ನಂತರ ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಹಾಗೂ ಸೇತುವೆಯ ಭಾಗಗಳು ಕುಸಿಯುತ್ತಿರುವ ದೃಶ್ಯಗಳು ಬಹಿರಂಗವಾಗಿವೆ.
ಇರಾನ್ ಮಾಧ್ಯಮ ಮಾಹಿತಿ ಪ್ರಕಾರ, ಮೊದಲ ದಾಳಿಯಲ್ಲಿ ಇಬ್ಬರು ನಾಗರಿಕರು ಮೃತಪಟ್ಟಿದ್ದು, ಗಾಯಾಳುಗಳಿಗೆ ನೆರವು ನೀಡಲು ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ತೆರಳಿದ ವೇಳೆ ಮತ್ತೊಮ್ಮೆ ದಾಳಿ ನಡೆದಿದೆ ಎಂದು ಹೇಳಲಾಗಿದೆ.
ಈ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸಾಮಾಜಿಕ ಜಾಲತಾಣದಲ್ಲಿ ದಾಳಿಯ ದೃಶ್ಯಗಳನ್ನು ಹಂಚಿಕೊಂಡು, ಇರಾನ್‌ನ ಅತಿ ದೊಡ್ಡ ಸೇತುವೆ ಕುಸಿದಿದೆ; ಮುಂದಿನ ಕ್ರಮಗಳು ಇನ್ನಷ್ಟೇ” ಎಂದು ಹೇಳಿರುವುದು ಗಮನಾರ್ಹ.
Adah Sharma ಕೇರಳ ಸ್ಟೋರಿ ನಟಿಯ ‘ಸೈಜ್’ ಕೇಳಿದ ನೆಟ್ಟಿಗನಿಗೆ ಅದಾ ಹೇಳಿದ್ದೇನು? ವಿಡಿಯೋ ನೋಡಿ
War news ಇಸ್ರೇಲ್, ಗಲ್ಫ್ ರಾಷ್ಟ್ರಗಳ ಮೇಲೆ ಮತ್ತೆ ಇರಾನ್‌ನಿಂದ ಕ್ಷಿಪಣಿ ದಾಳಿ