newsics.com
ಬೆಂಗಳೂರು: ಯುವಕನೊಬ್ಬ ಪೊಲೀಸರ ಮೇಲಿನ ಕೋಪಕ್ಕೆ ವಿಧಾನಸೌಧ ಮುಂದೆಯೇ ಬೈಕ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾನೆ.
ಟ್ರೆಕ್ಕಿಂಗ್ ಹೋಗಿ ಪೃಥ್ವಿ ನಾಪತ್ತೆಯಾಗಿದ್ದ. ದೂರು ನೀಡಲು ಚಳ್ಳಕೆರೆ ಪೊಲೀಸ್ ಠಾಣೆಗೆ ಯುವಕನ ತಾಯಿ ಹೋಗಿದ್ದರು. ಆ ವೇಳೆ ಪೊಲೀಸರು ಪೃಥ್ವಿ ತಾಯಿಯನ್ನು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎನ್ನಲಾಗಿದೆ.
ಈ ಕೋಪಕ್ಕೆ ವಿಧಾನಸೌಧ ಮುಂಭಾಗ ಬೈಕ್ ನಿಲ್ಲಿಸಿ ಯುವಕ ಬೆಂಕಿ ಇಟ್ಟಿದ್ದಾನೆ. ಯುವಕನನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದಿದ್ದಾರೆ.