newsics.com
ಕೋಲ್ಕತ್ತಾ: ಅಂದು ರಾತ್ರಿ ಬೆಳಗಾಗೋದ್ರಲ್ಲಿ ವೈದ್ಯೆ ಭೀಭತ್ಸವಾಗಿ ಸಾವನ್ನಪ್ಪಿದ್ದಳು. ಆಸ್ಪತ್ರೆಯ ಸಿಬ್ಬಂದಿ ಅಲ್ಲಿ ಹೋಗಿ ನೋಡೋದ್ರಲ್ಲಿ ಭೀಕರವಾಗಿ ಕೊಲೆಯಾಗಿರೋದು ಗೊತ್ತಾಗಿತ್ತು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ರಕ್ತದ ಮಡುವಿನಲ್ಲಿ ಬಿದ್ದಿರೋ ವೈದ್ಯೆಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಸಾಕ್ಷಿ ಪತ್ತೆಗೆ ಪೊಲೀಸರು ಜಾಲಾಡಿದ್ದಾರೆ. ಆವಾಗ ಬ್ಲೂಟೂಥ್ ಹೆಡ್‌ಫೋನ್ ಪತ್ತೆಯಾಗಿದೆ. ಅದುವೇ ಕೊಲೆಗಾರನ ಬೇಟೆಗೆ ಸುಳಿವು ನೀಡಿದೆ.
ಪರಿಶೀಲನೆ ವೇಳೆ ಸಿಕ್ಕ ಬ್ಲೂಟೂಥ್ ಹೆಡ್‌ಫೋನ್ ಅನ್ನು ಎಲ್ಲ ಶಂಕಿತರ ಮೊಬೈಲ್ ಫೋನ್‌ಗಳೊಂದಿಗೆ ಲಿಂಕ್ ಮಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಬ್ಲೂಟೂತ್ ಹೆಡ್‌ಫೋನ್ ಆರೋಪಿ ಸಂಜಯ್ ರಾಯ್‌ನ ಮೊಬೈಲ್ ಫೋನ್‌ಗೆ ಸ್ವಯಂಚಾಲಿತವಾಗಿ ಕನೆಕ್ಟ್ ಆಗಿದೆ. ಇದನ್ನೇ ಸಾಕ್ಷಿಯನ್ನಾಗಿ ಪರಿಗಣಿಸಿದ ಪೊಲೀಸರು ಆತನನ್ನು ಅಲ್ಲೇ ವಶಕ್ಕೆ ಪಡೆದುಕೊಂಡಿದ್ದಾರೆ.
ಈತನ ಮೊಬೈಲ್‌ನಲ್ಲಿ ನೂರಾರು ಅಶ್ಲೀಲ ಚಿತ್ರಗಳು. ಅವು ಸಹಜ ಲೈಂಗಿಕ ಸಂಬಂಧ ಹೊಂದಿರುವ ಚಿತ್ರಗಳಲ್ಲ. ಒಂದೊಂದ್ ವಿಡಿಯೋಗಳು ಚಿತ್ರ ವಿಚಿತ್ರವಾಗಿ, ಹೆಣ್ಣಿನ ಮೇಲೆ ಕ್ರೌರ್ಯ ನಡೆಸಿ ಮಾಡಿರುವ ಅತ್ಯಾಚಾರದ ವಿಡಿಯೋಗಳು. ಅದನ್ನು ನೋಡಿದ್ಮೇಲೆ ಈತನೊಬ್ಬ ಅಶ್ಲೀಲ ಚಿತ್ರ ವ್ಯಸನಿ ಅನ್ನೋದು ಪೊಲೀಸರಿಗೆ ಕನ್‌ಫರ್ಮ್ ಆಗುತ್ತೆ. ಅಶ್ಲೀಲ ಚಿತ್ರಗಳನ್ನು ನೋಡಿ ಅದೇ ರೀತಿಯಲ್ಲಿ ಅತ್ಯಾಚಾರಕ್ಕೆ ಪ್ರಯತ್ನ ಮಾಡ್ತಿದ್ದ ಅನ್ನೋದು ಗೊತ್ತಾಗಿದೆ. ವೈದ್ಯೆಯ ಮೇಲೆ ಅಮಾನುಷ ಕ್ರೌರ್ಯ ಮೆರೆದ ರೀತಿಯಲ್ಲಿಯೇ ಆತ ಇನ್ನಷ್ಟು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿರುವ ಸಾಧ್ಯತೆಯೂ ಇದೆ. ಆ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ಮಾಡ್ತಿದ್ದಾರೆ.
‘ಡಿಜಿಟಲ್ ಅರೆಸ್ಟ್’ ಅಂದ್ರೇನು ಗೊತ್ತಾ..? ಬ್ರೈನ್ ಕೂಡ ಹೈಜಾಕ್ ಆಗುತ್ತೆ… ಹುಷಾರಾಗಿರಿ!