newsics.com
ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆಯಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಸತತ 5ನೇ ದಿನವೂ ಭಾರಿ ಕುಸಿತ ಕಂಡಿದೆ.ಯುಗಾದಿ ಮತ್ತು ರಂಜಾನ್ ಹಬ್ಬದ ಸಂಭ್ರಮದ ನಡುವೆಯೇ ಚಿನ್ನದ ಬೆಲೆ ಇಳಿಕೆಯಾಗಿರುವುದು ಸಾಮಾನ್ಯ ವರ್ಗದ ಜನರಲ್ಲಿ ಮಂದಹಾಸ ಮೂಡಿಸಿದೆ.
ಇಂದು (ಮಾ.23) ಒಂದೇ ದಿನ ಚಿನ್ನದ ಬೆಲೆಯಲ್ಲಿ ₹5,950 ಇಳಿಕೆ, ಬೆಳ್ಳಿಯೂ ₹15,000 ಇಳಿಕೆಯಾಗಿದೆ.
24 ಕ್ಯಾರೆಟ್ ಚಿನ್ನ: 10 ಗ್ರಾಂ ಮೇಲೆ ₹5,950 ಇಳಿಕೆ.ಇಂದು ಶುದ್ಧ ಚಿನ್ನದ (24 ಕ್ಯಾರೆಟ್) ಬೆಲೆಯಲ್ಲಿ ಭಾರಿ ವ್ಯತ್ಯಾಸವಾಗಿದ್ದು, ಪ್ರತಿ ಗ್ರಾಮ್ಗೆ ಬರೋಬ್ಬರಿ 595 ರೂಪಾಯಿ ಇಳಿಕೆಯಾಗಿದೆ.
ಇಂದಿನ ದರ (1 ಗ್ರಾಮ್): ₹14,002
10 ಗ್ರಾಮ್ ಚಿನ್ನದ ಬೆಲೆ: ₹1,40,020 (₹5,950 ಕುಸಿತ)
22 ಕ್ಯಾರೆಟ್ ಆಭರಣ ಚಿನ್ನ: ₹5,450 ಕುಸಿತ
ಸಾಮಾನ್ಯವಾಗಿ ಆಭರಣ ತಯಾರಿಸಲು ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆಯೂ ಪಾತಾಳಕ್ಕೆ ಇಳಿದಿದೆ.
ಇಂದಿನ ದರ (1 ಗ್ರಾಮ್): ₹12,835 (₹545 ಇಳಿಕೆ)
10 ಗ್ರಾಮ್ ಚಿನ್ನದ ಬೆಲೆ: ₹1,28,350 (₹5,450 ಕುಸಿತ)
ಕಳೆದ 10 ದಿನಗಳ ಮಹಾ ಕುಸಿತದ ಲೆಕ್ಕಾಚಾರ:
24 ಕ್ಯಾರೆಟ್ (10 ಗ್ರಾಂ): ಬರೋಬ್ಬರಿ ₹19,640 ಇಳಿಕೆ
22 ಕ್ಯಾರೆಟ್ (10 ಗ್ರಾಂ): ಬರೋಬ್ಬರಿ ₹18,000 ಇಳಿಕೆ
ಬೆಳ್ಳಿ ಬೆಲೆಯಲ್ಲೂ ಭಾರಿ ಕುಸಿತ
ಬಂಗಾರದ ಬೆನ್ನಲ್ಲೇ ಬೆಳ್ಳಿಯ ದರವೂ ಗಣನೀಯವಾಗಿ ಇಳಿಕೆಯಾಗಿದೆ. ಇಂದು ಒಂದೇ ದಿನ ಒಂದು ಕೆಜಿ ಬೆಳ್ಳಿ ಮೇಲೆ 15,000 ರೂಪಾಯಿ ಇಳಿಕೆಯಾಗಿದ್ದು, ಆಭರಣ ಪ್ರಿಯರಿಗೆ ಡಬಲ್ ಧಮಾಕಾ ಸಿಕ್ಕಂತಾಗಿದೆ.
ಇಂದಿನ ಕೆಜಿ ಬೆಳ್ಳಿ ಬೆಲೆ: ₹2,30,000
ಬೆಲೆ ಇಳಿಕೆಗೆ ಕಾರಣವೇನು?
ಒಂದು ಕಡೆ ಇರಾನ್-ಇಸ್ರೇಲ್ ಯುದ್ಧ ಮತ್ತು ಅಮೆರಿಕಾ ನಡುವಿನ ಉದ್ವಿಗ್ನ ಪರಿಸ್ಥಿತಿ ಜಾಗತಿಕವಾಗಿ ಆತಂಕ ಸೃಷ್ಟಿಸಿದೆ. ಕಚ್ಚಾ ತೈಲದ ಬೆಲೆ ಏರುತ್ತಿದ್ದರೂ, ಹೂಡಿಕೆದಾರರು ಲಾಭದ ಹಾದಿ ಹಿಡಿದಿರುವುದು ಮತ್ತು ಮಾರುಕಟ್ಟೆಯ ಕೆಲವು ಆಂತರಿಕ ಬದಲಾವಣೆಗಳಿಂದಾಗಿ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ ಎನ್ನಲಾಗಿದೆ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ಬೆಂಗಳೂರು ₹1,40,020
ನಾಗ್ಪುರ ₹1,40,020
ಮುಂಬೈ ₹1,40,020
ಚೆನ್ನೈ ₹1,41,280
ಕೋಲ್ಕತ್ತಾ ₹1,40,020
ಪಾಟ್ನಾ ₹1,40,070
ಸೂರತ್ ₹1,40,070
ಚಂಡೀಗಢ ₹1,40,170
ಲಕ್ನೋ ₹1,40,170
Sensex falls ಷೇರು ಮಾರುಕಟ್ಟೆ ಭಾರೀ ಕುಸಿತ: ಸೆನ್ಸೆಕ್ಸ್ 1,400 ಪಾಯಿಂಟ್ಸ್ ಪತನ