newsics.com
ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ನಡೆಯುತ್ತಲೇ ಇವೆ. ಮೊನ್ನೆಯಷ್ಟೇ ನಗರದ ಹೃದಯ ಭಾಗದಲ್ಲಿ ತಡರಾತ್ರಿ ಐಶಾರಾಮಿ ಲ್ಯಾಂಬೋರ್ಗಿನಿ ಕಾರಿನ ಡ್ರಿಫ್ಟಿಂಗ್ ಸ್ಟಂಟ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಮದ್ಯ ಸೇವಿಸುತ್ತಲೇ ಬೈಕಿನಲ್ಲಿ ತ್ರಿಬಲ್ ರೈಡಿಂಗ್ ಮಾಡುತ್ತಿರುವ ಯುವಕರ ವಿಡಿಯೋ ವೈರಲ್ ಆಗಿದೆ.
ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸಂಚಾರ ಸುರಕ್ಷತೆಯ ಕಳವಳ ವ್ಯಕ್ತವಾಗಿದೆ.
ಬೆಂಗಳೂರಿನ ಬಿಟಿಎಂ ರಸ್ತೆಯಲ್ಲಿ ರಾತ್ರಿ ವೇಳೆ ಸ್ಕೂಟರ್‍ನಲ್ಲಿ ಮೂವರು ಯುವಕರು ತೆರಳುತ್ತಿರುವ ದೃಶ್ಯ ಕಂಡು ಬಂದಿದೆ. ಹಿಂಬದಿ ಕೂತಿದ್ದ ವ್ಯಕ್ತಿಯ ಕೈಯಲ್ಲಿ ಬಿಯರ್ ಬಾಟಲಿ ಇದ್ದು, ಕುಡಿಯುತ್ತಲೇ ಅಜಾಗರೂಕವಾಗಿ ಸಂಚಾರ ಮಾಡಿದ್ದಾರೆ. ಈ ವಿಡಿಯೋವನ್ನು ಕರ್ನಾಟಕ ಪೋರ್ಟ್‌ಫೊಲಿಯೋ ಎಕ್ಸ್ (@karnatakaportf) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬೆಂಗಳೂರು ಸಂಚಾರಿ ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ.
ಬೆಂಗಳೂರು ರಸ್ತೆಗಳು ಮೈದಾನವೇ?
ಕುಡಿದು ವಾಹನ ಚಲಾಯಿಬಾರದೆಂಬ ಸಂಚಾರ ನಿಯಮ ಇದೆ. ಹೀಗಿದ್ದರೂ ಬೆಂಗಳೂರಿನ ರಸ್ತೆಗಳಲ್ಲಿ ಮದ್ಯ ಸೇವಿಸುತ್ತಲೇ ತ್ರಿಬಲ್ ರೈಡಿಂಗ್ ಮಾಡಿದ್ದಾರೆ. ನಗರದ ರಸ್ತೆಗಳು ಆಟದ ಮೈದಾನವಾದಂತಾಗಿದೆ. ಕಾನೂನಿನ ಭಯ, ಕನಿಷ್ಠ ಸಾಮಾಜಿಕ ಜವಾಬ್ದಾರಿ ಇಲ್ಲದ ಇವರ ವರ್ತನೆಗೆ ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ. ಒಬ್ಬ ವ್ಯಕ್ತಿ ಬೈಕ್ ಸವಾರಿ ಮಾಡುವಾಗ ಬಿಯರ್ ಬಾಟಲಿ ಹಿಡಿದಿದ್ದು, ಹಿಂಬದಿ ಸವಾರ ರಸ್ತೆಯುದ್ದಕ್ಕೂ ಮದ್ಯಪಾನ ಮಾಡುತ್ತಲೇ ಮಧ್ಯ ಕೂತ ವ್ಯಕ್ತಿಯೊಂದಿಗೆ ಮಾತನಾಡುವ, ಕೈ ಸನ್ನೆ ಮಾಡುವ ದೃಶ್ಯಗಳು ವಿಡಿಯೋದಲ್ಲಿ ಕಾಣಿಸುತ್ತವೆ.
License to Kill? Drunk Triple Riders Treat Bengaluru Roads Like a Playground
Triple riding was observed on BTM Road, Bengaluru today, with some of the individuals not wearing helmets. Shockingly, one person was holding a beer bottle while riding, and the pillion rider was openly… pic.twitter.com/PsRPlWNOqq
— Karnataka Portfolio (@karnatakaportf) March 22, 2026
ಯಾವುದೇ ತಪ್ಪು ಇಲ್ಲದೆ ಅಪಘಾತದಲ್ಲಿ ಮೃತಪಟ್ಟರೆ ಪರಿಹಾರ ಕಡ್ಡಾಯ : ಹೈಕೋರ್ಟ್