newsics.com
ಬೆಂಗಳೂರು: ರಾಜ್ಯದಲ್ಲಿನ 4 ಪಾರ್ಲೆ-ಜಿ ಫ್ಯಾಕ್ಟರಿ ಬಂದ್ ಆಗಿದ್ದು, ಸದ್ಯ ದಾಸ್ತಾನಿನಲ್ಲಿರುವುದನ್ನು ರವಾನಿಸಲಾಗುತ್ತದೆ. ಮುಂಬರುವ ದಿನಗಳಲ್ಲಿ ಅಭಾವ ಎದುರಾಗುವ ಆತಂಕ ಸೃಷ್ಟಿಯಾಗಿದೆ.
ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ಹೊಸಪೇಟೆಯಲ್ಲಿ ನಾಲ್ಕು ಪಾರ್ಲೆ-ಜಿ ಬಿಸ್ಕೆಟ್ ಫ್ಯಾಕ್ಟರಿಗಳಿವೆ. ಇಲ್ಲಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ರವಾನೆಯಾಗುತ್ತವೆ. ಬಿಸ್ಕೆಟ್ ತಯಾರಿಕೆ ನಿರಂತರವಾಗಿ LPG ಗ್ಯಾಸ್ ಬೇಕೇ ಬೇಕು. LPG ಇಲ್ಲದಿದ್ದರೆ ತಯಾರಿ ಅಸಾಧ್ಯ. ಆದ್ರೆ, ಕಳೆದ 10 ದಿನಗಳಿಂದ LPG ಗ್ಯಾಸ್ ಫ್ಯಾಕ್ಟರಿಗಳಿಗೆ ಪೂರೈಕೆಯಾಗುತ್ತಿಲ್ಲ. ಹೀಗಾಗಿ 6 ದಿನಗಳಿಂದ ಬಿಸ್ಕೆಟ್ ಉತ್ಪಾದನೆ ಆಗುತ್ತಿಲ್ಲ.
ಹುಬ್ಬಳ್ಳಿ ಫ್ಯಾಕ್ಟರಿಗೆ ಪ್ರತಿನಿತ್ಯ 1.5 ಟನ್ LPG ಗ್ಯಾಸ್ ಬೇಕು. ನಿತ್ಯ 40 ಟನ್ ಬಿಸ್ಕೆಟ್‌ಗಳನ್ನ ಉತ್ಪಾದಿಸಲಾಗುತ್ತಿದೆ. ಅಲ್ಲದೆ, ಸುತ್ತಮುತ್ತಲಿನ ಜಿಲ್ಲೆ, ಹಳ್ಳಿಗಳಿಗೆ ರವಾನಿಸಲಾಗುತ್ತದೆ. ಹುಬ್ಬಳ್ಳಿಯಲ್ಲಿನ ಫ್ಯಾಕ್ಟರಿಯಲ್ಲಿ 100ಕ್ಕೂ ಅಧಿಕ ಕಾರ್ಮಿಕರು ಕೆಲಸಕ್ಕಿದ್ದಾರೆ. ಇದೀಗ LPG ಗ್ಯಾಸ್ ಸಿಗದ ಕಾರಣ ಉತ್ಪಾದನೆ ಮಾಡುತ್ತಿಲ್ಲ, ಅವರಿಗೂ ಕೆಲಸವಿಲ್ಲದಂತಾಗಿದೆ.
ದೇಶದಲ್ಲಿ ಸರ್ಕಾರದ ಮುಖ್ಯಸ್ಥರಾಗಿ ಅತಿ ದೀರ್ಘಕಾಲ ಸೇವೆ ಸಲ್ಲಿಸಿದ ಹಿರಿಮೆಗೆ ಪಾತ್ರರಾದ ಪ್ರಧಾನಿ ಮೋದಿ
ಹಾರ್ಮುಜ್ ದ್ವೀಪದ ಬಳಿ ಶತ್ರು ಎಫ್ -15 ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್ : ವಿಡಿಯೋ ನೋಡಿ
Work From Home ನಿರಾಕರಿಸಿದ ಕಂಪನಿ ವಿರುದ್ಧ ಕೇಸ್ ಹಾಕಿ ₹180 ಕೋಟಿ ಪರಿಹಾರ ಪಡೆದ ಉದ್ಯೋಗಿ
ಸಚಿವ ಶಿವರಾಜ್ ತಂಗಡಗಿ ದಿಢೀರ್ ಅಸ್ವಸ್ಥ: ತುಮಕೂರು ಆಸ್ಪತ್ರೆಯಲ್ಲಿ ಚಿಕಿತ್ಸೆ