Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > Papamochani ekadashi ಇಂದು ಪಾಪಮೋಚನಿ ಏಕಾದಶಿ: ರಾಶಿಗನುಗುಣವಾಗಿ ನೀವು ಹೀಗೆ ಮಾಡಿ ಪಾಪ ಕಳೆದುಕೊಳ್ಳಿ
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

Papamochani ekadashi ಇಂದು ಪಾಪಮೋಚನಿ ಏಕಾದಶಿ: ರಾಶಿಗನುಗುಣವಾಗಿ ನೀವು ಹೀಗೆ ಮಾಡಿ ಪಾಪ ಕಳೆದುಕೊಳ್ಳಿ

Share
5 Min Read
SHARE

newsics.com

ಜ್ಯೋತಿಷ್ಯ ಶಾಸ್ತ್ರದಲ್ಲಿ, ಏಕಾದಶಿಗೆ ಅತ್ಯಂತ ಪವಿತ್ರವಾದ ಸ್ಥಾನವನ್ನು ನೀಡಲಾಗಿದೆ. ಈ ದಿನ ವಿಷ್ಣು ದೇವನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುವುದರೊಂದಿಗೆ ಉಪವಾಸ ಹಾಗೂ ದಾನ, ಧರ್ಮಗಳನ್ನು ಮಾಡುವುದಕ್ಕೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ಇವುಗಳನ್ನು ಆಚರಿಸುವುದರಿಂದ ಜೀವನದಲ್ಲಿ ಸಕಾರಾತ್ಮಕ ಉತ್ಸಾಹವು ಹೆಚ್ಚಾಗುವುದು ಮತ್ತು ಎಲ್ಲಾ ರೀತಿ ಅಡೆತಡೆಗಳು ನಿಧಾನವಾಗಿ ದೂರವಾಗುವುದು ಎಂದು ಹೇಳಲಾಗುತ್ತದೆ.

ಇಂದು (ಮಾರ್ಚ್ 15) ಪಾಪಮೋಚನಿ ಏಕಾದಶಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುವುದು. ಈ ಶುಭ ದಿನ ವ್ಯಕ್ತಿಯು ತನ್ನ ಪಾಪಗಳಿಂದ ಮುಕ್ತಿಯನ್ನು ಪಡೆಯುವನು ಮತ್ತು ಜೀವನದಲ್ಲಿ ಸುಖ, ಸಮೃದ್ಧಿಗೆ ಉತ್ತಮ ಅವಕಾಶಗಳು ದೊರಕುವುದು ಎಂದು ಹೇಳಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ದಿನ ನಿಮ್ಮ ರಾಶಿಗನುಗುಣವಾಗಿ ಯಾವೆಲ್ಲ ಕೆಲಸಗಳನ್ನು ಮಾಡುವುದರೊಂದಿಗೆ ಯಾವ ವಸ್ತುಗಳನ್ನು ದಾನ ಮಾಡುವುದರಿಂದ ವಿಷ್ಣು ಹಾಗೂ ಲಕ್ಷ್ಮಿ ದೇವಿಯ ವಿಶೇಷ ಕೃಪೆಗೆ ಪಾತ್ರರಾಗಬಹುದು?

ಮೇಷ ರಾಶಿಗೆ ಸೇರಿದ ಜನರು ಪಾಪಮೋಚನಿ ಏಕಾದಶಿಯಂದು ವಿಷ್ಣು ದೇವನಿಗೆ ಹಳದಿ ಬಣ್ಣದ ಹೂವುಗಳನ್ನು ಅರ್ಪಿಸಿ ಮತ್ತು ಲಕ್ಷ್ಮಿ ದೇವಿಗೆ ಕೆಂಪು ಬಣ್ಣದ ಹೂವುಗಳನ್ನು ಅರ್ಪಿಸುವುದು ಒಳ್ಳೆಯದು. ಈ ದಿನ ನೀವು ಓಂ ನಮೋ ಭಗವತೇ ವಾಸುದೇವಾಯ ಮಂತ್ರವನ್ನು 11 ಬಾರಿ ಜಪಿಸಿರಿ. ಈ ಪರಿಹಾರ ಕ್ರಮಗಳನ್ನು ಅನುಸರಿಸುವುದರಿಂದ ನಿಮ್ಮ ವೃತ್ತಿ ಜೀವನದಲ್ಲಿ ಲಾಭ ದೊರಕುವುದರೊಂದಿಗೆ ಆರ್ಥಿಕ ಲಾಭವನ್ನು ಹೊಂದುವ ಯೋಗವು ಕೂಡ ನಿರ್ಮಾಣಗೊಳ್ಳುವುದು. ಈ ದಿನ ಮೇಷ ರಾಶಿಗೆ ಸೇರಿದ ಜನರು ಕೆಂಪು ಬಟ್ಟೆ ಅಥವಾ ಬೇಳೆ ಕಾಳುಗಳನ್ನು ದಾನ ಮಾಡುವುದರಿಂದ ಶುಭವಾಗುವುದು.

ವೃಷಭ ರಾಶಿಗೆ ಸೇರಿದ ಜನರು ಈ ಪಾಪಮೋಚನಿ ಏಕಾದಶಿ ದಿನ ವಿಷ್ಣು ದೇವನಿಗೆ ಹಳದಿ ಸಿಹಿ ಪದಾರ್ಥಗಳನ್ನು ಅರ್ಪಿಸುವುದು ಮತ್ತು ತುಳಸಿಯನ್ನು ಅರ್ಪಿಸುವುದರಿಂದ ನಿಮ್ಮ ಅಪೂರ್ಣ ಕೆಲಸಗಳು ಪೂರ್ಣಗೊಳ್ಳುವುದು ಎಂದು ಹೇಳಲಾಗುತ್ತದೆ. ಇದರೊಂದಿಗೆ ಈ ದಿನ ನೀವು ಅಗತ್ಯವಿರುವ ವ್ಯಕ್ತಿಗಳಿಗೆ ಹಳದಿ ಬಣ್ಣದ ವಸ್ತುಗಳನ್ನು ಅಂದರೆ ಅರಶಿನ ಅಥವಾ ಬೇಳೆಕಾಳುಗಳನ್ನು ದಾನ ಮಾಡುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುವುದು. ಈ ದಿನ ವೃಷಭ ರಾಶಿಗೆ ಸೇರಿದ ಜನರು ಹಾಲು, ಮೊಸರು ಅಥವಾ ಬಿಳಿ ಬಣ್ಣದ ಬಟ್ಟೆಯನ್ನು ದಾನ ಮಾಡುವುದರಿಂದ ವಿಶೇಷವಾಗಿ ಸಾಕಷ್ಟು ಪುಣ್ಯ ದೊರಕುವುದು.

ಮಿಥುನ ರಾಶಿಗೆ ಸೇರಿದ ಜನರು ಪಾಪಮೋಚನಿ ಏಕಾದಶಿಯಂದು ವಿಷ್ಣು ಸಹಸ್ರನಾಮವನ್ನು ಪಠಣ ಮಾಡಿ. ಜೊತೆಗೆ ಅಗತ್ಯವಿರುವವರಿಗೆ ಈ ದಿನ ಹಸಿರು ಬಟ್ಟೆಗಳನ್ನು ಅಥವಾ ಹಸಿರು ತರಕಾರಿಗಳನ್ನು ದಾನ ಮಾಡುವುದರಿಂದ ಶುಭವಾಗುವುದು. ಇದರಿಂದಾಗಿ ನಿಮ್ಮ ಮಾನಸಿಕ ಒತ್ತಡಗಳೆಲ್ಲವೂ ಕಡಿಮೆಯಾಗಲಿದೆ. ಈ ದಿನ ಹೆಸರು ಕಾಳು, ಹಸಿರು ಬಟ್ಟೆಗಳನ್ನು ದಾನ ಮಾಡುವುದರಿಂದ ಸಹ ಲಾಭ ದೊರಕುವುದು.

ಕರ್ಕಾಟಕ ರಾಶಿಗೆ ಸೇರಿದ ಜನರು ಈ ಶುಭ ದಿನದಂದು ವಿಷ್ಣು ದೇವನಿಗೆ ಕೇಸರಿಯುಕ್ತ ಹಾಲು ಮತ್ತು ಕಲ್ಲು ಸಕ್ಕರೆಯನ್ನು ಅರ್ಪಿಸಿ. ಇದರೊಂದಿಗೆ ಈ ದಿನ ನೀವು ವಿಷ್ಣು ಸಹಸ್ರನಾಮವನ್ನು ಪಠಣ ಮಾಡಿರಿ. ಇದರಿಂದಾಗಿ ನಿಮಗೆ ಅತ್ಯಂತ ಹೆಚ್ಚಿನ ಲಾಭ ದೊರಕುವುದು. ಈ ದಿನ ಕಟಕ ರಾಶಿಗೆ ಸೇರಿದ ಜನರು ಅಕ್ಕಿ, ಹಾಲು ಅಥವಾ ಬಿಳಿ ಬಣ್ಣದ ಸಿಹಿ ಪದಾರ್ಥಗಳನ್ನು ದಾನ ಮಾಡುವುದರಿಂದ ಶುಭ ಫಲಗಳ ಪ್ರಾಪ್ತಿಯಾಗುವುದು.

ಸಿಂಹ ರಾಶಿಗೆ ಸೇರಿದ ಜನರು ಪಾಪಮೋಚನಿ ಏಕಾದಶಿಯಂದು ವಿಷ್ಣುದೇವನ ದೇವಸ್ಥಾನಕ್ಕೆ ತೆರಳಿ, ಅಲ್ಲಿ ತುಪ್ಪದ ದೀಪವನ್ನು ಬೆಳಗಿಸಿ ಮತ್ತು ಬಡವರಿಗೆ ಬೆಲ್ಲ ಅಥವಾ ಕಡಲೆಯನ್ನು ದಾನ ಮಾಡಿರಿ. ಈ ಪರಿಹಾರ ಕ್ರಮವನ್ನು ಅನುಸರಿಸುವುದರಿಂದ ನಿಮಗೆ ಧನ ಲಾಭವನ್ನು ಹೊಂದುವ ಯೋಗ ನಿರ್ಮಾಣಗೊಳ್ಳಬಹುದು. ಸಿಂಹ ರಾಶಿಗೆ ಸೇರಿದ ಜನರು ಈ ದಿನ ಗೋಧಿ, ಬೆಲ್ಲ ಅಥವಾ ಕೆಂಪು ಬಣ್ಣದ ಬಟ್ಟೆಯನ್ನು ದಾನ ಮಾಡುವುದರಿಂದ ಸಹ ಲಾಭ ದೊರಕಬಹುದು.

ಕನ್ಯಾ ರಾಶಿಗೆ ಸೇರಿದ ಜನರು ಪಾಪಮೋಚನಿ ಏಕಾದಶಿ ದಿನದಂದು ವಿಷ್ಣು ದೇವನಿಗೆ ಹಳದಿ ಚಂದನವನ್ನು ಅರ್ಪಿಸಿ ಮತ್ತು ಹಣೆಗೆ ಚಂದನದಿಂದ ತಿಲಕವನ್ನು ಹಚ್ಚಿ. ಇದರಿಂದ ಜೀವನದಲ್ಲಿ ಎಲ್ಲಾ ರೀತಿಯ ಅಡೆತಡೆಗಳು ದೂರವಾಗುವುದು ಎಂದು ಹೇಳಲಾಗುತ್ತದೆ. ಕನ್ಯಾ ರಾಶಿ ಸೇರಿದ ಜನರು ಈ ದಿನ ಹಸಿರು ತರಕಾರಿಗಳು ಅಥವಾ ಬೇಳೆಕಾಳುಗಳನ್ನು ದಾನ ಮಾಡುವುದರಿಂದ ಶುಭವಾಗಬಹುದು.

ತುಲಾ ರಾಶಿಗೆ ಸೇರಿದ ಜನರು ಪಾಪಮೋಚನಿ ಏಕಾದಶಿ ದಿನ ವಿಷ್ಣು ಹಾಗೂ ಲಕ್ಷ್ಮಿ ದೇವಿಯನ್ನು ಒಟ್ಟಾಗಿ ಪೂಜಿಸುವುದು ಬಹಳ ಶುಭ. ಇದರೊಂದಿಗೆ ವಿಷ್ಣು ದೇವನಿಗೆ ಹಳದಿ ಸಿಹಿ ಪದಾರ್ಥಗಳನ್ನು ಅರ್ಪಿಸಿ. ಈ ಪರಿಹಾರ ಕ್ರಮಗಳನ್ನು ಅನುಸರಿಸುವುದರಿಂದ ನಿಮ್ಮ ಜೀವನದಲ್ಲಿ ಸಂತೋಷ ನೆಲೆಸುವುದು ಮತ್ತು ಸಮೃದ್ಧಿಯನ್ನು ಹೊಂದುವ ಉತ್ತಮ ಅವಕಾಶಗಳು ದೊರಕಬಹುದು. ಹಾಗೆ ತುಲಾ ರಾಶಿಗೆ ಸೇರಿದ ಜನರು ಈ ದಿನ ಸುಗಂಧಯುಕ್ತ ವಸ್ತುಗಳನ್ನು, ಸುಗಂಧ ದ್ರವ್ಯ ಅಥವಾ ಬಿಳಿ ಬಣ್ಣದ ಬಟ್ಟೆಯನ್ನು ದಾನ ಮಾಡುವುದು ಉತ್ತಮ ಎಂದು ಹೇಳಲಾಗುತ್ತದೆ.

ವೃಶ್ಚಿಕ ರಾಶಿಗೆ ಸೇರದ ಜನರು ಪಾಪಮೋಚನಿ ಏಕಾದಶಿಯಂದು ವಿಷ್ಣು ಸಹಸ್ರನಾಮವನ್ನು ಪಠಿಸಿರಿ ಮತ್ತು ಲಕ್ಷ್ಮಿ ದೇವಿಗೆ ಕುಂಕುಮವನ್ನು ಅರ್ಪಿಸುವುದರಿಂದ ಜೀವನದಲ್ಲಿನ ಸಮಸ್ಯೆಗಳು ದೂರವಾಗಬಹುದು. ಈ ಪರಿಹಾರ ಕ್ರಮವನ್ನು ಅನುಸರಿಸುವುದರಿಂದ ಜೀವನದಲ್ಲಿನ ಆರ್ಥಿಕ ಸಮಸ್ಯೆಗಳೆಲ್ಲವೂ ದೂರವಾಗಲಿದೆ. ಹಾಗೆ ವೃಶ್ಚಿಕ ರಾಶಿಗೆ ಸೇರಿದ ಜನರು ಈ ದಿನ ಕೆಂಪು ಹಣ್ಣು, ಬೆಲ್ಲ ಅಥವಾ ತಾಮ್ರದ ವಸ್ತುಗಳನ್ನು ದಾನ ಮಾಡುವುದು ಉತ್ತಮ ಎಂದು ಹೇಳಲಾಗುತ್ತದೆ.

ಧನುಸ್ಸು ರಾಶಿಗೆ ಸೇರಿದ ಜನರು ಪಾಪಮೋಚನಿ ಏಕಾದಶಿಯಂದು ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯಿಂದ ದೀಪವನ್ನು ಬೆಳಗಿಸಿ ಮತ್ತು ವಿಷ್ಣು ದೇವನನ್ನು ಶ್ರದ್ದಾ, ಭಕ್ತಿಯಿಂದ ಪೂಜಿಸುವುದರಿಂದ ಜೀವನದಲ್ಲಿ ಅದೃಷ್ಟ ನೆಲೆಸುವುದು ಎಂದು ಹೇಳಲಾಗುತ್ತದೆ. ಹಾಗೆ ಧನು ರಾಶಿಗೆ ಸೇರಿದ ಜನರು ಈ ದಿನ ಹಳದಿ ಬಟ್ಟೆ, ಅರಶಿನ ಅಥವಾ ಕಡಲೆಯನ್ನು ದಾನ ಮಾಡುವುದು ಶುಭವನ್ನುಂಟು ಮಾಡಬಹುದು.

ಮಕರ ರಾಶಿಗೆ ಸೇರಿದ ಜನರು ಪಾಪಮೋಚನಿ ಏಕಾದಶಿ ದಿನ ವಿಷ್ಣು ದೇವನಿಗೆ ಹಳದಿ ಬಟ್ಟೆಯನ್ನು ಅರ್ಪಿಸಿ ಮತ್ತು ನೀವು ಸಹ ಈ ದಿನ ವಿಷ್ಣು ದೇವರನ್ನು ಶ್ರದ್ದಾ ಭಕ್ತಿಯಿಂದ ಪೂಜಿಸುವುದರಿಂದ ಲಾಭ ದೊರಕಬಹುದು. ಈ ಪರಿಹಾರ ಕ್ರಮವನ್ನು ಅನುಸರಿಸುವುದರಿಂದ ನಿಮ್ಮ ಕೆಲಸ ಹಾಗೂ ವ್ಯಾಪಾರದಲ್ಲಿನ ಅಡೆತಡೆಗಳು ದೂರವಾಗಲಿದೆ. ಹಾಗೆ ಮಕರ ರಾಶಿಗೆ ಸೇರಿದ ಜನರು ಈ ಶುಭದಿನ ಕಪ್ಪು ಎಳ್ಳು, ಕಂಬಳಿ ಅಥವಾ ಲೋಹದ ವಸ್ತುಗಳನ್ನು ದಾನ ಮಾಡುವುದರಿಂದ ಲಾಭ ದೊರಕಬಹುದು.

ಕುಂಭ ರಾಶಿಗೆ ಸೇರಿದ ಜನರು ಪಾಪಮೋಚನಿ ಏಕಾದಶಿ ದಿನದಂದು ಬಡವರಿಗೆ ಬಟ್ಟೆಯನ್ನು ದಾನ ಮಾಡಿ ಮತ್ತು ವಿಷ್ಣು ದೇವನ ಮಂತ್ರಗಳನ್ನು ಸರಿಸುಮಾರು 11 ಬಾರಿ ಪಠಿಸಿರಿ. ಈ ಪರಿಹಾರ ಕ್ರಮವನ್ನು ಅನುಸರಿಸುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗಬಹುದು. ಹಾಗೆ ಕುಂಭ ರಾಶಿಗೆ ಸೇರಿದ ಜನರು ಈ ದಿನ ಎಳ್ಳು, ಎಣ್ಣೆ ಅಥವಾ ಕಂಬಳಿಯನ್ನು ದಾನ ಮಾಡುವುದರಿಂದ ಶುಭವಾಗಬಹುದು.

ಮೀನ ರಾಶಿಗೆ ಸೇರಿದ ಜನರು ಪಾಪಮೋಚನಿ ಏಕಾದಶಿ ದಿನ ವಿಷ್ಣು ದೇವನಿಗೆ ಕೇಸರಿಯುಕ್ತ ಹಾಲು ಅಥವಾ ಪಂಚಾಮೃತವನ್ನು ಅರ್ಪಿಸಿರಿ. ಇದರಿಂದಾಗಿ ನಿಮ್ಮ ಕೆಲಸದಲ್ಲಿನ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುವುದು ಮತ್ತು ವಿಷ್ಣು ದೇವನ ಅಪಾರ ಆಶೀರ್ವಾದವನ್ನು ಪಡೆಯಬಹುದಾಗಿದೆ. ಮೀನ ರಾಶಿಗೆ ಸೇರಿದ ಜನರು ಈ ಶುಭ ದಿನದಂದು ಹಳದಿ ಸಿಹಿತಿನಿಸು, ಅರಶಿನ ಅಥವಾ ಬಾಳೆಹಣ್ಣನ್ನು ದಾನ ಮಾಡುವುದರಿಂದ ಲಾಭ ದೊರಕಬಹುದು.

 

 

TAGGED:Today is Papamochani Ekadashi: Do this according to your zodiac sign to get rid of your sins
Share This Article
Facebook Twitter Copy Link Print
Previous Article ಮದುವೆ ನಿರಾಕರಿಸಿದ್ದಕ್ಕೆ ಹುಡುಗಿಗೆ ಬಲವಂತವಾಗಿ ಹೆಚ್‌ಐವಿ ರಕ್ತ ಇಂಜೆಕ್ಟ್ ಮಾಡಿದ ಯುವಕ!
Next Article NavIC Navigation System ನಾವಿಕ್ ನಲ್ಲಿ ದಿಕ್ಸೂಚಿ ಸಿಸ್ಟಂನಲ್ಲಿ ಭಾರೀ ದೋಷ : ರಾಷ್ಟ್ರೀಯ ಭದ್ರತೆಗೆ ಕಾಡಲಿದ್ಯಾ ಅಪಾಯ!

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?