https://youtube.com/shorts/JFDfzeRUAUw?si=UPiQjhCFAIkLXEhb
newsics.com
ನವದೆಹಲಿ: ರೈಲ್ವೆ, ಭಾರತೀಯ ಸೇನೆ ಮೊದಲಾದ ಸರ್ಕಾರಿ ಸಂಸ್ಥೆಗಳಿಗೆ ದಿಕ್ಸೂಚಿ (ಜಿಪಿಎಸ್ ರೀತಿ) ಸೇವೆಗಳನ್ನು ನೀಡಲು ಅಭಿವೃದ್ಧಿಪಡಿಸಿರುವ ‘ನಾವಿಕ್’ (ನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್ಸ್ಟಲೇಷನ್) ಉಪಗ್ರಹ ವ್ಯವಸ್ಥೆಯಲ್ಲಿ ಭಾರೀ ದೋಷವುಂಟಾಗಿದೆ.
ನಾವಿಕ್ ಎಂಬುದು ಭಾರತದ ಸ್ವದೇಶಿ ದಿಕ್ಸೂಚಿ ಉಪಗ್ರಹ ವ್ಯವಸ್ಥೆ. ಇದು ಸರ್ಕಾರಿ ಸಂಸ್ಥೆಗಳಿಗೆ ಜಿಪಿಎಸ್ ರೀತಿಯಲ್ಲಿ ದಿಕ್ಸೂಚಿಯಾಗಿ ಕೆಲಸ ಮಾಡುತ್ತದೆ. ಇದರ ಕನಿಷ್ಠ 4 ಉಪಗ್ರಹಗಳು ಸಂಪೂರ್ಣ ಕಾರ್ಯನಿರ್ವಹಣೆಯಲ್ಲಿರಬೇಕು. ಆದರೆ 10 ವರ್ಷಗಳ ಹಿಂದೆ, 2016ರ ಮಾ.10ರಂದು ಉಡಾವಣೆ ಮಾಡಲಾಗಿದ್ದ ಐಆರ್‌ಎನ್‌ಎಸ್‌ಎಸ್-1ಎಫ್ ಉಪಗ್ರಹವು ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಇದು ರಾಷ್ಟ್ರೀಯ ಭದ್ರತೆಯ ಬಗ್ಗೆ ಕಳವಳ ಉಂಟುಮಾಡಿದೆ.
ರೈಲುಗಳಿಗೆ ಸಮಯ, ಮಾರ್ಗ, ಸುರಕ್ಷತಾ ವ್ಯವಸ್ಥೆ ಇತ್ಯಾದಿಗಳ ಮಾಹಿತಿ ನೀಡುವಲ್ಲಿ ನಾವಿಕ್ ವ್ಯವಸ್ಥೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಇದೀಗ ಈ ವ್ಯವಸ್ಥೆ ಹಾನಿಗೊಂಡಿರುವುದರಿಂದ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಇನ್ನು ಇದು ಭಾರತೀಯ ಸೇನೆಗೆ ಕ್ಷಿಪಣಿ, ಡ್ರೋನ್, ಸೈನಿಕ ಕಾರ್ಯಾಚರಣೆ ಮೊದಲಾದವುಗಳಿಗೆ ಜಿಪಿಎಸ್ ರೀತಿಯಲ್ಲಿ ಮಾರ್ಗದರ್ಶನ ಮಾಡುತ್ತದೆ. ನಾವಿಕ್ ಕೈಕೊಟ್ಟರೆ ರಾಷ್ಟ್ರೀಯ ಭದ್ರತೆಗೂ ಅಪಾಯ ಉಂಟಾಗುವ ಆತಂಕವಿದೆ.