newsics.com
ಇಸ್ರೇಲ್-ಇರಾನ್-ಅಮೆರಿಕಾದ ಮಧ್ಯೆ ಮುಂದುವರೆದ ಯುದ್ಧದ ಪರಿಣಾಮಗಳು ಭಾರತದ ಮೇಲೆ ಪರಿಣಾಮ ಬೀರಿದೆ. ಭಾರತದ ಮಾರುಕಟ್ಟೆಗೆ ತೀವ್ರವಾಗಿ ತಟ್ಟಿವೆ.ದಿನ ಬಳಕೆಯ ವಸ್ತುಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ. ಅಡುಗೆ ಮನೆಯಿಂದ ಹಿಡಿದು ಚಿನ್ನದ ಅಂಗಡಿ ವರೆಗೂ ಜನ ಸಾಮಾನ್ಯರಿಗೆ ಬೆಲೆ ಏರಿಕೆಯ ಆಘಾತ ನೀಡಿದೆ.ಅಡುಗೆ ಎಣ್ಣೆಯ ಬೆಲೆ ಏರಿಕೆಯಷ್ಟೇ ಅಲ್ಲ, ದಿನನಿತ್ಯ ಬಳಸುವ ಹಲವು ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಬೆಂಗಳೂರಿನಂತಹ ನಗರಗಳಲ್ಲಿ ಈ ಬೆಲೆ ಏರಿಕೆಯ ಬಿಸಿ ಜನರ ಜೇಬಿಗೆ ನೇರವಾಗಿ ತಾಗುತ್ತಿದೆ. ಇದರಿಂದ ಜನರು ಚಿಂತೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದಿನಬಳಕೆ, ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರೀ ಹೆಚ್ಚಳ!ಸದ್ಯದ ಮಾರುಕಟ್ಟೆಯಲ್ಲಿ ದಿನ ಬಳಕೆಯ ವಸ್ತುಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯಲ್ಲಿ 10 ರಿಂದ 20% ಏರಿಕೆ ಕಂಡುಬಂದಿದೆ. ಅಪ್ಪಿತಪ್ಪಿ ಈ ಇರಾನ್ ಇಸ್ರೇಲ್, ಅಮೆರಿಕದ ಮಧ್ಯೆ ನಡೆಯುತ್ತಿರುವ ಈ ಯುದ್ಧ ಇನ್ನೊಂದು ವಾರ ಮುಂದುವರೆದರೆ ಬೆಲೆಗಳು 50% ವರೆಗೂ ಏರಬಹುದು ಎಂಬ ಆತಂಕ ವ್ಯಕ್ತವಾಗಿದೆ. ಇದು ಜನರಿಗೆ ನುಂಗಲಾರದ ತುಪ್ಪವಾಗುವ ಸಾಧ್ಯತೆ ದಟ್ಟವಾಗಿದೆ.ಬೆಲೆ ಏರಿಕೆಗೆ ಮುಖ್ಯ ಕಾರಣ ಹರ್ಮಾಜ್ ಜಲಸಂಧಿ (Strait of Hormuz)ಯಲ್ಲಿ ಸಾಗಣೆಯ ಅಡಚಣೆ. ಜಾಗತಿಕ ತೈಲ ಸರಬರಾಜಿನ ಸುಮಾರು 20% ಈ ಮಾರ್ಗದ ಮೂಲಕ ಹಾದುಹೋಗುತ್ತದೆ. ಇರಾನ್ ಹಡಗುಗಳನ್ನು ನಿಲ್ಲಿಸುವುದರಿಂದ ಸರಬರಾಜು ಕಡಿಮೆಯಾಗಿದ್ದು, ಹಡಗುಗಳು ಬದಲಿ ಮಾರ್ಗವಾದ ಗುಡ್ ಹೋಪ್ ಶಿಖರದ ಮೂಲಕ ಬರಬೇಕಾಗಿದೆ. ಇದು ಸಾಗಣೆ ವೆಚ್ಚವನ್ನು ಹೆಚ್ಚಿಸಿ, ಆಮದು ವೆಚ್ಚವನ್ನು ಏರಿಸಿದೆ. ಭಾರತ ತೈಲದ 85-90% ಆಮದು ಮಾಡಿಕೊಳ್ಳುವುದರಿಂದ ಇದರ ಪರಿಣಾಮ ತೀವ್ರವಾಗಿದೆ.ಬೆಲೆ ಏರಿಕೆಯ ಪ್ರಮುಖ ವಸ್ತುಗಳು ಯಾವುವು?ಅಡುಗೆ ಎಣ್ಣೆ: ಸೂರ್ಯಕಾಂತಿ, ಸೋಯಾಬೀನ್ ಮತ್ತು ಪಾಮ್ ಆಯಿಲ್ ಬೆಲೆಗಳು ಏರಿಕೆಯಾಗಿವೆ. ಯುದ್ಧದಿಂದ ತೈಲ ಸರಬರಾಜು ಅಡಚಣೆಗೊಳಗಾಗಿ ಎಣ್ಣೆ ಉತ್ಪಾದನೆ ಮತ್ತು ಸಾಗಣೆ ವೆಚ್ಚ ಹೆಚ್ಚಾಗಿದೆ.ಡ್ರೈ ಫ್ರೂಟ್ಸ್ ಮತ್ತು ದುಬಾರಿ ತರಕಾರಿಗಳು: ಖರ್ಜೂರ, ಬದಾಮಿ ಮುಂತಾದವುಗಳ ಬೆಲೆ ಏರಿಕೆಯಾಗಿದೆ. ಮಧ್ಯಪ್ರಾಚ್ಯದಿಂದ ಆಮದು ಮಾಡುವ ಈ ವಸ್ತುಗಳ ಸರಬರಾಜು ಕಡಿಮೆಯಾಗಿದೆ.ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ: ತೈಲ ಬೆಲೆ ಏರಿಕೆಯಿಂದ ಇಂಧನ ಬೆಲೆಗಳು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಭಾರತದ ತೈಲ ಆಮದಿನ ದೊಡ್ಡ ಭಾಗ ಈ ಮಾರ್ಗದ ಮೂಲಕ ಬರುತ್ತದೆ.ಚಿನ್ನ ಮತ್ತು ಬೆಳ್ಳಿ: ಸುರಕ್ಷಿತ ಆಸ್ತಿಯಾಗಿ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಯುದ್ಧದ ಭಯದಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದೆ.ರಸಗೊಬ್ಬರ (ಫರ್ಟಿಲೈಜರ್): ಸಲ್ಫರ್ ಮತ್ತು ಇತರ ಕಚ್ಚಾ ವಸ್ತುಗಳ ಸರಬರಾಜು ಅಡಚಣೆಯಿಂದ ರಸಗೊಬ್ಬರ ಬೆಲೆ ಏರಿಕೆಯಾಗಿದೆ. ಇದು ಕೃಷಿ ವೆಚ್ಚ ಹೆಚ್ಚಿಸಿ, ಆಹಾರ ಧಾನ್ಯಗಳ ಬೆಲೆಯನ್ನೂ ಏರಿಸಬಹುದು.ಪೆಟ್ರೋಕೆಮಿಕಲ್ಸ್, ಟಯರ್, ಕೆಮಿಕಲ್ಸ್: ತೈಲ ಆಧಾರಿತ ಉತ್ಪನ್ನಗಳ ಬೆಲೆ ಏರಿಕೆ. ಟಯರ್ ಮತ್ತು ಪ್ಲಾಸ್ಟಿಕ್ ಸಂಬಂಧಿತ ವಸ್ತುಗಳು ದುಬಾರಿಯಾಗುತ್ತವೆ.ಸೋಲಾರ್ ಪ್ಯಾನೆಲ್ ಮತ್ತು ಕೃಷಿ ಉಪಕರಣಗಳು: ಕೆಲವು ಕಚ್ಚಾ ವಸ್ತುಗಳ ಆಮದು ಅಡಚಣೆಯಿಂದ ಬೆಲೆ ಏರಿಕೆ.ಸದ್ಯದ ಮಾರುಕಟ್ಟೆಯಲ್ಲಿ ಈ ಎಲ್ಲಾ ವಸ್ತುಗಳ ಬೆಲೆಯಲ್ಲಿ 10-20% ಏರಿಕೆ ಕಂಡುಬಂದಿದ್ದು, ಯುದ್ಧ ಇನ್ನೊಂದು ವಾರ ಮುಂದುವರೆದರೆ ಬೆಲೆಗಳು 50% ವರೆಗೂ ಏರಬಹುದು ಎಂಬ ಆತಂಕವಿದೆ. ಇದರಿಂದ ಹಣದುಬ್ಬರ ಹೆಚ್ಚಾಗಿ, ಸಾಮಾನ್ಯ ಜನರ ಜೀವನ ವೆಚ್ಚ ಏರುತ್ತದೆ. ಬೆಂಗಳೂರಿನಂತಹ ನಗರಗಳಲ್ಲಿ ದಿನಸಿ ಅಂಗಡಿಗಳು, ಹೋಟೆಲ್‌ಗಳು ಮತ್ತು ಕುಟುಂಬಗಳು ಈ ಬೆಲೆ ಏರಿಕೆಯಿಂದ ನೇರ ಪ್ರಭಾವಕ್ಕೊಳಗಾಗುತ್ತಿವೆ.ಈ ಯುದ್ಧದ ಪರಿಣಾಮಗಳು ಭಾರತದ ಆರ್ಥಿಕತೆಗೆ ದೊಡ್ಡ ಆಘಾತ ನೀಡಲಿದೆ. ಸರ್ಕಾರ ಆಮದು ಮೂಲಗಳನ್ನು ವೈವಿಧ್ಯಗೊಳಿಸಿ, ಸಬ್ಸಿಡಿ ನೀಡಿ ಅಥವಾ ಬದಲಿ ಮಾರ್ಗಗಳನ್ನು ಹುಡುಕಿ ಪರಿಹಾರ ಕಂಡುಕೊಳ್ಳಬೇಕು. ಆದರೆ ಜಾಗತಿಕ ಶಾಂತಿಯೇ ಈ ಸಮಸ್ಯೆಗೆ ಶಾಶ್ವತ ಪರಿಹಾರ.