Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಇಸ್ರೇಲ್-ಇರಾನ್ ಸಮರಕ್ಕೆ ಶೀಘ್ರವೇ ಬ್ರೇಕ್?
ಪ್ರಮುಖವಿದೇಶ

ಇಸ್ರೇಲ್-ಇರಾನ್ ಸಮರಕ್ಕೆ ಶೀಘ್ರವೇ ಬ್ರೇಕ್?

Share
2 Min Read
SHARE

newsics.com

ಇರಾನ್ ಪರಮಾಣು ಕಾರ್ಯಕ್ರಮವನ್ನ ತಡೆಯುವ ಉದ್ದೇಶದೊಂದಿಗೆ ಇಸ್ರೇಲ್ ಹಾಗೂ ಅಮೆರಿಕ ಆರಂಭಿಸಿರುವ ಯುದ್ಧವು ಅತಿ ಶೀಘ್ರದಲ್ಲಿಯೇ ಅಂತ್ಯವಾಗುತ್ತದೆ ಎನ್ನಲಾಗಿದೆ.

ಅದಕ್ಕೆ ಪ್ರಮುಖ ಕಾರಣ: ಇರಾನ್ (Iran) ತನ್ನ ಪರಮಾಣು ಕಾರ್ಯಕ್ರಮವನ್ನು ತ್ಯಜಿಸಲು ಮುಂದಾಗಿರುವುದು!
ಹೌದು, ಇಷ್ಟು ದಿನ ಅಮೆರಿಕ ಹಾಗೂ ಅಮೆರಿಕದ ಮಿತ್ರ ರಾಷ್ಟ್ರಗಳ ಮೇಲೆ ಆಕ್ರಮಣಕಾರಿ ಧೋರಣೆ ತಳೆದಿದ್ದ ಇರಾನ್, ಈಗ ದಿಢೀರ್ ಆಗಿ ‘ಪರಮಾಣು ಒಪ್ಪಂದ’ಕ್ಕೆ ತಾನು ಸಿದ್ಧ ಎನ್ನುವ ಮೂಲಕ ಅಚ್ಚರಿ ಮೂಡಿಸಿದೆ. ಆದರೆ, ಈ ಶಾಂತಿ ಪ್ರಸ್ತಾಪದ ಹಿಂದೆ ಇರಾನ್ ಒಂದು ಬಲವಾದ ಷರತ್ತನ್ನು ವಿಧಿಸಿದೆ.
ಸ್ಕೈ ನ್ಯೂಸ್ ಅರೇಬಿಯಾ ವರದಿ ಮಾಡಿರುವಂತೆ, ಇರಾನ್‌ನ ಉಪ ವಿದೇಶಾಂಗ ಸಚಿವ ಮಜೀದ್ ತಖ್ತ್-ರಾವಂಚಿ ಅವರು ತಮ್ಮ ದೇಶದ ಪರಮಾಣು ಕಾರ್ಯಕ್ರಮವನ್ನು ತ್ಯಜಿಸಲು ಸಿದ್ದವಿದೆ ಎಂದು ಘೋಷಿಸಿದ್ದಾರೆ. ಏತನ್ಮಧ್ಯೆ, ಕಾರ್ಯಕ್ರಮವನ್ನ ತ್ಯಜಿಸಲು ಅಮೆರಿಕದ ಮುಂದೆ ಕೇವಲ ಒಂದೇ ಒಂದು ಪ್ರಮುಖ ಷರತ್ತನ್ನು ಇಟ್ಟಿದ್ದಾರೆ.

ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ತ್ಯಜಿಸಬೇಕಾದರೆ, ಅಮೆರಿಕವು ಅದಕ್ಕೆ ಪ್ರತಿಯಾಗಿ ಇರಾನ್‌ನ ಆರ್ಥಿಕ ಮತ್ತು ಭದ್ರತಾ ಹಿತಾಸಕ್ತಿಗಳನ್ನು ರಕ್ಷಿಸುವಂತಹ ಅತ್ಯಂತ ಸಮರ್ಪಕವಾದ ಮತ್ತು ಲಾಭದಾಯಕವಾದ ‘ಕೌಂಟರ್ ಆಫರ್’ ಅಥವಾ ತೃಪ್ತಿದಾಯಕ ಪರ್ಯಾಯ ಪ್ರಸ್ತಾಪವನ್ನು ನೀಡಬೇಕು ಎಂದು ಹೇಳಿದ್ದಾರೆ.

ಮುಂದುವರೆದು, ಯುರೇನಿಯಂ ಪುಷ್ಟೀಕರಣವು ಇರಾನ್‌ನ ವೈಜ್ಞಾನಿಕ ಸಾಧನೆ ಮತ್ತು ಸಾರ್ವಭೌಮ ಹಕ್ಕಾಗಿದೆ. ಇದನ್ನು ಸಂಪೂರ್ಣವಾಗಿ ಕೈಬಿಡಲು ಇರಾನ್ ಸಿದ್ಧವಿಲ್ಲದಿದ್ದರೂ, ಅಮೆರಿಕವು ಸರಿಯಾದ ಬೆಲೆ ಅಥವಾ ಕೊಡುಗೆಯನ್ನು ನೀಡಿದರೆ ಅದನ್ನು ಪರಿಗಣಿಸುವುದಾಗಿ ಸಚಿವರು ತಿಳಿಸಿದ್ದಾರೆ.

ಇರಾನ್ನ ‘ಕೌಂಟರ್ ಆಫರ್’ ಅರ್ಥವೇನು?

ವರದಿಗಳ ಪ್ರಕಾರ, ಇರಾನ್ ಮೇಲೆ ವಿಧಿಸಲಾಗಿರುವ ಎಲ್ಲಾ ಆರ್ಥಿಕ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದುಹಾಕುವುದು ಈ ‘ಪರ್ಯಾಯ ಕೊಡುಗೆ’ಯ ಪ್ರಮುಖ ಭಾಗವಾಗಿರಬೇಕು ಎಂದು ಇರಾನ್ ನಿರೀಕ್ಷಿಸುತ್ತಿದೆ ಎನ್ನಲಾಗಿದೆ.

ಒಟ್ಟಾರೆಯಾಗಿ, “ನೀವು ನಮಗೆ ಏನು ನೀಡುತ್ತೀರಿ?” ಎಂಬುದೇ ಇರಾನ್‌ನ ಸದ್ಯದ ಏಕೈಕ ಮತ್ತು ದೊಡ್ಡ ಪ್ರಶ್ನೆಯಾಗಿದೆ. ಅಮೆರಿಕದ ಕೊಡುಗೆಯು ಇರಾನ್‌ಗೆ ಆರ್ಥಿಕವಾಗಿ ದೊಡ್ಡ ಮಟ್ಟದ ಲಾಭ ತಂದುಕೊಟ್ಟರೆ ಮಾತ್ರ ಈ ಸಂಘರ್ಷ ಅಂತ್ಯಗೊಳ್ಳುವ ಸಾಧ್ಯತೆಯಿದೆ ಎನ್ನಬಹುದು.

ಒಮಾನ್‌ನ ಮಧ್ಯಸ್ಥಿಕೆಯಿಂದ ನಡೆದಿದ್ದರೂ ಇರಾನ್‌ನೊಂದಿಗೆ ಪರಮಾಣು ಒಪ್ಪಂದದ ಕುರಿತ ಬ್ಯಾಕ್‌ಚಾನೆಲ್ ಮಾತುಕತೆಗಳು ಅಂತಿಮವಾಗಿ ವಿಫಲವಾದವು. ಈ ಬೆಳವಣಿಗೆಯ ನಂತರ ಫೆಬ್ರವರಿ 28 ರಂದು ಅಮೆರಿಕಾ ಮತ್ತು ಇಸ್ರೇಲ್ ಸಂಯುಕ್ತವಾಗಿ ‘ಆಪರೇಷನ್ ಎಪಿಕ್ ಫ್ಯೂರಿ’ ಎಂಬ ಸೇನಾ ಕಾರ್ಯಾಚರಣೆಯನ್ನು ಆರಂಭಿಸಿದವು. ಈ ದಾಳಿಯಲ್ಲಿ ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಸಹ ಸಾವನ್ನಪ್ಪಿದ್ದಾರೆ.

High court verdict ವಾಟ್ಸ್ಯಾಪ್ ಚಾಟ್ ಆಧರಿಸಿ ವಿಚ್ಛೇದನ ನೀಡಲಾಗದು: ಹೈಕೋರ್ಟ್ ತೀರ್ಪು

TAGGED:Will there be a break in the Israel-Iran war soon?
Share This Article
Facebook Twitter Copy Link Print
Previous Article ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಸೋನು ಸೂದ್ ಕಡೆಯಿಂದ ಉಚಿತ ವಸತಿ ಸೌಲಭ್ಯ
Next Article ʼನಿಕ್ಕರ್‌ʼ ತೋರಿಸುವ ಗಂಡಸರ ಮೇಲೆ ಅತ್ಯಾ*ಚಾರ ಯಾಕ್‌ ಆಗಲ್ಲ! ;ಖ್ಯಾತ ನಟಿ ಟಾಂಗ್‌

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?