newsics.com
ಮಹಿಳೆಯರ ಉಡುಪುಗಳನ್ನು ಟೀಕಿಸುವವರಿಗೆ ನಟಿ ವರಲಕ್ಷ್ಮಿ ಶರತ್ ಕುಮಾರ್ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.. ಮಹಿಳೆ ಯಾವ ಬಟ್ಟೆ ಧರಿಸಬೇಕು ಎಂಬುವುದು ಅದು ಅವಳ ವೈಯಕ್ತಿಕ ನಿರ್ಧಾರ. ಸಮಾಜದಲ್ಲಿ ಪುರುಷರನ್ನು ಒಂದು ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತದೆ. ಮಹಿಳೆಯರನ್ನು ಇನ್ನೊಂದು ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಷ್ಟೇ ಅಲ್ಲದೆ.. ನಿಮ್ಮ ಸಹೋದರಿ ಶಾರ್ಟ್ಸ್ ಧರಿಸಿ ಹೊರಗೆ ಹೋದರೆ ಅವಳ ಅತ್ಯಾಚಾರ ಮಾಡುವ ಮನಸ್ಸಾಗುತ್ತದೆಯೇ? ಜೀನ್ಸ್ ಧರಿಸಿದ ಪುರುಷರು ಬಗ್ಗಿದಾಗ, ಅವರ ದೇಹ ಕಾಣುತ್ತೆ.. ಆಗಂತ ಅವರ ಮೇಲೆ ಅತ್ಯಾಚಾರ ಆಗಲ್ಲ ಏಕೆ..? ಗಂಡಸರು ನಿಕ್ಕರ್ ತೋರಿಸುವುದರಲ್ಲಿ ಯಾವುದೇ ತಪ್ಪಿಲ್ಲ.. ಮಹಿಳೆಯರ ಬ್ರಾ ಪಟ್ಟಿ ಕಂಡ್ರೆ ತಪ್ಪಾ..? ಅವರ ದೇಹ.. ಅವರ ಆಯ್ಕೆ.. ಅದನ್ನು ಯಾರೂ ನಿರ್ಣಯಿಸಬಾರದು ಎಂದು ವರು ಟಾಂಗ್ ನೀಡಿದರು..
ಅಷ್ಟಕ್ಕೆ ಸುಮ್ಮನಾಗದ ವರಲಕ್ಷ್ಮಿ.. ಪುರುಷರ ಉಡುಪುಗಳ ಬಗ್ಗೆ ಯಾರೂ ಹೆಚ್ಚು ಮಾತನಾಡುವುದಿಲ್ಲ, ಆದರೆ ಮಹಿಳೆಯರ ಬಟ್ಟೆಗಳ ಬಗ್ಗೆ ಅನಗತ್ಯವಾಗಿ ಟೀಕಿಸಲಾಗುತ್ತದೆ ಬೇಸರ ವ್ಯಕ್ತಪಡಿಸಿದರು.. ಅಲ್ಲದೆ, ಪ್ರತಿಯೊಬ್ಬ ಮಹಿಳೆಯೂ ತನ್ನ ಜೀವನವನ್ನು ತಾನು ಬಯಸಿದ ರೀತಿಯಲ್ಲಿ ಬದುಕುವ ಹಕ್ಕನ್ನು ಹೊಂದಿದ್ದಾಳೆ ಎಂದರು..
ಅಂದಹಾಗೆ ವರಲಕ್ಷ್ಮಿ ಪ್ರಸ್ತುತ “ಎಸ್. ಸರಸ್ವತಿ” ಎಂಬ ಚಿತ್ರದ ಮೂಲಕ ನಿರ್ದೇಶಕಿಯಾಗುತ್ತಿದ್ದಾರೆ. ತಮ್ಮ ಸಹೋದರಿ ಪೂಜಾ ಶರತ್‌ಕುಮಾರ್ ಜೊತೆ ದೋಸಾ ಡೈರೀಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಎಸ್ ಸರಸ್ವತಿ ಸಿನಿಮಾದಲ್ಲಿ ಪ್ರಕಾಶ್ ರಾಜ್, ಪ್ರಿಯಾಮಣಿ, ನವೀನ್ ಚಂದ್ರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಥಮನ್ ಸಂಗೀತ ನೀಡಿದ್ದಾರೆ.
High court verdict ವಾಟ್ಸ್ಯಾಪ್ ಚಾಟ್ ಆಧರಿಸಿ ವಿಚ್ಛೇದನ ನೀಡಲಾಗದು: ಹೈಕೋರ್ಟ್ ತೀರ್ಪು