Subscribe ನ್ಯೂಸಿಕ್ಸ್ ಕನ್ನಡ
newsics.com
ಹೂವಿನ ವ್ಯಾಪಾರಿ ಪ್ರದೀಪ್ ಎಂಬಾತನ ಮೇಲೆ ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಮಾಂಸಾಹಾರ ಸೇವನೆ ಆರೋಪ ಕೇಳಿ ಬಂದಿದೆ. ಪ್ರದೀಪ್ ದಾಸೋಹ ಭವನದ ದ್ವಾರದಲ್ಲಿ ಮಾಂಸಾಹಾರ ಸೇವಿಸುತ್ತಾ ಇರುವ ದೃಶ್ಯ ಸೆರೆಯಾಗಿದೆ. ಮಾಂಸಾಹಾರ ಸೇವಿಸುತ್ತಿದ್ದ ಪ್ರದೀಪ್‌ನನ್ನು ಗಮನಿಸಿದ ಭದ್ರತಾ ಸಿಬ್ಬಂದಿ, ಕ್ಲಾಸ್ ತೆಗೆದುಕೊಂಡಿದ್ದಾರೆ. ಸದ್ಯ ಮಾಂಸಾಹಾರ ಸೇವಿಸಿ ಸಿಕ್ಕಿ ಬಿದ್ದ ಪ್ರದೀಪ್‌ಗೆ ಕ್ಲಾಸ್ ತೆಗೆದುಕೊಂಡ ವಿಡಿಯೋ ವೈರಲ್ ಆಗಿದೆ.
ಇನ್ನು ಇಂದು ಕೇತುಗ್ರಸ್ಥ ಚಂದ್ರ ಗ್ರಹಣ ಹಿನ್ನಲೆಯಲ್ಲಿ ಮೈಸೂರಿನ ಸುಪ್ರಸಿದ್ಧ ಕ್ಷೇತ್ರ ಚಾಮುಂಡಿ ಬೆಟ್ಟದ ಚಾಮಂಡೇಶ್ವರಿ ದೇವಸ್ಥಾನ ಕ್ಲೋಸ್ ಆಗಿದೆ. ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8.30ರ ತನಕ ಯಾವುದೇ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ನೀಡುವುದಿಲ್ಲ. ಗ್ರಹಣ ಹಿನ್ನಲೆ ದೇವರಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗುತ್ತದೆ. ಗ್ರಹಣ ಬಳಿಕ ಶುದ್ಧಿಕಾರ್ಯ ನಡೆಸಿ ಬಳಿಕ ಎಂದಿನಂತೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಗ್ರಹಣ ಸಮಯದಲ್ಲಿ ದೇವರಿಗೆ ಕ್ಷೀರಾಭಿಷೇಕ ಸಲ್ಲಿಕೆ ಮಾಡಲಾಗುತ್ತದೆ.
ಭವಿಷ್ಯ ಹೇಳ್ತೀನಿ ಅಂತ ಸಿಬ್ಬಂದಿಗೆ ಕಿರಿಕಿರಿ ಮಾಡಿದ ಕಮಲಾಕರ್ ಭಟ್; ನಿನ್ನ ಭವಿಷ್ಯ ನಿನಗೆ ಗೊತ್ತಿಲ್ಲ ಎಂದ ಜೈಲರ್