Subscribe ನ್ಯೂಸಿಕ್ಸ್ ಕನ್ನಡ
newsics.com
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ವಸಂತ್ ನಾಯ್ಕ್ ಕೊಲೆ ಪ್ರಕರಣ ರಾಜ್ಯಾಧ್ಯಂತ ಸದ್ದು ಮಾಡಿತ್ತು. ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಸುಚಿತ್ರಾ ಅನೈತಿಕ ಸಂಬಂಧ ಬಟಾಬಯಲಾಗಿತ್ತು. ಸದ್ಯ ರೀಲ್ಸ್ ರಾಣಿ ಸುಚಿತ್ರಾ ಮತ್ತು ಕಮಲಾಕರ್ ಭಟ್ ಗ್ಯಾಂಗ್ ಜೈಲುಪಾಲಾಗಿದ್ದಾರೆ. ಇದೀಗ ಜೈಲಿನಲ್ಲಿ ಮುದ್ದೆ ಮುರಿಯುತ್ತಿರುವ ಆರೋಪಿ ಕಮಲಾಕರ್ ಭಟ್ ಬಗ್ಗೆ ಸುದ್ದಿಯೊಂದು ಹೊರಬಿದ್ದಿದೆ. ಜೈಲಿನಲ್ಲಿ ಕಮಲಾಕರ ಭಟ್ ಖೈದಿಗಳಿಗೆ ಜ್ಯೋತಿಷಿ ಶಾಸ್ತ್ರ ಹೇಳ್ತಿದ್ದಾರಂತೆ, ಅಷ್ಟೇ ಅಲ್ಲದೇ ಜೈಲು ಸಿಬ್ಬಂದಿಗೆ ಭವಿಷ್ಯ ಹೇಳ್ತಿನಿ ಅಂತಾ ಕಿರಿಕಿರಿ ಮಾಡ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಿದ್ದಾಪುರ ವಸಂತ್ ನಾಯ್ಕ್ ಕೊಲೆ ಪ್ರಕರಣ ಆರೋಪಿ ಜ್ಯೋತಿಷಿ ಕಮಲಾಕರ ಭಟ್, ಜೈಲಿನಲ್ಲೂ ಖೈದಿಗಳಿಗೆ ಜ್ಯೋತಿಷ್ಯ ಶಾಸ್ತ್ರ ಹೇಳುವುದನ್ನು ಮುಂದುವರಿಸಿದ್ದಾರಂತೆ. ಅಷ್ಟೇ ಅಲ್ಲದೇ ಜೈಲಲ್ಲೆ ವಶೀಕರಣದ ತಂತ್ರ ಮಾಡ್ತಿನಿ ಅಂತಾ ಹೇಳುತ್ತಿದ್ದಾರಂತೆ. ಹಾಗೇ ಜೈಲು ಸಿಬ್ಬಂದಿಗೂ ಭವಿಷ್ಯ ಹೇಳ್ತಿನಿ ಅಂತಾ ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ
ಆರೋಪಿ ಕಮಲಾಕರ್ ಭಟ್ ಜೈಲು ಸಿಬ್ಬಂದಿ, ಖೈದಿಗಳಿಗೆ ಮಾತ್ರವಲ್ಲದೇ ಜೈಲರ್ ಬಳಿ ಹೋಗಿ ನಿಮ್ಮ ಭವಿಷ್ಯ ಹೇಗಿದೆ ಅಂತಾ ನೊಡೋಣ ಎಂದಿದ್ದರಂತೆ. ಇದಕ್ಕೆ ನಿನ್ನ ಭವಿಷ್ಯ ನಿಂಗ್ ಗೊತ್ತಿದ್ರೆ ನೀನು ಯಾಕ್ ಇಲ್ಲಿ ಬಂದು ರೊಟ್ಟಿ ಮುರಿತ್ತಿದ್ದೆ? ಎಂದು ಗದರಿಸಿದ ಜೈಲರ್ ಬುದ್ದಿ ಹೇಳಿ ಕಳಿಸಿದ್ದರಂತೆ.
ಇನ್ನು, ಸಿದ್ದಾಪುರ ವಸಂತ್ ನಾಯ್ಕ್ ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪ್ರಕರಣದ ಪ್ರಕರಣದ ಚಾರ್ಜ್ ಶಿಟ್ ಸಲ್ಲಿಸಲು ವೇಗವಾಗಿ ಪ್ರಕ್ರಿಯೆ ನಡೆಯುತ್ತಿದೆ, ಕೇಸ್ನ ಟ್ರಯಲ್ ಕೂಡಾ ಬೇಗ ನಡೆಸಲು ಸಿದ್ಧತೆ ಮಾಡಲಾಗುತ್ತಿದೆ ಎಂದು ಎಸ್ಪಿ ದೀಪನ್ ಮಾಹಿತಿ ನೀಡಿದ್ದಾರೆ.
ವಸಂತ್ ನಾಯಕ್ ಕೊಲೆ ಪ್ರಕರಣ
ಕಳೆದ ತಿಂಗಳು ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ಸುಚಿತ್ರಾ ಹಾಗೂ ಕಮಲಾಕರ್ ಭಟ್ ಅನೈತಿಕ ಸಂಬಂಧ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ವಸಂದ್ ನಾಯ್ಕ್ ಎಂಬುವರು ಕೊಲೆಯಾಗಿದ್ದರು. ಈ ಘಟನೆಗೆ ಸಂಬಂಧಪಟ್ಟಂತೆ ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ್ ಭಟ್ ಸೇರಿ ಒಟ್ಟು 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.