Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ರಶ್ಮಿಕಾ ಅವರ ಬ್ರೈಡಲ್ ವೇಲ್ ಮೇಲಿತ್ತು ವಿಜಯ್‌ಗಾಗಿ ವಿಶೇಷ ಸಂದೇಶ
ಪ್ರಮುಖಮನರಂಜನೆ

ರಶ್ಮಿಕಾ ಅವರ ಬ್ರೈಡಲ್ ವೇಲ್ ಮೇಲಿತ್ತು ವಿಜಯ್‌ಗಾಗಿ ವಿಶೇಷ ಸಂದೇಶ

Share
2 Min Read
SHARE

https://youtube.com/shorts/OcRzQ68lM7k?si=kBWGhvCtygy6kinF

Subscribe ನ್ಯೂಸಿಕ್ಸ್ ಕನ್ನಡ

newsics.com

ಫೆಬ್ರವರಿ 2026ರಲ್ಲಿ ಉದಯಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಾಲಿವುಡ್ ತಾರಾಜೋಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ತೆಲುಗು ಸಂಪ್ರದಾಯದಂತೆ ನಡೆದ ವಿವಾಹದಲ್ಲಿ ವಧು ರಶ್ಮಿಕಾ ಮಂದಣ್ಣ ಧರಿಸಿದ್ದ ಉಡುಗೆ ಅಪ್ಪಟ ಸಾಂಪ್ರದಾಯಿಕತೆ ಹಾಗೂ ವೈಯಕ್ತಿಕ ಭಾವನೆಗಳೆರಡನ್ನೂ ಒಳಗೊಂಡಿತ್ತು. ಖ್ಯಾತ ಫ್ಯಾಷನ್ ಡಿಸೈನರ್ ಅನಾಮಿಕಾ ಖನ್ನಾ (Anamika Khanna) ವಿನ್ಯಾಸಗೊಳಿಸಿದ್ದ ಈ ಬ್ರೈಡಲ್ ಲುಕ್‌ನ ಪ್ರತಿಯೊಂದು ಡೀಟೇಲ್ಸ್ ಅತ್ಯಂತ ಕಲಾತ್ಮಕವಾಗಿತ್ತು
ರಶ್ಮಿಕಾ ಅವರ ಬ್ರೈಡಲ್ ಲುಕ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದು ಅವರ ತಲೆಯ ಮೇಲಿದ್ದ ಸಾಫ್ಟ್ ಗೋಲ್ಡ್ ಬಣ್ಣದ ‘ವೇಲ್’ (Veil – ಮುಸುಕು). ಈ ಉದ್ದನೆಯ ವೇಲ್‌ನ ಅಂಚಿನಲ್ಲಿ ಹಿತವಾದ ಚಿನ್ನದ ಬಣ್ಣದ ದಾರದಿಂದ ದೇವಾಲಯದ ಕಮಾನುಗಳು ಹಾಗೂ ಕಂಬಗಳ ವಿನ್ಯಾಸವನ್ನು ಎಂಬ್ರಾಯ್ಡರಿ ಮಾಡಲಾಗಿತ್ತು. ಎಲ್ಲಕ್ಕಿಂತ ವಿಶೇಷವಾಗಿ, ಈ ವೇಲ್‌ನ ತುದಿಯಲ್ಲಿ ‘in every lifetime’ (ಪ್ರತಿ ಜನ್ಮದಲ್ಲೂ/ಏಳೇಳು ಜನ್ಮಕ್ಕೂ) ಎಂಬ ಸಾಲನ್ನು ಬಹಳ ಸೂಕ್ಷ್ಮವಾಗಿ ಕಸೂತಿ ಮಾಡಲಾಗಿತ್ತು. ಇದು ಪತಿ ವಿಜಯ್ ದೇವರಕೊಂಡ ಅವರಿಗೆ ರಶ್ಮಿಕಾ ನೀಡಿದ ಸುಂದರ ಹಾಗೂ ಪ್ರೀತಿಯ ಭರವಸೆಯಾಗಿತ್ತು..
ರಶ್ಮಿಕಾ ಅವರು ಗಾಢವಾದ ಕೆಂಪು ಬಣ್ಣದ ಬಾರ್ಡರ್ ಇರುವ ‘ರಸ್ಟ್’ ಬಣ್ಣದ ಸೀರೆಯನ್ನು ಧರಿಸಿದ್ದರು. ಈ ಸೀರೆಯ ಬಾರ್ಡರ್ ಹಾಗೂ ಸೆರಗಿನಲ್ಲಿ ಹೈದರಾಬಾದ್‌ನ ಐತಿಹಾಸಿಕ ವಾಸ್ತುಶಿಲ್ಪ ಹಾಗೂ ದೇವಾಲಯಗಳ ಗರ್ಭಗುಡಿಯ ವಿನ್ಯಾಸವನ್ನು ಚಿನ್ನದ ಜರಿ ಮೂಲಕ ಅತ್ಯಂತ ಕಲಾತ್ಮಕವಾಗಿ ಮೂಡಿಸಲಾಗಿತ್ತು. ಸೀರೆಯ ನೆರಿಗೆಗಳಲ್ಲೂ ಪುರಾತನ ಶೈಲಿಯ ಹೂವಿನ ವಿನ್ಯಾಸಗಳಿದ್ದವು. ಇದಕ್ಕೆ ತಕ್ಕಂತೆ ಕಂಪ್ಲೀಟ್ ಗೋಲ್ಡ್ ಥ್ರೆಡ್‌ವರ್ಕ್ (Threadwork) ಇರುವ, ಕುಚ್ಚುಗಳನ್ನು ಹೊಂದಿದ್ದ ಗ್ರ್ಯಾಂಡ್ ಬ್ಲೌಸ್ ಧರಿಸಿದ್ದರು.
ಆಭರಣಗಳ ವಿಚಾರಕ್ಕೆ ಬಂದರೆ ರಶ್ಮಿಕಾ ಅವರು ಮೈತುಂಬಾ ಸಾಂಪ್ರದಾಯಿಕ ‘ಟೆಂಪಲ್ ಜ್ಯುವೆಲರಿ’ (Temple Jewellery) ಧರಿಸಿದ್ದರು. ಕುತ್ತಿಗೆಗೆ ಅಂಟಿಕೊಂಡಂತಿರುವ ಚೋಕರ್ ಅದರ ಕೆಳಗೆ ಉದ್ದನೆಯ ಸಾಂಪ್ರದಾಯಿಕ ಹಾರಗಳು, ಕಿವಿಗೆ ದೊಡ್ಡದಾದ ಸ್ಟೇಟ್‌ಮೆಂಟ್ ಜುಮುಕಿ, ಹಣೆಗೆ ಸಾಂಪ್ರದಾಯಿಕ ಮಾಂಗ್ ಟಿಕ್ಕಾ (Maang tikka), ಮುದ್ದಾದ ಮೂಗುಬೊಟ್ಟು ಹಾಗೂ ಕೈತುಂಬಾ ಚಿನ್ನದ ಬಳೆಗಳು ವಧುವಿನ ಕಳೆಯನ್ನು ಹೆಚ್ಚಿಸಿದ್ದವು.
ಇಷ್ಟೆಲ್ಲಾ ಗ್ರ್ಯಾಂಡ್ ಒಡವೆಗಳಿದ್ದ ಕಾರಣ, ರಶ್ಮಿಕಾ ಮೇಕಪ್ ಅನ್ನು ಬಹಳ ಸಾಫ್ಟ್ ಹಾಗೂ ನ್ಯಾಚುರಲ್ ಆಗಿ ಇಡಲಾಗಿತ್ತು. ಕಣ್ಣುಗಳಿಗೆ ಐಲೈನರ್, ನ್ಯಾಚುರಲ್ ಲಿಪ್‌ಸ್ಟಿಕ್ ಹಾಗೂ ಹಣೆಯ ಮೇಲೊಂದು ಸಣ್ಣ ಕೆಂಪು ಬಿಂದಿ ಕ್ಲಾಸಿಕ್ ಬ್ರೈಡಲ್ ಲುಕ್ ನೀಡಿತ್ತು. ಮಧ್ಯಕ್ಕೆ ಬೈತಲೆ ತೆಗೆದು ಬಹಳ ನೀಟ್ ಆಗಿ ಹೇರ್ ಸ್ಟೈಲ್ ಮಾಡಲಾಗಿತ್ತು
ಇನ್ನು ವರ ವಿಜಯ್ ದೇವರಕೊಂಡ ಅವರ ಲುಕ್ ಕೂಡ ರಶ್ಮಿಕಾಗೆ ಪರ್ಫೆಕ್ಟ್ ಮ್ಯಾಚ್ ಆಗಿತ್ತು. ಅನಾಮಿಕಾ ಖನ್ನಾ ಅವರೇ ವಿನ್ಯಾಸಗೊಳಿಸಿದ್ದ ದಂತದ ಬಣ್ಣದ ಧೋತಿ ಹಾಗೂ ಕೆಂಪು ಬಣ್ಣದ ಅಂಗವಸ್ತ್ರದಲ್ಲಿ ವಿಜಯ್ ಕಂಗೊಳಿಸಿದರು. ‘ವನಸಿಂಗಾರಂ’ ನೇಕಾರಿಕೆ ಹಾಗೂ ಹೈದರಾಬಾದ್‌ನ ಜವಳಿ ಪರಂಪರೆಯನ್ನು ಬಿಂಬಿಸುವ ಈ ಉಡುಗೆಯಲ್ಲಿ ಅರಣ್ಯ ಮತ್ತು ದೇವಾಲಯದ ಲಕ್ಷಣಗಳನ್ನು ಕಸೂತಿ ಮಾಡಲಾಗಿತ್ತು. ಇದು ಶಕ್ತಿ ಮತ್ತು ಪರಂಪರೆಯ ಸಂಕೇತವಾಗಿತ್ತು. ‘ಇನ್ ಎವೆರಿ ಲೈಫ್‌ಟೈಮ್’ ಎನ್ನುತ್ತಾ ಒಂದಾದ ಈ ಕ್ಯೂಟ್ ಜೋಡಿಯ ಮದುವೆಯ ಉಡುಗೆಗಳು ಅತ್ಯಂತ ಅರ್ಥಗರ್ಭಿತವಾಗಿದ್ದು, ಫ್ಯಾಷನ್ ಲೋಕದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿವೆ.

ಅಬಕಾರಿ ನೀತಿ ಪ್ರಕರಣ: ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಖುಲಾಸೆ

TAGGED:Rashmika's bridal veil had a special message for Vijay
Share This Article
Facebook Twitter Copy Link Print
Previous Article ಪೊಲೀಸರ ಮನೆಯನ್ನು ಬಿಡದ ಕಳ್ಳರು : ಕಾನ್ಸ್ಟೇಬಲ್ ಮನೆಗೆ ನುಗ್ಗಿ, ಚಿನ್ನಾಭರಣ ದರೋಡೆ!
Next Article ನೌಕರರನ್ನ ವಜಾಗೊಳಿಸೋ ಮುನ್ನ ವಿಚಾರಣೆ ಕಡ್ಡಾಯ : ಹೈಕೋರ್ಟ್ ತೀರ್ಪು

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?