https://youtube.com/shorts/N5x7_cDJ-pw?si=NiCZz1Vb_Is4d402
Subscribe ನ್ಯೂಸಿಕ್ಸ್ ಕನ್ನಡ
newsics.com
ಮಧ್ಯಪ್ರದೇಶದ ಸೆಹೋರ್ ಎಂಬಲ್ಲಿನ ನಿವಾಸಿ ವಿವೇಕ್ ರುಥಿಯಾ ಎಂಬವರು 109 ವರ್ಷಗಳಷ್ಟು ಹಳೆಯ ದಾಖಲೆಗಳ ಆಧಾರವಾಗಿಟ್ಟುಕೊಂಡು, 1917ರಲ್ಲಿ ನಮ್ಮ ಅಜ್ಜ ಬ್ರಿಟಿಷ್ ಸರ್ಕಾರಕ್ಕೆ 35 ಸಾವಿರ ರೂಪಾಯಿ ಸಾಲವಾಗಿ ನೀಡಿದ್ದರು ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಬ್ರಿಟಿಷ್ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಕಾರಣ ನನ್ನ ಅಜ್ಜ ಸೇಥ್ ಜುಮ್ಮಾ ಲಾಲ್ ರುಥಿಯಾ ಅವರಿಂದ ಸಾಲ ಪಡೆದಿತ್ತು. ಆದರೆ, 109 ವರ್ಷಗಳ ನಂತರವೂ ತಮ್ಮ ಕುಟುಂಬ ಹಣವನ್ನು ಮರಳಿ ಪಡೆದಿಲ್ಲ ಎಂದು ತಿಳಿಸಿದ್ದಾರೆ.
ಪ್ರಸ್ತುತ ಆ ಹಣದ ಮೌಲ್ಯ 1.5ರಿಂದ 2 ಕೋಟಿ ರೂಪಾಯಿ:”ಈ ಸಾಲದ ಕುರಿತು ಗೆಜೆಟ್ ಅಧಿಸೂಚನೆ ಪ್ರಕಟಿಸಿರಬೇಕು, ಇದು ವೈಯಕ್ತಿಕ ಸಾಲವಲ್ಲ, ಆದರೆ ಔಪಚಾರಿಕ ವಹಿವಾಟು ಎಂದು ಸಾಬೀತುಪಡಿಸುತ್ತದೆ. 1947ರಲ್ಲಿ ದೇಶ ಸ್ವಾತಂತ್ರ್ಯ ಪಡೆದ ನಂತರ ಸಾಲ ಪಾವತಿಸದೆ ಬ್ರಿಟಿಷರು ಭಾರತ ತೊರೆದರು” ಎನ್ನುತ್ತಾರೆ ವಿವೇಕ್ ರುಥಿಯಾ.
ವಿವೇಕ್ ರುಥಿಯಾ ಅವರ ಮಗ ಗೌತಮ್ ರುಥಿಯಾ ಮಾತನಾಡಿ, “1917ರಲ್ಲಿ ಒಂದು ರೂಪಾಯಿಯ ಮೌಲ್ಯ ಇಂದು 400 ರೂಪಾಯಿಗಳಿಗಿಂತ ಹೆಚ್ಚು. ಈ ಅನುಪಾತದಂತೆ ನೋಡಿದರೆ ಅಂದಿನ 35 ಸಾವಿರ ರೂಪಾಯಿ ಮೌಲ್ಯ ಈಗ 1.5ರಿಂದ 2 ಕೋಟಿ ರೂಪಾಯಿಗಳಾಗುತ್ತದೆ. ಇದಕ್ಕೆ ಬಡ್ಡಿ ಸೇರಿಸಿದರೆ ಸಾಲದ ಮೊತ್ತ ಮತ್ತಷ್ಟು ಹೆಚ್ಚಾಗುತ್ತದೆ” ಎಂದು ಹೇಳಿದರು.
109 ವರ್ಷಗಳ ಹಿಂದಿನ ಸಾಲ ವಿಚಾರ ಬಯಲಾಗಿದ್ದು ಹೀಗೆ:ಸಾಲ ನೀಡಿದ ಸುಮಾರು 20 ವರ್ಷಗಳ ನಂತರ, 1937ರಲ್ಲಿ ಸೇಠ್ ಜುಮ್ಮಾ ಲಾಲ್ ನಿಧನರಾದರು ಎಂದು ರುಥಿಯಾ ಕುಟುಂಬ ಹೇಳುತ್ತಿದೆ. ಅವರ ಮರಣಾ ನಂತರ ಈ ದಾಖಲೆಗಳನ್ನು ಅವರ ಮಗ ಸೇಠ್ ಮನಕ್ ಚಂದ್ರ ರುಥಿಯಾ ಅವರಿಗೆ ನೀಡಲಾಯಿತು. 2013ರಲ್ಲಿ ಅವರ ಮರಣದ ನಂತರ ಈ ದಾಖಲೆಗಳನ್ನು ವಿವೇಕ್ ರುಥಿಯಾ ಅವರಿಗೆ ಹಸ್ತಾಂತರಿಸಲಾಯಿತು. ಈ ದಾಖಲೆಗಳನ್ನು ಸುಮಾರು 22 ವರ್ಷಗಳ ಕಾಲ ಮನೆಯಲ್ಲಿ ಇರಿಸಲಾಗಿತ್ತು. ಆದರೆ ಇತ್ತೀಚೆಗೆ ಕುಟುಂಬ ಚರ್ಚೆಯ ಸಮಯದಲ್ಲಿ ಈ ವಿಷಯ ಬೆಳಕಿಗೆ ಬಂದಿತು ಎಂದು ತಿಳಿಸಿದರು.
ಹಣ ಮರಳಿ ಪಡೆಯುವ ಉದ್ದೇಶವಿಲ್ಲ:”ನಮ್ಮ ಕುಟುಂಬಕ್ಕೆ ಈ ಹಣವನ್ನು ಮರಳಿ ಪಡೆಯುವ ಉದ್ದೇಶವಿಲ್ಲ. ಹಣಕ್ಕಾಗಿ ಭಾರತ ಸರ್ಕಾರ ಅಥವಾ ಯಾವುದೇ ಅಂತಾರಾಷ್ಟ್ರೀಯ ನ್ಯಾಯಾಲಯವನ್ನು ಸಂಪರ್ಕಿಸಿಲ್ಲ. ಈ ಐತಿಹಾಸಿಕ ಸಂಗತಿಯನ್ನು ಬೆಳಕಿಗೆ ತರುವುದು ಮತ್ತು ಇತಿಹಾಸ ಪುಟಗಳಲ್ಲಿ ದಾಖಲಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಆ ಅವಧಿಯಲ್ಲಿ, ಅನೇಕ ಉದ್ಯಮಿಗಳು ಆಡಳಿತಾತ್ಮಕ ಅಗತ್ಯಗಳಿಗಾಗಿ ಬ್ರಿಟಿಷ್ ಸರ್ಕಾರಕ್ಕೆ ಹಣವನ್ನು ಸಾಲವಾಗಿ ನೀಡಿದ್ದರು. ಹಣವನ್ನು ಹಿಂತಿರುಗಿಸದಿದ್ದರೂ, ಅದರ ಸಂಪೂರ್ಣ ದಾಖಲೆಯು ಸರ್ಕಾರಿ ದಾಖಲೆಗಳಲ್ಲಿರಬೇಕು” ಎಂದರು.
ರೋಲ್ಸ್ ರಾಯ್ಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸೇಠ್ ಜುಮ್ಮಾ ಲಾಲ್:”ಆ ಕಾಲದಲ್ಲಿ ಸೇಠ್ ಜುಮ್ಮಾ ಲಾಲ್ ರೋಲ್ಸ್ ರಾಯ್ಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಬ್ರಿಟಿಷ್ ಅಧಿಕಾರಿಗಳು ಅವರ ದಿಟ್ಟತನದಿಂದ ಪ್ರಭಾವಿತರಾಗಿದ್ದರು. ಆ ಸಮಯದಲ್ಲಿ, ಭೋಪಾಲ್, ಇಂದೋರ್, ರಾಜ್‌ಗಢ ಮತ್ತು ಸೆಹೋರ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೇಠ್ ಜುಮ್ಮಾ ಲಾಲ್ ಅವರ ಹೆಸರನ್ನು ಬಹಳ ಗೌರವದಿಂದ ಕರೆಯಲಾಗುತ್ತಿತ್ತು. ಸೇಠ್ ಜುಮ್ಮಾ ಲಾಲ್ ಅವರು ಸಮಾಜದ ಸೇವೆ ಮಾಡುತ್ತಿದ್ದರು. ನಮ್ಮ ಕುಟುಂಬ ಸೇಠ್ ಜುಮ್ಮಾ ಲಾಲ್ ಅವರಿಗೆ ಸಂಬಂಧಿಸಿದ ಮತ್ತೊಂದು ದಾಖಲೆಯನ್ನು ಪತ್ತೆ ಮಾಡಿತು. ಇದರಲ್ಲಿ, ಅನಾರೋಗ್ಯ ಪೀಡಿತ ಮತ್ತು ಬಡ ಕುಟುಂಬಗಳಿಗೆ ಪರಿಹಾರ ಒದಗಿಸಲು 6,446 ರೂ.ಗಳ ಸಹಾಯವನ್ನು ನೀಡಿದ್ದಕ್ಕಾಗಿ ಬ್ರಿಟಿಷ್ ಸರ್ಕಾರವು ಕೃತಜ್ಞತೆಯನ್ನು ವ್ಯಕ್ತಪಡಿಸಿದೆ” ಎಂದು ಗೌತಮ್ ರುಥಿಯಾ ತಿಳಿಸಿದರು.
ರುಥಿಯಾ ಕುಟುಂಬಕ್ಕೆ ನೋಟಿಸ್ ಕಳುಹಿಸುವ ಹಕ್ಕಿದೆ:ವಕೀಲ ಧೀರಜ್ ಕುಮಾರ್ ಮಾತನಾಡಿ, “ಅಂತಾರಾಷ್ಟ್ರೀಯ ಕಾನೂನಿನಡಿಯಲ್ಲಿ ಯಾವುದೇ ಸಾರ್ವಭೌಮ ರಾಷ್ಟ್ರವು ಹಿಂದೆ ಮಾಡಿದ ಸಾಲಗಳನ್ನು ಮರುಪಾವತಿಸಲು ಸೈದ್ಧಾಂತಿಕವಾಗಿ ಜವಾಬ್ದಾರವಾಗಿರುತ್ತದೆ. ಹೀಗಾಗಿ ರುಥಿಯಾ ಕುಟುಂಬವು ಬ್ರಿಟಿಷ್ ಸರ್ಕಾರಕ್ಕೆ ನೋಟಿಸ್ ಕಳುಹಿಸಬೇಕು. ಆದಾಗ್ಯೂ, ಬ್ರಿಟಿಷ್ ಸರ್ಕಾರವು 1917 ರಲ್ಲಿ ರುಥಿಯಾ ಕುಟುಂಬದಿಂದ ಸಾಲ ಪಡೆದಾಗ ನಿಗದಿಪಡಿಸಿದ ಮರುಪಾವತಿ ಅವಧಿಯನ್ನು ಪರಿಗಣಿಸುವುದು ಸಹ ಮುಖ್ಯವಾಗಿದೆ. ಇದು ಸಾಲದ ಕಾಲಮಿತಿ ಮತ್ತು ಒಪ್ಪಂದದ ನಿಯಮಗಳನ್ನು ಅವಲಂಬಿಸಿರುತ್ತದೆ” ಎಂದರು.
ರಶ್ಮಿಕಾ-ವಿಜಯ್ ಮದುವೆಗೆ ಕನ್ನಡದ ಈ 11 ನಟ-ನಿರ್ದೇಶಕರಿಗೆ ಮಾತ್ರ ಆಹ್ವಾನ