newsics.com
ಮದುವೆಯ ನಂತರ ದಂಪತಿಗಳು ಏನು ಮಾಡಬೇಕು ಮತ್ತು ಮಾಡಬಾರದು ಎಂದು ಚಾಣಕ್ಯನೀತಿ ತುಂಬಾ ಅರ್ಥಪೂರ್ಣವಾಗಿ ತಿಳಿಸಿದೆ. ಇದು ದಂಪತಿಗಳ ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ಪ್ರಣಯವನ್ನು ಹೆಚ್ಚಿಸುತ್ತದೆ. ಯಾವುದೇ ವ್ಯಕ್ತಿಯಾದರೂ ತಮಗೆ ಗೌರವ ನೀಡುವ ವ್ಯಕ್ತಿಯನ್ನು ಪ್ರೀತಿಸುತ್ತಾರೆ. ಮದುವೆಯ ನಂತರ ಗಂಡ ಮತ್ತು ಹೆಂಡತಿ ಪರಸ್ಪರ ಗೌರವಿಸಬೇಕು. ಇದರಿಂದ ಇಬ್ಬರ ನಡುವಿನ ಪ್ರೀತಿ ಹೆಚ್ಚಾಗುತ್ತದೆ.
ಯಾವುದೇ ಸಂಬಂಧದಲ್ಲಿಯೇ ಆದರೂ ಗರ್ವ ಇರಬಾರದು. ಗರ್ವ ಹೊಂದಿರುವವರ ಸಂಬಂಧವು ಹೆಚ್ಚು ಕಾಲ ಉಳಿಯುವುದಿಲ್ಲ. ಆದ್ದರಿಂದ ಪತಿಯೇ ಆಗಲಿ ಅಥವಾ ಪತ್ನಿಯೇ ಆಗಿರಲಿ ತಮ್ಮನ್ನು ತಾವು ಹೆಚ್ಚು ಹೊಗಳಿಕೊಳ್ಳಬಾರದು. ಸಂಬಂಧದಲ್ಲಿ ಧೈರ್ಯವೂ ಮುಖ್ಯ. ಯಾವುದೇ ಸಮಯದಲ್ಲಿಯೇ ಆಗಲಿ ಯಾವುದಕ್ಕೂ ಹೆಚ್ಚು ಹೆದರಬಾರದು. ಬಂದ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬೇಕು. ವಿಫಲರಾದಾಗ ಧೃತಿಗೆಡಬಾರದು.
ಇನ್ನು ಯಾವಾಗಲೂ ಮಹಿಳೆಯರು ತಮ್ಮ ಬಟ್ಟೆಯನ್ನು ಬದಲಾಯಿಸುವುದನ್ನು ಪುರುಷರು ನೋಡಬಾರದು. ಅದು ಗಂಡನೇ ಆಗಿದ್ದರೂ ಸರಿ. ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಪುರುಷರು ಅದನ್ನು ದಾಟಬಾರದು. ಹಾಗಾಗಿ ಹೆಂಡತಿಯೇ ಆಗಿದ್ದರೂ ಆಕೆ ಬಟ್ಟೆ ಬದಲಾಯಿಸುವ ಗಂಡ ಆದವರೂ ನೋಡಬಾರದು.
ಮಾತೃತ್ವವು ಮಹಿಳೆಗೆ ದೇವರು ನೀಡಿದ ಕೊಡುಗೆಯಾಗಿದೆ. ತಾಯಿಯಾಗುವ ಮಹಿಳೆ ಪರಿಪೂರ್ಣತೆಯನ್ನು ಪಡೆಯುತ್ತಾಳೆ. ತಾಯಿಯ ಹಾಲು ಅಮೃತ. ಹುಟ್ಟಿದ ನಂತರ ಕನಿಷ್ಠ ಆರು ತಿಂಗಳವರೆಗೆ ತಾಯಿ ತನ್ನ ಮಗುವಿಗೆ ಹಾಲುಣಿಸಬೇಕು. ಆದರೆ ಮಹಿಳೆ ಹಾಲುಣಿಸುವುದನ್ನು ಪುರುಷರು ನೋಡಬಾರದು. ಮಹಿಳೆಯರು ಮೇಕಪ್ ಮಾಡಿಕೊಳ್ಳುವಾಗ ಪುರುಷರು ಆಕೆಯನ್ನು ನೋಡಬಾರದು. ಏಕೆಂದರೆ ಮಹಿಳೆಯರು ಮೇಕಪ್ ಮಾಡಿಕೊಳ್ಳುವಾಗ ಪುರುಷರು ಅವರನ್ನು ನೋಡಿದರೆ ಇಷ್ಟಪಡುವುದಿಲ್ಲ. ಅಲ್ಲದೇ ಪುರುಷರು ನೋಡುತ್ತಿದ್ದರೆ, ಮಹಿಳೆಯರಿಗೆ ಮೇಕಪ್ ಮಾಡಿಕೊಳ್ಳಲು ಮುಜುಗರ ಉಂಟಾಗುತ್ತದೆ.