https://youtube.com/shorts/tAQS6h_SZWA?si=vAoxcVAHQglCsru5
Subscribe ನ್ಯೂಸಿಕ್ಸ್ ಕನ್ನಡ
newsics.com
‘ಸರಿಗಮಪ ಲಿಟಲ್ ಚಾಂಪ್ಸ್’ ಹೊಸ ಆವೃತ್ತಿ ಶೀಘ್ರದಲ್ಲೇ ಆರಂಭವಾಗಲಿದೆ. ಆಡಿಷನ್‌ಗಳು ಇದೀಗ ಶುರುವಾಗಿದ್ದು, ಸ್ಥಳಕ್ಕೆ ಬರಲು ಸಾಧ್ಯವಾಗದ ಪ್ರತಿಭೆಗಳಿಗಾಗಿ ವಾಹಿನಿಯು ವಾಟ್ಸ್ಆ್ಯಪ್ ಹಾಗೂ ಆನ್‌ಲೈನ್ ಮೂಲಕ ಆಡಿಷನ್ ನೀಡುವ ವಿಶೇಷ ಅವಕಾಶವನ್ನು ಕಲ್ಪಿಸಿದೆ.
ಜೀ ಕನ್ನಡದ ಜನಪ್ರಿಯ ಸಂಗೀತ ರಿಯಾಲಿಟಿ ಷೋ ಇದಾಗಿದ್ದು,ಇದರ ಆಡಿಷನ್ಸ್ ಶುರುವಾಗಲಿದ್ದು, ಮಕ್ಕಳು ರೆಡಿಯಾಗಿ ಎಂದು ಇದಾಗಲೇ ಪ್ರೊಮೋ ರಿಲೀಸ್ ಮಾಡಲಾಗಿದೆ. ರಾಜ್ಯದ ವಿವಿಧ ಊರುಗಳಲ್ಲಿ ಮಕ್ಕಳಿಗೆ ಆಡಿಷನ್ ನಡೆಯುತ್ತಿದ್ದರೂ ಎಷ್ಟೋ ಪ್ರತಿಭಾನ್ವಿತ ಮಕ್ಕಳಿಗೆ ಆ ದಿನ ಹೋಗಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಆಡಿಷನ್ ನಡೆಯುವ ಜಾಗ ದೂರ ಇರುವ ಕಾರಣ, ಅವರಿಗೆ ಹೋಗಲು ಆಗುವುದಿಲ್ಲ. ಇಂಥವರಿಗಾಗಿಯೇ ಜೀ ವಾಹಿನಿ ಇದೀಗ ಗುಡ್ನ್ಯೂಸ್ ಕೊಟ್ಟಿದೆ.
ಒಂದು ವೇಳೆ ಆಡಿಷನ್ ನಡೆಯುತ್ತಿರುವ ಜಾಗಕ್ಕೆ ಮಕ್ಕಳನ್ನು ಕರೆದುಕೊಂಡು ಬರಲು ಸಾಧ್ಯವಾಗದೇ ಇದ್ದರೆ ಆನ್ಲೈನ್ನಲ್ಲಿ ಆಡಿಷನ್ ಕೊಡಬಹುದು ಅಥವಾ ವಾಟ್ಸ್ಆ್ಯಪ್ ಮೂಲಕವೂ ಕಳುಹಿಸಬಹುದು ಎಂದು ಜೀ ವಾಹಿನಿ ಹೇಳಿದೆ. ಕೆಳಗೆ ಇರುವ ಕ್ಯೂಆರ್ಕೋಡ್ ಸ್ಕ್ಯಾನ್ ಮಾಡಿಯೂ ಡಿಟೇಲ್ಸ್ ಪಡೆಯಬಹುದು.
ಇದಕ್ಕೆ ಇರುವ ಷರತ್ತುಗಳು,
- – ವಯಸ್ಸು 3 ರಿಂದ 15 ವರ್ಷ.
- – ಮೂರು ವಿಭಿನ್ನ ಶೈಲಿಯ ಹಾಡುಗಳನ್ನು ಕರೋಕೆ ಬಳಸದೇ ಹಾಡಬೇಕು. ಒಂದೂವರೆ ನಿಮಿಷಗಳ ಒಳಗೆ ಹಾಡು ಇರಬೇಕು.
- ವಾಹಿನಿಯ ಆಡಿಷನ್ಗೆ ಯಾವುದೇ ಹಣ ಇರುವುದಿಲ್ಲ. ಒಂದು ವೇಳೆ ವಾಹಿನಿಯ ಹೆಸರು ಹೇಳಿಕೊಂಡು ಯಾರೇ ಆದರೂ ಹಣ ಕೇಳಿದರೆ ಅದನ್ನು ಕೊಡಬೇಡಿ ಎಂದೂ ವಾಹಿನಿ ಹೇಳಿದೆ
- ನಿಮ್ಮ ಹಾಡು ಕಳುಹಿಸುವ ವಾಟ್ಸ್ಆ್ಯಪ್ ನಂಬರ್ 9513133724
ಪೋಕ್ಸೋ ಕೇಸ್‌ನಲ್ಲಿ ಜೈಲು ಶಿಕ್ಷೆ ಪ್ರಕಟಗೊಳ್ಳುತ್ತಿದ್ದಂತೆ ಅಪರಾಧಿ ನಾಪತ್ತೆ