https://youtube.com/shorts/iPk0YEWO1t8?si=tOj6kwL_UdC2E5Z8
Subscribe ನ್ಯೂಸಿಕ್ಸ್ ಕನ್ನಡ
newsics.com
ಇತ್ತೀಚೆಗೆ ಬಾಂಬೆ ಹೈಕೋರ್ಟ್ ಉದ್ಯಮಿ ವಿಜಯ್ ಮಲ್ಯ ಪ್ರಕರಣದ ವಿಚಾರಣೆ ನಡೆಸಿತ್ತು. ಮಲ್ಯ ಪರ ವಕೀಲರು ಹಾಜರಾಗಿದ್ದರು. ಇದೇ ವೇಳೆ ವಿಜಯ್ ಮಲ್ಯ ಪ್ರಕರಣ ವಿಚಾರಣೆ ನಡೆಸಬೇಕಾದರೆ ಮಲ್ಯ ಭಾರತಕ್ಕೆ ಮರಳಬೇಕು, ಕೋರ್ಟ್‌ಗೆ ಹಾಜರಾಗಬೇಕು. ಇಲ್ಲದಿದ್ದರೆ ವಿಚಾರಣೆ ನಡೆಸುವುದಿಲ್ಲ ಎಂದಿತ್ತು.
ಬಾಂಬೆ ಹೈಕೋರ್ಟ್ ಈ ಸೂಚನೆ ನೀಡಿದ ಬಳಿಕ ಇದೀಗ ವಿಜಯ್ ಮಲ್ಯ ವಕೀಲ, ಅಮಿತ್ ದೇಸಾಯಿ ಉದ್ಯಮಿ ಮಲ್ಯ ಅವರ ಮಹತ್ವದ ಸ್ಟೇಟ್‌ಮೆಂಟ್ ಸಲ್ಲಿಸಿದ್ದಾರೆ. ತನ್ನ ಪಾಸ್‌ಪೋರ್ಟ್ ಭಾರತ ಸರ್ಕಾರ ರದ್ದು ಮಾಡಿದೆ. ಹೀಗಾಗಿ ತನ್ನ ಬಳಿ ಸಕ್ರಿಯ ಪಾಸ್‌ಪೋರ್ಟ್ ಇಲ್ಲ. ಲಂಡನ್‌ನಲ್ಲೂ ಕಾನೂನು ಹೋರಾಟ ನಡೆಯುತ್ತಿದೆ. ಲಂಡನ್ ವ್ಯಾಪ್ತಿ ಬಿಟ್ಟು ಹೋಗುವಂತಿಲ್ಲ ಎಂದು ಕೋರ್ಟ್ ಸೂಚಿಸಿದೆ. ಹೀಗಾಗಿ ತನಗೆ ಈ ಸಮಯಕ್ಕೆ ಭಾರತಕ್ಕೆ ಮರಳುವ ದಿನಾಂಕ ನಿಗದಿಪಡಿಸಲು ಅಸಾಧ್ಯವಾಗುತ್ತಿದೆ ಎಂದು ಮಲ್ಯ ವಕೀಲರ ಮೂಲಕ ಸ್ಟೇಟ್‌ಮೆಂಟ್ ಸಲ್ಲಿಸಿದ್ದಾರೆ.
ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಆರೋಪಿ ಭಾರತದ ಕೋರ್ಟ್‌ಗಳ ಪ್ರಕರಣ ವಿಚಾರೆಯಲ್ಲಿ ಹಾಜರಾಗಬೇಕು ಎಂದಿಲ್ಲ. ಈ ಕುರಿತು ಭಾರತದ ಕಾನೂನು ಸ್ಪಷ್ಟಪಡಿಸುತ್ತದೆ. ಪರಾರಿಯಾಗಿರುವ ವಂಚಕ ಅನ್ನೋ ಹಣೆಪಟ್ಟಿ ಮಲ್ಯ ವಾಪಸ್ ಬಂದರೆ ಪರಾರಿ ಹೇಗಾಗುತ್ತೆ. ವಿಜಯ್ ಮಲ್ಯ ಭಾರತಕ್ಕೆ ಬರಲು, ಹಾಗೂ ಲಂಡನ್‌ನಿಂದ ಮರಳಲು ಕೆಲ ಕಾನೂನು ತೊಡಕುಗಳಿವೆ ಎಂದು ವಿಜಯ್ ಮಲ್ಯ ವಕೀಲರು ಕೋರ್ಟ್‌ಗೆ ಸ್ಪಷ್ಟಪಡಿಸಿದ್ದಾರೆ.
ವಿಜಯ್ ಮಲ್ಯ ತಮ್ಮ ಹೇಳಿಕೆಯನ್ನು ವಕೀಲರ ಮೂಲಕ ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿದ ಬಳಿಕ ನಡೆದ ವಿಚಾರಣೆಯಲ್ಲಿ ಬಾಂಬೆ ಹೈಕೋರ್ಟ್ ಈ ಕುರಿತು ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ. ಮಲ್ಯ ಪ್ರಕರಣದ ಕುರಿತು ಕೇಂದ್ರ ಸರ್ಕಾರದ ನಿಲುವು, ಆಗ್ರಹವೇನು ಎಂದು ಪ್ರಶ್ನಿಸಿದೆ.
ಮಹಿಳೆಯ ಜನನಾಂಗದಲ್ಲಿ ಪುರುಷನ ವೀರ್ಯ ವಿಸರ್ಜನೆಯಾಗದಿದ್ದರೆ ಅದು ಅತ್ಯಾ*ಚಾರವಲ್ಲ! ಹೈಕೋರ್ಟ್ ತೀರ್ಪು