Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಪತ್ನಿ ಮೇಲೆ ಅನುಮಾನಗೊಂಡು ಮಾವನನ್ನು ಹತ್ಯೆ ಮಾಡಿದ ಅಳಿಯ
ಕರ್ನಾಟಕಪ್ರಮುಖ

ಪತ್ನಿ ಮೇಲೆ ಅನುಮಾನಗೊಂಡು ಮಾವನನ್ನು ಹತ್ಯೆ ಮಾಡಿದ ಅಳಿಯ

Share
1 Min Read
SHARE

https://youtube.com/shorts/iPk0YEWO1t8?si=tOj6kwL_UdC2E5Z8

Subscribe ನ್ಯೂಸಿಕ್ಸ್ ಕನ್ನಡ

newsics.com

ಪತ್ನಿಯೊಂದಿಗೆ ಸೋದರ ಮಾವನಿಗೆ ಅಕ್ರಮ ಸಂಬಂಧವಿದೆ ಎಂಬ ಅನುಮಾನ ಹಿನ್ನೆಲೆಯಲ್ಲಿ ಅಳಿಯನೇ ಮಾವನನ್ನು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಮೃತನನ್ನು ನಯಾಜ್ ಖಾನ್ (38) ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಶಾಹಿದ್ ಖಾನ್ (33) ಎಂದು ಗುರುತಿಸಲಾಗಿದೆ. ಶಾಹಿದ್ ಖಾನ್ ಮೃತ ನಯಾಜ್ ಖಾನ್ ಅವರ ಸಹೋದರಿಯ ಪುತ್ರನಾಗಿದ್ದು, ಮಾವ–ಅಳಿಯ ಸಂಬಂಧ ಹೊಂದಿದ್ದರು.
ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಶಾಹಿದ್ ಖಾನ್ ಅವರ ಪತ್ನಿಯೊಂದಿಗೆ ನಯಾಜ್ ಖಾನ್ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನ ಕಳೆದ ಕೆಲ ದಿನಗಳಿಂದ ಶಾಹಿದ್ ಮನಸ್ಸಿನಲ್ಲಿ ಕಾಡುತ್ತಿತ್ತು. ಇದೇ ವಿಚಾರವಾಗಿ ಕುಟುಂಬದೊಳಗೆ ಈಗಾಗಲೇ ಅಸಮಾಧಾನ ಹಾಗೂ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ.
ಇಂದು ಬೆಳಿಗ್ಗೆ ನಯಾಜ್ ಖಾನ್ ಹೊಸಕೋಟೆ ಯಿಂದ ಶಾಹಿದ್ ಖಾನ್ ವಾಸವಿದ್ದ ಮಿಟಗಾನಹಳ್ಳಿ ಗ್ರಾಮಕ್ಕೆ ಬಂದಿದ್ದಾನೆ. ಈ ವೇಳೆ ಪತ್ನಿಯೊಂದಿಗೆ ಇರುವ ಸಂಬಂಧದ ವಿಚಾರವನ್ನು ಶಾಹಿದ್ ಪ್ರಶ್ನಿಸಿದ್ದಾನೆ. ಮಾತಿಗೆ ಮಾತು ಬೆಳೆದು ವಾಗ್ವಾದ ತೀವ್ರ ಸ್ವರೂಪ ಪಡೆದಿದೆ. ಈ ವೇಳೆ ಶಾಹಿದ್ ಖಾನ್, ಕೈಯಲ್ಲಿದ್ದ ಚಾಕುವಿನಿಂದ ನಯಾಜ್ ಖಾನ್‌ಗೆ ಹಲವು ಬಾರಿ ಇರಿದಿದ್ದಾನೆ. ಗಂಭೀರ ಗಾಯಗಳಿಂದ ನಯಾಜ್ ಖಾನ್ ಸ್ಥಳದಲ್ಲೇ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾನೆ.
ಕುಟುಂಬ ಹಿನ್ನೆಲೆ
ಆರೋಪಿ ಶಾಹಿದ್ ಖಾನ್‌ಗೆ ಮೂರು ಹೆಣ್ಣು ಮಕ್ಕಳು ಇದ್ದು, ಕುಟುಂಬ ಸಮೇತ ಮಿಟಗಾನಹಳ್ಳಿ ಪ್ರದೇಶದಲ್ಲಿ ಜಮೀನನ್ನು ಕಾಯುವ ಕೆಲಸ ಮಾಡುತ್ತಿದ್ದರು. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನವರಾದ ಶಾಹಿದ್ ಖಾನ್, ಕೆಲ ವರ್ಷಗಳಿಂದ ಕೋಲಾರ ಜಿಲ್ಲೆಯಲ್ಲಿ ನೆಲೆಸಿದ್ದರು. ಘಟನೆಯ ಮಾಹಿತಿ ಪಡೆದ ತಕ್ಷಣ ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿ ಶಾಹಿದ್ ಖಾನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಪಾನಿಪುರಿ ಪಾನಿಯಲ್ಲಿ ಇಲಿರಾಯ ಸ್ವಿಮ್ಮಿಂಗ್; ವೈರಲ್ ವಿಡಿಯೋ ನೋಡಿ

TAGGED:Suspicious background of wife; Son-in-law stabs father-in-law to death with knife
Share This Article
Facebook Twitter Copy Link Print
Previous Article ಪಾನಿಪುರಿ ಪಾನಿಯಲ್ಲಿ ಇಲಿರಾಯ ಸ್ವಿಮ್ಮಿಂಗ್; ವೈರಲ್ ವಿಡಿಯೋ ನೋಡಿ
Next Article ಈ ಬಾರಿ ವ್ಯಾಲೆಂಟೈನ್ಸ್ ದಿನಕ್ಕೆ ಹೂವಿಗಿಂತ ಕಾಂಡೋಮ್ ಮಾರಾಟ ದಾಖಲೆ

Popular Posts

ಬಿಪಿ ದಿಢೀರ್ ಹೆಚ್ಚಾದ್ರೆ ಟೆನ್ಷನ್​ ಆಗ್ಬೇಡಿ; ಜಸ್ಟ್ ಈ ರೀತಿ ಮಾಡಿ

2 Min Read

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read

ಹಸು ಹೋಗುವ ಮುನ್ನ ಮಾಡಿದ್ದು ನೋಡಿದ್ರೆ ಕರುಳು ಚುರುಕ್ ಎನ್ನುತ್ತೆ; ವೈರಲ್ ವಿಡಿಯೋ ನೋಡಿ

1 Min Read

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read

You Might Also Like

ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read
ಕರ್ನಾಟಕಪ್ರಮುಖ

‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

2 Min Read
ಕರ್ನಾಟಕಪ್ರಮುಖ

ಫೋನ್​ ಸ್ವಿಚ್​ ಆಫ್​; ರಾಜೀನಾಮೆ ಬಳಿಕ ರಾಮಲಿಂಗಾರೆಡ್ಡಿ ಹೋಗಿದ್ದು ಎಲ್ಲಿಗೆ?

1 Min Read
ಕರ್ನಾಟಕಪ್ರಮುಖ

ರಾಮಲಿಂಗಾರೆಡ್ಡಿ ರಿಸೈನ್​ ಬೆನ್ನಲ್ಲೇ ಕಾಂಗ್ರೆಸ್​​ ನಲ್ಲಿ ಖರ್ಗೆಗೆ ಸಾಮೂಹಿಕ ರಾಜೀನಾಮೆ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?