Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Currency marriage ದುಡ್ಡಿನ ಮದುವೆ! ವಧುವಿನ ಮೇಲೆ ಎಂಟೂವರೆ ಕೋಟಿ ನೋಟು ಚೆಲ್ಲಿದ ವರನ ಕುಟುಂಬಸ್ಥರು, ವೈರಲ್ ವಿಡಿಯೋ ನೋಡಿ
ದೇಶಪ್ರಮುಖವೈರಲ್

Currency marriage ದುಡ್ಡಿನ ಮದುವೆ! ವಧುವಿನ ಮೇಲೆ ಎಂಟೂವರೆ ಕೋಟಿ ನೋಟು ಚೆಲ್ಲಿದ ವರನ ಕುಟುಂಬಸ್ಥರು, ವೈರಲ್ ವಿಡಿಯೋ ನೋಡಿ

Share
2 Min Read
SHARE

https://youtube.com/shorts/iPk0YEWO1t8?si=tOj6kwL_UdC2E5Z8

Subscribe ನ್ಯೂಸಿಕ್ಸ್ ಕನ್ನಡ

newsics.com

ಪಂಜಾಬ್: ಇಲ್ಲಿ ನಡೆದ ಮದುವೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಈ ಮದುವೆ ಅದ್ಧೂರಿಯಾಗಿ ನಡೆದಿದೆ. ಕೋಟಿ ಕೋಟಿ ರೂಪಾಯಿ ಮದುವೆಗಾಗಿ ಖರ್ಚು ಮಾಡಿದ್ದಾರೆ. ಮದುವೆ ಮಂಟಪದಲ್ಲಿ ವರನ ಕುಟುಂಬಸ್ಥರು ವಧುವಿನ ಮೇಲೆ ಬರೋಬ್ಬರಿ 8.5 ಕೋಟಿ ರೂಪಾಯಿ ನಗದು ಹಣವನ್ನು ಹೂವಿನಂತೆ ಚೆಲ್ಲಿದ ವಿಡಿಯೋ ಒಂದು ವೈರಲ್ ಆಗಿದೆ.
ವರ ಹಾಗೂ ವಧು ವೇದಿಕೆ ಮೇಲಿದ್ದರೆ, ಸುತ್ತಲು ನಿಂತ ವರನ ಕುಟುಂಬಸ್ಥರು ನೋಟುಗಳ ಕಂತೆಗಳನ್ನು ವಧುವಿನ ಮೇಲೆ ಚೆಲ್ಲಿದ್ದಾರೆ. ಚೀಲ ಚೀಲದಲ್ಲಿ ನೋಟು ತಂದು ವಧುವಿನ ಮೇಲೆ ಚೆಲ್ಲಿದ್ದಾರೆ.

ವರ ಕೂಡ ಒಂದು ಚೀಲದಲ್ಲಿನ ಕಂತೆ ಕಂತೆ ನೋಟುಗಳನ್ನು ವಧುವಿನ ಮೇಲೆ ಚೆಲ್ಲುವ ಮೂಲಕ ಅದ್ಧೂರಿಯಾಗಿ ಮದುವೆ ಸಂಭ್ರಮ ಆಚರಿಸಿದ್ದಾರೆ.

ವೇದಿಕೆ ತುಂಬಾ ನೋಟುಗಳ ರಾಶಿ ತುಂಬಿಕೊಂಡಿವೆ. ಎತ್ತ ನೋಡಿದರೂ ನೋಟುಗಳ ರಾಶಿಯೇ ಕಾಣುತ್ತಿದೆ. ಬರೋಬ್ಬರಿ 8.5 ಕೋಟಿ ರೂಪಾಯಿ ಹಣವನ್ನು ವಧುವಿನ ಮೇಲೆ ಚೆಲ್ಲಲಾಗಿದೆ ಎಂದು ವಿಡಿಯೋ ಹೇಳುತ್ತಿದೆ.
ವರನ ತಂದೆ ಸೇರಿದಂತೆ ಸಂಬಂಧಿಕರು ಕೆಲ ಗಂಟೆಗಳ ಕಾಲ ಈ ರೀತಿ ನೋಟು ಚೆಲ್ಲಿದ್ದಾರೆ. ನೋಟಿನ ಅಭಿಷೇಕದ ಬಳಿಕ ಕುಟುಂಬಸ್ಥರು ಚೀಲದಲ್ಲಿ ನೋಟು ತುಂಬಲು ಹರಸಾಹಸ ಮಾಡಿದ್ದಾರೆ. ಹಲವರು ವೇದಿಕೆ, ನೆಲದ ಮೇಲೆ ರಾಶಿ ರಾಶಿಯಾಗಿ ಬಿದ್ದಿರುವ ನೋಟುಗಳನ್ನು ಬಾಚಿಕೊಂಡು ಚೀಲದಲ್ಲಿ ತುಂಬಿಸಿದ್ದಾರೆ. 40ಕ್ಕೂ ಹೆಚ್ಚು ಚೀಲಗಳಲ್ಲಿ ನೋಟುಗಳನ್ನು ತುಂಬಲಾಗಿದೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಹಲವರು ಪ್ರತಿಕ್ರಿಯಿಸಿದ್ದಾರೆ. ಈ ಮದುವೆಗೆ ನಮ್ಮನ್ನೂ ಕರೆಯಬಾರದೆ. ನಾವು ಊಟ ಬಡಿಸುವ, ಆತಿಥಿಗಳಿಗೆ ಸತ್ಕಾರ ನೀಡಲು ಸಹಾಯ ಮಾಡುತ್ತಿದ್ದೆವು. ಕೊನೆಯಲ್ಲಿ ನವ ಜೋಡಿಗಳಿಗೆ ಆಶೀರ್ವಾದ ಮಾಡಿ ನೀವು ಬೇಡ ಎಂದು ಎಸೆದ ಸ್ವಲ್ಪ ನೋಟು ಹೆಕ್ಕಿ ನಮ್ಮ ಪಾಡಿಗೆ ಬರುತ್ತಿದ್ದೆವು ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಇದೇ ವೇಳೆ ಕೆಲವರು ಈ ರೀತಿಯ ಶೋಕಿ ಜೀವನ ಒಳ್ಳೆಯದಲ್ಲ. ನಿಮ್ಮಲ್ಲಿ ದುಡ್ಡಿದ್ದರೆ, ಮದುವೆ ಖರ್ಚು ಮಾಡಿ, ಆದರೆ ನೋಟು ಚೆಲ್ಲಿ ಅದ್ಧೂರಿತನ, ಶ್ರೀಮಂತಿಕೆ ತೋರ್ಪಡಿಸುವುದು ಉತ್ತಮವಲ್ಲ ಎಂದು ಸಲಹೆ ನೀಡಿದ್ದಾರೆ.

https://www.instagram.com/reel/DU0ToY3k8sV/?igsh=MTE0a2d6Mmo3Zng3

ಇದಪ್ಪಾ ಅದೃಷ್ಟ ಅಂದ್ರೆ… ವಿಚ್ಛೇದನ ಬಳಿಕ ಕುಬೇರನಾದ ಪತಿ!

4 ಗಂಟೆಗೆ ₹5,000; ಬೆಂಗಳೂರಿಗೂ ಬಂತು ‘ಕಡಲ್ ಥೆರಪಿ’

ಜೂನ್ ನಲ್ಲಿ ನಟ ದರ್ಶನ್ ಜೈಲಿನಿಂದ ಬಿಡುಗಡೆ : ಖ್ಯಾತ ಜ್ಯೋತಿಷಿ ಭವಿಷ್ಯ

ಗಂಡನ ತಲೆಯ ಮೇಲೆ ಹೂ ಹಾಕಿ ಪೂಜಿಸಿದ ಮಹಿಳೆ: ವೈರಲ್ ವಿಡಿಯೋ ನೋಡಿ

TAGGED:Groom's family throws Rs 8.5 crore notes at bridewatch viral video
Share This Article
Facebook Twitter Copy Link Print
Previous Article 60 ಕೋಟಿ ಆಸ್ತಿ ಬಿಟ್ಟು ಹೋದ ವೈದ್ಯೆ: ಸಾವಿನ ಸುತ್ತ ಅನುಮಾನ ಹುತ್ತ
Next Article ಎಐನಿಂದ ಜಾಬ್ಸ್ ಕಣ್ಮರೆ, ಹೊಸ ಕಂಪನಿಗಳ ಸೃಷ್ಟಿ! – ಖೋಸ್ಲಾ

Popular Posts

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read

Devanahalli Gang Rape | ದೇವನಹಳ್ಳಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಅಪ್ರಾಪ್ತೆಗೆ ದೇವಾಲಯಕ್ಕೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ, ಮೂವರು ಆರೋಪಿಗಳ ಬಂಧನ

2 Min Read

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read

You Might Also Like

ಪ್ರಮುಖ

Want Success in Business? ವ್ಯಾಪಾರದಲ್ಲಿ ಯಶಸ್ಸು ಕಾಣಬೇಕಾ? ಈ ವಾಸ್ತು ಟಿಪ್ಸ್ ತಪ್ಪದೇ ಪಾಲಿಸಿ!

1 Min Read
ಅನಾವರಣಪ್ರಮುಖವಿದೇಶವೈರಲ್

Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!

2 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪ್ರಮುಖವಿದೇಶವೈರಲ್

Viral News ಫಿಫಾ ವಿಶ್ವಕಪ್ ವೇದಿಕೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ರನ್ನು ಪಕ್ಕಕ್ಕೆ ತಳ್ಳಿದರಾ ರೋಡ್ರಿ? ವಿಡಿಯೋ ನೋಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?