Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > 60 ಕೋಟಿ ಆಸ್ತಿ ಬಿಟ್ಟು ಹೋದ ವೈದ್ಯೆ: ಸಾವಿನ ಸುತ್ತ ಅನುಮಾನ ಹುತ್ತ
ಕರ್ನಾಟಕದೇಶಪ್ರಮುಖ

60 ಕೋಟಿ ಆಸ್ತಿ ಬಿಟ್ಟು ಹೋದ ವೈದ್ಯೆ: ಸಾವಿನ ಸುತ್ತ ಅನುಮಾನ ಹುತ್ತ

Share
2 Min Read
SHARE

https://youtube.com/shorts/iPk0YEWO1t8?si=tOj6kwL_UdC2E5Z8

Subscribe ನ್ಯೂಸಿಕ್ಸ್ ಕನ್ನಡ

newsics.com

ಭೋಪಾಲ್‌ನಲ್ಲಿ 61 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದ 81 ವರ್ಷದ ನೇತ್ರತಜ್ಞೆ ಹೇಮಲತಾ ಶ್ರೀವಾಸ್ತವ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಆರೋಗ್ಯವಾಗಿದ್ದ ಅವರು ಹಠಾತ್ ಅಸ್ವಸ್ಥರಾದ ಸಮಯದಲ್ಲಿ ಆಸ್ತಿ ದಾನ ಮಾಡಿದ ದಾಖಲೆಗಳಿಗೆ ಸಹಿ ಹಾಕಿದ್ದಾರೆ ಎನ್ನಲಾಗಿದ್ದು, ಅವರ ಸಾವು ಅನುಮಾನ ಮೂಡಿದೆ.

ಹೇಮಲತಾ ಅವರ ಹುಟ್ಟುಹಬ್ಬ ಜನವರಿ 12ರಂದು ಇತ್ತು. ಹೇಮಲತಾ ತಮ್ಮ ಮಗನ ಸ್ನೇಹಿತ ಡಾ. ಸುಮಿತ್ ಜೈನ್ ಮತ್ತು ಅವರ ಪತ್ನಿ ಪ್ರಾಚಿ ಜೈನ್ ಅವರೊಂದಿಗೆ ಕೇಕ್ ಕತ್ತರಿಸುತ್ತಿರುವ ವಿಡಿಯೋವೊಂದು ಈಗ ವೈರಲ್ ಆಗಿದೆ.

ಈ ಘಟನೆ ನಡೆದು ಎರಡು ದಿನಗಳ ನಂತರ, ಅವರ ಆರೋಗ್ಯ ಹದಗೆಟ್ಟಿದೆ. ಜನವರಿ 15 ರ ಹೊತ್ತಿಗೆ, ಅವರ ಸ್ಥಿತಿ ಗಂಭೀರವಾಗಿತ್ತು. ಈ ದಿನಗಳಲ್ಲಿ ಒಂದು ದಿನ, ರೈಟ್ ಟೌನ್‌ನಲ್ಲಿ 11,000 ಚದರ ಅಡಿ ಭೂಮಿಯನ್ನು ಡಾ. ಸುಮಿತ್‌ಗೆ ದಾನ ಮಾಡುವ ದಾಖಲೆಗಳಿಗೆ ಅವರು ಸಹಿ ಹಾಕಿದರು ಎನ್ನಲಾಗಿದ್ದು ಈ ವಿಚಾರ ಈಗ ವಿವಾದಕ್ಕಿಡಾಗಿದೆ. ಹೇಮಲತಾ ತಮ್ಮ ಮಗ ಹಾಗೂ ಪತಿಯ ಹೆಸರಿನಲ್ಲಿ ಅವರ ಸ್ಮರಣಾರ್ಥ ಆಸ್ಪತ್ರೆ ನಿರ್ಮಿಸಲು ಸ್ವಯಂಪ್ರೇರಣೆಯಿಂದ ಭೂಮಿಯನ್ನು ದಾನ ಮಾಡಿದ್ದಾರೆ ಎಂದು ಸುಮಿತ್ ಹೇಳಿದ್ದಾರೆ.

ವೈದ್ಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿ ಇಲ್ಲದೇ ಇದ್ದ ಸಮಯದಲ್ಲಿ ಬೆದರಿಕೆ ಹಾಗೂ ಒತ್ತಡ ಹಾಕಿ ಅವರಿಂದ ದಾಖಲೆಗಳಿಗೆ ಸಹಿ ಹಾಕಿಸಿಕೊಳ್ಳಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘವು ಆರೋಪಿಸಿದೆ. ಈ ನಡುವೆ, ಗಾಯತ್ರಿ ಮಂದಿರ ಎಂಬ ಟ್ರಸ್ಟ್ ಮುಂದೆ ಬಂದು, ವೈದ್ಯರು ಸಂಪೂರ್ಣ ಆಸ್ತಿಯನ್ನು ತಮಗೆ ನೀಡಲು ಬಯಸಿದ್ದಾರೆಂದು ಹೇಳಿಕೊಂಡಿದೆ. ಹೇಮಲತಾ ಅವರ ಸಹೋದರಿಯರಲ್ಲಿ ಒಬ್ಬರಾದ ಕನಕ್ ಲತಾ ಮಿಶ್ರಾ ಈ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಆದರೂಮತ್ತೊಬ್ಬ ಸಹೋದರಿ ಶಾಂತಿ ಮಿಶ್ರಾ ಅವರು ಹೇಮಲತಾ ಅವರ ದೇಹವನ್ನು ಸ್ವೀಕರಿಸಿದ್ದು, ಆಸ್ತಿಯ ಮೇಲೆ ಕಾನೂನುಬದ್ಧ ಹಕ್ಕುಗಳನ್ನು ಪಡೆಯಲು ಮುಂದೆ ಬಂದಿದ್ದಾರೆ.

ಆಸ್ತಿ ವಿವಾದ ತೀವ್ರಗೊಳ್ಳುತ್ತಿದ್ದಂತೆ, ಜಿಲ್ಲಾಧಿಕಾರಿ ರಾಘವೇಂದ್ರ ಸಿಂಗ್ ಅವರು ನಿರ್ಣಾಯಕ ವಿಚಾರ ಬಹಿರಂಗಪಡಿಸಿದ್ದು, ಈಗ ಎಲ್ಲರೂ ಹಕ್ಕು ಸಾಧಿಸುತ್ತಿರುವ ಭೂಮಿ ಪುರಸಭೆಯ ಗುತ್ತಿಗೆಯಲ್ಲಿದೆ ಮತ್ತು ಅದನ್ನು ಕಾನೂನುಬದ್ಧವಾಗಿ ಬೇರೆಯವರಿಗೆ ದಾನ ಮಾಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ತಮ್ಮ ಮರಣಕ್ಕೂ ಮೊದಲು ನೀಡಿದ ಹೇಳಿಕೆಯಲ್ಲಿ ಡಾ. ಹೇಮಲತಾ ಅವರು ಆಸ್ತಿಯನ್ನು ದಾನ ಮಾಡಿಲ್ಲ ಮತ್ತು ಸುಳ್ಳು ಮಾಹಿತಿಯನ್ನು ನೀಡುವ ಮೂಲಕ ದಾಖಲೆಗಳನ್ನು ಸಿದ್ಧಪಡಿಸಿದ್ದಾರೆ ಎಂದು ಹೇಳಿದ್ದಾರೆ.

ವೈದ್ಯೆ ಹೆಮಲತಾ ಅವರ ಸ್ಥಿತಿ ಹದಗೆಟ್ಟಾಗ, ಅವರನ್ನು ಧಾರ್ಮಿಕ ಗುಂಪಿಗೆ ಸೇರಿದ ವ್ಯಕ್ತಿಗಳು ಕಾರಿನಲ್ಲಿ ಕರೆದೊಯ್ದಿದ್ದಾರೆ ಎಂಬ ವರದಿಗಳು ಪ್ರಕರಣದ ಅನುಮಾನವನ್ನು ಮತ್ತಷ್ಟು ಹಚ್ಚಿಸಿವೆ. ನೆರೆಹೊರೆಯವರು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಪೊಲೀಸರು ಮಧ್ಯಪ್ರವೇಶಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಅವರಿಗೆ ಎಲ್ಲಿ ಚಿಕಿತ್ಸೆ ನೀಡಲಾಯಿತು, ಯಾವ ಔಷಧಿಗಳನ್ನು ನೀಡಲಾಯಿತು ಮತ್ತು ಅವರ ಆರೋಗ್ಯ ಏಕೆ ಬೇಗನೆ ಹದಗೆಟ್ಟಿತು ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ.

https://www.newsics.com/2026/02/18/this-summer-in-karnataka-is-scorching-hot/

TAGGED:Doctor who left behind a 60 crore asset: Suspicions surround death
Share This Article
Facebook Twitter Copy Link Print
Previous Article ಕರ್ನಾಟಕದಲ್ಲಿ ಈ ಬಾರಿ ಬೇಸಿಗೆಯಲ್ಲಿ ಬಿಸಿಲಿನ ಆರ್ಭಟ
Next Article Currency marriage ದುಡ್ಡಿನ ಮದುವೆ! ವಧುವಿನ ಮೇಲೆ ಎಂಟೂವರೆ ಕೋಟಿ ನೋಟು ಚೆಲ್ಲಿದ ವರನ ಕುಟುಂಬಸ್ಥರು, ವೈರಲ್ ವಿಡಿಯೋ ನೋಡಿ

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?