Subscribe ನ್ಯೂಸಿಕ್ಸ್ ಕನ್ನಡ
newsics.com
ಜೀವನದಲ್ಲಿ ಏನೇನೋ ಕನಸುಗಳು ಇರ್ತವೆ, ಆದ್ರೆ ಅದನ್ನೆಲ್ಲಾ ಪೂರೈಸಿಕೊಳ್ಳಲು ಕೈಯಲ್ಲಿ ಕಾಸು ಇರಬೇಕು ನೋಡಿ. ಆದ್ರೆ ಅಷ್ಟು ದೊಡ್ಡ ಮೊತ್ತದ ಹಣ ದುಡಿದು ಸಂಪಾದಿಸೋಕೆ ಸ್ವಲ್ಪ ಕಷ್ಟವಾದರೂ, ಕೆಲವರಿಗೆ ಲಕ್ ಸಾಥ್ ಕೊಟ್ಟುಬಿಡುತ್ತೆ. ಅಂತಹದ್ದೇ ಒಂದು ಅಚ್ಚರಿಯ ಘಟನೆ ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದಿದೆ.
ಹದಿನೈದು ವರ್ಷಗಳ ಕಾಲ ಗಂಡನಿಗೆ ಕೆಲಸವಿಲ್ಲ ಎಂಬ ಕಾರಣಕ್ಕೆ ಆತನನ್ನು ಸಾಕಿದ ಪತ್ನಿ, ಆತನ ಅದೃಷ್ಟ ಸರಿ ಇಲ್ಲ ಎಂದು ವಿಚ್ಛೇದನ ನೀಡಿದ ಕೆಲವೇ ತಿಂಗಳಲ್ಲಿ ಪತಿ ಬರೋಬ್ಬರಿ 2,500 ಕೋಟಿ ರೂಪಾಯಿ ಮೊತ್ತದ ಲಾಟರಿ ಗೆದ್ದು ಇಡೀ ಜಗತ್ತೇ ಬೆರಗಾಗುವಂತೆ ಮಾಡಿದ್ದಾರೆ.
ಮೈಕ್ ವೇರ್ಸ್ಕಿ ಮತ್ತು ಐಲೀನ್ ಮುರ್ರೆ ದಂಪತಿಗಳು 15 ವರ್ಷಗಳ ಕಾಲ ಸುದೀರ್ಘ ದಾಂಪತ್ಯ ನಡೆಸಿದ್ದರು. ಆದರೆ ಈ ಸಮಯದಲ್ಲಿ ಮೈಕ್ ಅವರಿಗೆ ಯಾವುದೇ ಕೆಲಸ ಇರಲಿಲ್ಲ. ಅದರಂತೆ, ಮನೆಯ ಸಂಪೂರ್ಣ ಜವಾಬ್ದಾರಿ ಮತ್ತು ಆರ್ಥಿಕ ಹೊರೆಯನ್ನೆಲ್ಲ ಪತ್ನಿ ಐಲೀನ್ ಅವರೇ ನೋಡಿಕೊಳ್ಳುತ್ತಿದ್ದರು. ಮತ್ತೊಂದೆಡೆ, ಮೈಕ್ ಕೆಲಸ ಹುಡುಕಲು ಎಷ್ಟೇ ಪ್ರಯತ್ನಿಸಿದರೂ ಯಶಸ್ಸು ಮಾತ್ರ ಸಿಗುತ್ತಿರಲಿಲ್ಲ. ಇದರಿಂದ ಬೇಸತ್ತ ಐಲೀನ್, ಗಂಡನಿಂದ ತನಗೆ ಯಾವುದೇ ಆರ್ಥಿಕ ಭದ್ರತೆ ಸಿಗುತ್ತಿಲ್ಲ ಎಂದು ಭಾವಿಸಿ 2025ರಲ್ಲಿ ವಿಚ್ಛೇದನ ಪಡೆದರು.
ವಿಚ್ಛೇದನ ಪಡೆದ ಕೇವಲ ಐದು ತಿಂಗಳ ನಂತರ ಮೈಕ್ ವೇರ್ಸ್ಕಿ ಮೆಗಾ ಮಿಲಿಯನ್ಸ್ ಲಾಟರಿಯಲ್ಲಿ 273 ಮಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿಗಳಲ್ಲಿ ಸುಮಾರು 2,500 ಕೋಟಿ ಮೊತ್ತದ ಬೃಹತ್ ಲಾಟರಿ ಗೆದ್ದರು. ಈ ಸುದ್ದಿ ಕೇಳಿ ಐಲೀನ್ ದಂಗಾಗಿ ಹೋದರು.
ಮತ್ತೊಂದೆಡೆ, ಮೈಕ್ ಲಾಟರಿ ಗೆಲುವಿನ ನಂತರ ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿರುವ ಐಲೀನ್, “ನಾನು ಆತನಿಗೆ ಈಗಲೂ ಜೀವನಾಂಶ ನೀಡುತ್ತಿದ್ದೇನೆ, ಆದರೆ ಆತನಿಗೆ ಈಗ ಅದು ಕೇವಲ ಚಿಲ್ಲರೆ ಕಾಸಿನಂತಾಗಿದೆ” ಎಂದು ಹೇಳಿದ್ದಾರೆ. ಜೊತೆಗೆ, ತನಗೆ ಲಾಟರಿ ಹಣದಲ್ಲಿ ಪಾಲು ಬೇಡ ಆದರೆ ತಾನು ನೀಡುತ್ತಿರುವ ಜೀವನಾಂಶವನ್ನು ನಿಲ್ಲಿಸಿದರೆ ಸಾಕು ಎಂದು ವಿನಂತಿಸಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಜನರು ಈ ಘಟನೆಯನ್ನು ನೋಡಿ ಮೈಕ್ ಎರಡು ಬಾರಿ ಗೆದ್ದಿದ್ದಾರೆ.