https://youtube.com/shorts/s_4DpSB4DuI?si=4AZmgba8KEPzCEfP
Subscribe ನ್ಯೂಸಿಕ್ಸ್ ಕನ್ನಡ
newsics.com
ಗಿಲ್ಲಿ ನಟ ದೊಡ್ಮನೆಯಿಂದ ಹೊರ ಬಂದ್ಮೇಲೆ ಲಕ್ ಚೇಂಜ್ ಆಗಿದೆ. ಬಿಗ್ ಬಾಸ್ ವಿನ್ನರ್ ಅನ್ನೋ ಪಟ್ಟ ಬಂದಾಗಿದೆ. ಇದರ ಜೊತೆಗೆ ಬೇಡಿಕೆನೂ ಹೆಚ್ಚಾಗಿದೆ. ಗಿಲ್ಲಿ ನಟ ಅವರು ‘ಸೂಪರ್ ಹಿಟ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿಗೆ ಅವರು ಕೂಡ ಆಗಮಿಸಿದ್ದರು. ಅವರು ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಆದರೆ ಗಿಲ್ಲಿ ನಟನಿಗೆ ಭಯ ಶುರು ಆಗಿದೆ. ಸೂಪರ್ ಹಿಟ್ ಚಿತ್ರದಲ್ಲಿ ಗಿಲ್ಲಿ ನಟನೆ ನಾಯಕ ಅನ್ನೋದೇ ಈ ಮಾತಾಗಿದೆ. ಈ ಮಾತು ಕೇಳಿಯೇ ಗಿಲ್ಲಿ ನಟನಿಗೆ ಭಯ ಆಗುತ್ತಿದೆ. ನಾಯಕ ನಟ ಅಂತ ಹೇಳುತ್ತಿದ್ದಾರೆ. ಆದರೆ, ನಾನು ಈ ಚಿತ್ರದ ನಾಯಕ ಅಲ್ವೇ ಅಲ್ಲ ಅಂತ ಗಿಲ್ಲಿ ನಟ ಹೇಳಿದ್ದಾರೆ.
ಸೂಪರ್ ಹಿಟ್ ಚಿತ್ರದಲ್ಲಿ ನಾನೂ ಒಂದು ಪಾತ್ರ ಮಾಡಿದ್ದೇನೆ. ಆದರೆ, ಈ ಚಿತ್ರದಲ್ಲಿ ನಾನು ನಾಯಕ ಅಲ್ವೇ ಅಲ್ಲ. ಇಲ್ಲೊಂದು ಪ್ರಮುಖ ರೋಲ್ ಅಷ್ಟೆ ಮಾಡಿದ್ದೇನೆ.ಚಿತ್ರದಲ್ಲಿ ದೊಡ್ಡ ದೊಡ್ಡ ಕಲಾವಿದರು ಇದ್ದಾರೆ. ಇವರ ನಡುವೆ ನಾನೂ ಇದ್ದೇನೆ. ಅಷ್ಟು ಬಿಟ್ಟರೆ ಯಾರಾದರೂ ನಾನು ನಾಯಕ ಅಂತ ಅಂದಾಗ ಭಯವಾಗುತ್ತದೆ ಅಂತಲೇ ಗಿಲ್ಲಿ ನಟ ಹೇಳಿದ್ದಾರೆ.