https://youtube.com/shorts/s_4DpSB4DuI?si=4AZmgba8KEPzCEfP
Subscribe ನ್ಯೂಸಿಕ್ಸ್ ಕನ್ನಡ
newsics.com
ಹರಿಯಾಣ: ಈ ಕೋಣದ ಬೆಲೆ ಕೇಳಿದ್ರೆ ನೀವು ಒಮ್ಮೆ ಬೆಚ್ಚಿಬೀಳುತ್ತೀರಾ. ಕೋಟಿ ಬೆಲೆ ಬಾಳು ಈ ಕೋಣದ ದಿನಚರಿ ಹೇಗಿದೆ ಗೊತ್ತಾ? .
ಹರಿಯಾಣದಲ್ಲಿ ನಡೆಯುವ ಜಾನುವಾರು ಜಾತ್ರೆಯಲ್ಲಿ 23 ಕೋಟಿ ರೂ. ಬೆಲೆಯ ಕೋಣ ಬಂದಿದ್ದು, ಎಲ್ಲರ ಗಮನ ಸೆಳೆಯುತ್ತಿವೆ. ಸಾವಿರಾರು ಪ್ರಾಣಿಗಳಿಗೆ ಈ ವಿಶಿಷ್ಟ ಜಾತ್ರೆ ಆತಿಥ್ಯ ವಹಿಸಿದ್ದು, ಈ ಪೈಕಿ ದುಬಾರಿ ಕೋಣವೊಂದು ಎಲ್ಲರ ಕೇಂದ್ರ ಬಿಂದುವಾಗಿದೆ.
ಫತೇಹಾಬಾದ್ ಜಿಲ್ಲೆಯ ನಾಗೋಡಿ ಗ್ರಾಮದಿಂದ ತಂದ ಮುರ್ರಾ ತಳಿಯ ಕುಬೇರ್ ಎಂಬ ಹೆಸರಿದ ಈ ಕೋಣ, ತನ್ನ ಗಾತ್ರದಿಂದ ಮಾತ್ರವಲ್ಲದೇ, ದುಬಾರಿ ಬೆಲೆಯಿಂದಲೂ ಜಾತ್ರೆಯಲ್ಲಿ ಎಲ್ಲರನ್ನು ದಿಗ್ಭ್ರಮೆಗೊಳಿಸುತ್ತಿದೆ. 21 ಕೋಟಿ ರೂ. ಮೌಲ್ಯದ ಕುಬೇರ್ ನಿಜವಾಗಿಯೂ ನನ್ನ ಹೆಮ್ಮೆ. ಇದು ಸುಮಾರು 20 ಐಷಾರಾಮಿ ಕಾರುಗಳಿಗಿಂತಲೂ ದುಬಾರಿ ಎನ್ನುತ್ತಾರೆ ಕೋಣದ ಮಾಲೀಕ ವಿಕಾಸ್.
ಮೂರು ತಿಂಗಳ ಹಿಂದೆ, ರಾಜಸ್ಥಾನದಲ್ಲಿ ನಡೆದ ವಿಶ್ವದ ಅತಿದೊಡ್ಡ ಪುಷ್ಕರ್ ಮೇಳದಲ್ಲಿ, ಈ ಕೋಣ ವಿಶ್ವದ ಅತ್ಯುತ್ತಮ ಮತ್ತು ಅತ್ಯಂತ ದುಬಾರಿ ಹೋರಿ ಎಂಬ ಬಿರುದು ಪಡೆದಿತ್ತು. ಇದರ ನಂತರ, ಅದರ ಬೆಲೆ 21 ಕೋಟಿ ರೂಪಾಯಿಗೆ ಹೆಚ್ಚಾಯಿತು. ಕುಬೇರ್ ಅನೇಕ ಅಂತಾರಾಷ್ಟ್ರೀಯ ಜಾನುವಾರು ಮೇಳಗಳಲ್ಲಿ ನಂಬರ್ ಒನ್ ಪ್ರಶಸ್ತಿ ಗೆದ್ದಿದ್ದಾನೆ. ಇತ್ತೀಚೆಗೆ, ಆಂಧ್ರಪ್ರದೇಶದ ಒಬ್ಬರು, ಇಟಲಿಯ ಮಧ್ಯವರ್ತಿಯೊಂದಿಗೆ, ಆ ಹೋರಿಯನ್ನು ಖರೀದಿಸಲು 21 ಕೋಟಿ ರೂ.ಗಳ ಔಪಚಾರಿಕ ಬಿಡ್ ಹಾಕಿದ್ದರು. ಕುಬೇರ್‌ನ ಈ ಹಿಂದೆ 11 ಕೋಟಿ ರೂಪಾಯಿಗಳ ಬೆಲೆಗೆ ಬಿಡ್ ಮಾಡಿದ್ದರೂ, ನಾನು ಅದನ್ನು ಮಾರಾಟ ಮಾಡಲು ಬಯಸಲಿಲ್ಲ ಎಂದು ವಿಕಾಸ್ ಹೇಳಿಕೊಂಡಿದ್ದಾರೆ.
ಕಡಲೆಕಾಳು ಇದಕ್ಕೆ ನೀಡುವ ವಿಶೇಷ ಆಹಾರವಾಗಿದೆ. ಪ್ರತಿದಿನ, ಅವನ ಆರೋಗ್ಯ ಮತ್ತು ಚರ್ಮ ಮೃದುವಾಗಿರಲಿ ಎಂಬ ಕಾರಣದಿಂದ 250 ಗ್ರಾಂ ತುಪ್ಪದೊಂದಿಗೆ ಬೆರೆಸಿದ 7 ಲೀಟರ್ ಹಾಲನ್ನು ನೀಡಲಾಗುತ್ತದೆ. ಚಳಿಗಾಲದಲ್ಲಿ, ಅವನಿಗೆ ಕುಡಿಯಲು ಕ್ಯಾರೆಟ್ ರಸ ಮತ್ತು ತಿನ್ನಲು ಕ್ಯಾರೆಟ್ ನೀಡಲಾಗುತ್ತದೆ. ಅವನನ್ನು ಪ್ರತಿದಿನ ಸುಮಾರು 5 ಕಿಲೋಮೀಟರ್ ನಡಿಗೆಗೆ ಕರೆದೊಯ್ಯಲಾಗುತ್ತದೆ. 2 ಗಂಟೆಗಳ ಮಸಾಜ್ ಮಾಡಲಾಗುತ್ತದೆ ಎಂದು ವಿಕಾಸ್ ವಿವರಿಸಿದ್ದಾರೆ.
ಕುಬೇರ್ ತನಗೆ ಅಂತಾರಾಷ್ಟ್ರೀಯ ಮನ್ನಣೆ ತಂದುಕೊಟ್ಟಿದ್ದಾನೆ. ಇಟಲಿ, ಅಮೆರಿಕ ಮತ್ತು ಇಂಗ್ಲೆಂಡ್‌ನಂತಹ ದೇಶಗಳಿಂದ ಕುಬೇರ ಬಗ್ಗೆ ನನಗೆ ಫೋನ್ ಕರೆಗಳು ಬರುತ್ತವೆ. ಅವನು ನನ್ನ ಮಗ ಇದ್ದಂತೆ. ಅದಕ್ಕಾಗಿಯೇ ನಾನು ಅವನನ್ನು ಮಾರಾಟ ಮಾಡಲು ಬಯಸುವುದಿಲ್ಲ. ಅವನ ವೀರ್ಯವು ಈಗಾಗಲೇ 3,000 ಕ್ಕೂ ಹೆಚ್ಚು ಕರುಗಳು ಜನಿಸಿವೆ. ಭವಿಷ್ಯದಲ್ಲಿ, ಸಾವಿರಾರು ಜಾನುವಾರು ಸಾಕಣೆದಾರರು ಈ ತಳಿಯನ್ನು ಪಡೆದುಕೊಳ್ಳಲಿದ್ದಾರೆ ಎಂದು ವಿಕಾಸ್ ಹೇಳಿದ್ದಾರೆ.