Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಉತ್ತಮ ನಿದ್ದೆಗಾಗಿ ಹೀಗೆ‌ ಮಾಡಿ…
ಆರೋಗ್ಯಲೈಫ್‌ಸ್ಟೈಲ್

ಉತ್ತಮ ನಿದ್ದೆಗಾಗಿ ಹೀಗೆ‌ ಮಾಡಿ…

Share
2 Min Read
SHARE

newsics.com
ನಮ್ಮ ಆರೋಗ್ಯ ಸುಸ್ಥಿತಿಯಲ್ಲಿರಬೇಕೆಂದರೆ ನಿತ್ಯ ಎಂಟು ಗಂಟೆ ನಿದ್ರೆ ಅತ್ಯವಶ್ಯ. ನಿದ್ದೆಯಲ್ಲಿ ವ್ಯತ್ಯಾಸವಾದರೆ ಆರೋಗ್ಯ ಕೆಡುತ್ತದೆ.

ದೀರ್ಘಕಾಲದ ನಿದ್ದೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಒಂದಿಲ್ಲೊಂದು ಆರೋಗ್ಯ ಸಮಸ್ಯೆ ಕಾಡುವುದು ನಿಶ್ಚಿತ.

ಉತ್ತಮ ನಿದ್ದೆ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ತೀರಾ ಮುಖ್ಯ. ನಿದ್ರೆ ಹಾರ್ಮೋನ್‌ಗಳನ್ನು ನಿಯಂತ್ರಿಸುತ್ತದೆ.

ಚೆನ್ನಾಗಿ ನಿದ್ದೆ ಮಾಡುವ ಅಭ್ಯಾಸ ರೂಢಿಸಿಕೊಳ್ಳುವುದು ತೀರಾ ಕಷ್ಟವೇನಲ್ಲ. ನಿದ್ದೆಯ ದಿನಚರಿ ಸರಿಪಡಿಸಲು ಮೂಲಭೂತ ವಿಷಯಗಳಿಂದ ಆರಂಭಿಸಬೇಕು.

ಸರಿಯಾಗಿ ಸಮಯಕ್ಕೆ ಮಲಗುವುದು ಹಾಗೂ ಸರಿಯಾಗಿ ಸಮಯಕ್ಕೆ ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳುವ ಮೂಲಕ ಉತ್ತಮ ನಿದ್ದೆಯ ದಿನಚರಿಯನ್ನು ರೂಢಿಸಿಕೊಳ್ಳಬಹುದು.

ಸೂರ್ಯನನ್ನು ಫಾಲೋ ಮಾಡಿ:
ಗುಣಮಟ್ಟದ ನಿದ್ದೆಗೆ ನಾವು ಸೂರ್ಯನ ಲಯದೊಂದಿಗೆ ನಮ್ಮ ದೇಹವನ್ನು ಹೊಂದಿಸಿಕೊಳ್ಳಬೇಕು. ಸೂರ್ಯೋದಯಕ್ಕೂ ಮುಂಚೆ ಎಚ್ಚರಗೊಳ್ಳುವುದು ಹಾಗೂ ಸರಿಯಾಗಿ ಸಮಯಕ್ಕೆ ಮಲಗುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದು ನಮ್ಮ ದೇಹದ ಅಂತರಿಕ ಗಡಿಯಾರವನ್ನು ನಿಯಂತ್ರಿಸಲು ಉತ್ತಮ ಕೊಡುಗೆ ನೀಡುತ್ತದೆ.

ಮಲಗುವ ಕೋಣೆಯಲ್ಲಿ ಸುವಾಸನೆಯಿರಲಿ: ಆರೋಮಾಥೆರಪಿ ಮನಸ್ಸಿಗೆ ಹೊಸ ಚೈತನ್ಯ ನೀಡುತ್ತದೆ. ಮನಸ್ಸಿನ ದುಗುಡವೂ ಕಡಿಮೆಯಾಗುತ್ತದೆ. ಮಲಗುವ ಕೋಣೆಯಲ್ಲಿ ಲ್ಯಾವೆಂಡರ್‌ ಎಣ್ಣೆಯ ಡಿಫ್ಯೂಸರ್‌ ಇಡುವುದರಿಂದ ಕೂಡ ಅದರ ಸುವಾಸನೆಗೆ ಚೆನ್ನಾಗಿ ನಿದ್ದೆ ಬರುತ್ತದೆ. ಲ್ಯಾವೆಂಡರ್ ಸುಗಂಧವು ಮೆಲಟೋನಿನ್ ಬಿಡುಗಡೆಗೆ ಮೆದುಳಿಗೆ ಸೂಚನೆ ನೀಡುತ್ತದೆ.

ಕ್ಯಾಮೊಮೈಲ್ ಚಹಾ ಕುಡಿಯಿರಿ:
ರಾತ್ರಿ ನಾವು ಸೇವಿಸುವ ಆಹಾರವು ನಿದ್ದೆಯ ಮೇಲೆ ಪರಿಣಾಮ ಬೀರುತ್ತದೆ. ರಾತ್ರಿ ಊಟದ ನಂತರ ಕ್ಯಾಮೊಮೈಲ್‌ ಟೀ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ. ಇದು ದೇಹ, ಮನಸ್ಸನ್ನು ಶಾಂತಗೊಳಿಸುತ್ತದೆ. ಇದರಿಂದ ಬೇಗನೆ ನಿದ್ದೆ ಆವರಿಸುತ್ತದೆ.

ಕೆಫೀನ್ ಇರುವ ಡ್ರಿಂಕ್ಸ್ ಬೇಡ:
ಆರೋಗ್ಯಕರ ನಿದ್ರೆಯ ದಿನಚರಿಯನ್ನು ರೂಪಿಸುವಲ್ಲಿ ಸಮಯವು ಪ್ರಮುಖ ಪಾತ್ರ ವಹಿಸುತ್ತದೆ. ಬೇಗ ಏಳುವುದು, ಮಧ್ಯಾಹ್ನ 3 ಗಂಟೆಯ ನಂತರ ಕಾಫಿ, ಟೀ, ಕೋಕ್, ಎನರ್ಜಿ ಡ್ರಿಂಕ್ಸ್ ಇತ್ಯಾದಿ ಕೆಫಿನ್ ಅಂಶ ಇರುವ ಉತ್ಪನ್ನಗಳನ್ನು ಸೇವಿಸದೇ ಇರುವುದು, ಮಲಗುವ 30-60 ನಿಮಿಷಕ್ಕೂ ಮೊದಲೇ ಟಿವಿ, ಕಂಪ್ಯೂಟರ್‌, ಮೊಬೈಲ್‌ ಸ್ಕ್ರೀನ್‌ಗಳಿಂದ ದೂರ ಇರಿ.

ಡಿಜಿಟಲ್ ಸಾಧನಗಳಿಂದ ದೂರವಿರಿ: ಮಲಗುವ ಕನಿಷ್ಠ ಒಂದು ಗಂಟೆಗೂ ಮೊದಲು ಮೊಬೈಲ್, ಟ್ಯಾಬ್, ಟಿವಿ, ಕಂಪ್ಯೂಟರ್ ಮತ್ತಿತರ ಡಿಜಿಟಲ್‌ ಸಾಧನಗಳಿಂದ ದೂರವಿರುವುದು ಬಹಳ ಮುಖ್ಯವಾಗುತ್ತದೆ. ಡಿಜಿಟಲ್‌ ಸಾಧನಗಳಿಂದ ಹೊರಹೊಮ್ಮುವ ನೀಲಿ ಕಿರಣಗಳು ಮೆಲಟೋನಿನ್‌ ಉತ್ಪಾದನೆಗೆ ಅಡ್ಡಿಯಾಗುತ್ತದೆ. ಇದು ನಿದ್ದೆಗೆ ಕಾರಣವಾಗುವ ಹಾರ್ಮೋನ್‌ ಆಗಿದ್ದು, ಇದು ಉತ್ಪಾದನೆಯಾಗದೇ ಇದ್ದಾಗ ನಿದ್ದೆಯ ತೊಂದರೆ ಉಂಟಾಗಬಹುದು. ಮಲಗುವ ಮುನ್ನ ಮಂದ ಬೆಳಕು ಇರುವಂತೆ ನೋಡಿಕೊಳ್ಳಿ.

ಬೆಡ್‌ರೂಮಲ್ಲಿ ಉಷ್ಣಾಂಶ ಸಮರ್ಪವಾಗಿರಲಿ:
ಉತ್ತಮ ನಿದ್ದೆಗೆ ಕೋಣೆಯ ವಾತಾವರಣವೂ ಮುಖ್ಯವಾಗುತ್ತದೆ. ಕೋಣೆಯ ಉಷ್ಣಾಂಶವು 16 ರಿಂದ 19 ಡಿಗ್ರಿ ಸೆಲ್ಸಿಯಸ್ ಇರುವಂತೆ ನೋಡಿಕೊಳ್ಳಿ. ಕೋಣೆಯ ಉಷ್ಣಾಂಶವು ಉತ್ತಮ ಹಾಗೂ ಶಾಂತ ನಿದ್ದೆಗೆ ನೆರವಾಗುತ್ತದೆ.

ಕಾಲಿಗೆ ಕಪ್ಪು ದಾರ ಕಟ್ಟೋದೇಕೆ? ಇದರ ಹಿಂದಿದೆ‌ ಬಲವಾದ ನಂಬಿಕೆ!

ಹೆಚ್ಚು ಬಿಸಿ ನೀರು ಕುಡಿತೀರಾ? ಇದ್ರಿಂದ ಅಪಾಯ ಕಟ್ಟಿಟ್ಟ ಬುತ್ತಿ!

TAGGED:how to get a better night's sleep...
Share This Article
Facebook Twitter Copy Link Print
Previous Article ಮಕ್ಕಳಾಗ್ತಿಲ್ವ? ಚಿಂತೆ ಬೇಡ, ಇದನ್ನೆಲ್ಲ ತಿಂದು ನೋಡಿ
Next Article ಶುಭೋದಯ, ಇಂದಿನ ಪಂಚಾಂಗ 08-08-2024 ಗುರುವಾರ, ಇವತ್ತೇನು ವಿಶೇಷ?

Popular Posts

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?