Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Power politics ರಾಜೀನಾಮೆಗೆ ಮುಂದಾಗಿದ್ದ ಇಂಧನ ಸಚಿವ ಜಾರ್ಜ್: ಏನು ಕಾರಣ? ಸಿಎಂ ಗರಂ ಆಗಿದ್ದೇಕೆ?
ಕರ್ನಾಟಕಪ್ರಮುಖ

Power politics ರಾಜೀನಾಮೆಗೆ ಮುಂದಾಗಿದ್ದ ಇಂಧನ ಸಚಿವ ಜಾರ್ಜ್: ಏನು ಕಾರಣ? ಸಿಎಂ ಗರಂ ಆಗಿದ್ದೇಕೆ?

Share
2 Min Read
SHARE

https://youtube.com/shorts/Z7vopgc72sA?si=4gbyJQjGVHsXjuKq

Subscribe ನ್ಯೂಸಿಕ್ಸ್ ಕನ್ನಡ

newsics.com

ಬೆಂಗಳೂರು: ಮುಖ್ಯಮಂತ್ರಿ ಪವರ್ ಶೇರಿಂಗ್ ಬಡಿದಾಟದ ನಡುವೆಯೇ ಸಿಎಂ ಸಿದ್ದರಾಮಯ್ಯ ಪರಮ ಆಪ್ತ ಹಾಗೂ ಇಂಧನ ಸಚಿವ ಕೆ ಜೆ ಜಾರ್ಜ್ ರಾಜೀನಾಮೆಯ ಬಿಗ್ ಶಾಕ್ ಕೊಡಲು ಮುಂದಾಗಿದ್ದರು ಎನ್ನುವ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.

ರಾಜೀನಾಮೆ ವಿಚಾರ ಸುಳ್ಳು ಎಂದು ಸಚಿವ ಜಾರ್ಜ್ ಸ್ಪಷ್ಟನೆ ನೀಡಿದ್ದಾರಾದರೂ ರಾಜೀನಾಮೆಯಂತಹ ಕ್ರಮಕ್ಕೆ ಮುಂದಾಗಿದ್ದುದು ನಿಜ ಎನ್ನುತ್ತಿವೆ ಸರ್ಕಾರದ ಮೂಲಗಳು.

ಸಿದ್ದರಾಮಯ್ಯ ಬಣದ ಪ್ರಬಲ ನಾಯಕ ಎಂದು ಗುರುತಿಸಿಕೊಂಡಿರುವ ಸಚಿವ ಕೆಜೆ ಜಾರ್ಜ್ ಅವರು ಐಎಎಸ್ ಅಧಿಕಾರಿ ಪರ ನಿಂತು ರಾಜೀನಾಮೆ ಕೊಡಲು ಮುಂದಾಗಿದ್ದರು ಎನ್ನುವ ಸುದ್ದಿ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ.
ಸಚಿವ ಕೆಜೆ ಜಾರ್ಜ್ ರಾಜೀನಾಮೆ ನೀಡಲು ಮುಂದಾಗಿದ್ದು ಓರ್ವ ಐಎಎಸ್ ಅಧಿಕಾರಿ ಸಸ್ಪೆಂಡ್ ವಿಚಾರಕ್ಕೆ ಎನ್ನಲಾಗ್ತಿದೆ.

ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ್ ಪಾಂಡೆ. ಇವರು ಇಂಧನ ಇಲಾಖೆಯ ಟೆಂಡರ್‌ಗಳನ್ನು ಉತ್ತರ ಭಾರತೀಯರಿಗೆ ನೀಡ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು.

ಈ ಬಗ್ಗೆ ಕರ್ನಾಟಕದ ಕೆಲ ಕಂಟ್ರಾಕ್ಟರ್‌ಗಳು ಕೂಡ ಪಾಂಡೆ ವಿರುದ್ಧ ಸಿಎಂಗೆ ದೂರು ನೀಡಿದ್ದರು. ದೂರು ಬಂದ ಹಿನ್ನೆಲೆ ಸಿಎಂ ಕಚೇರಿಯಿಂದ ಪಾಂಡೆಗೆ ನೋಟಿಸ್ ನೀಡಲಾಗಿದೆ. ನೋಟಿಸ್ ಕೊಟ್ಟರೂ ಕೆಪಿಟಿಸಿಎಲ್ ಎಂಡಿ ಪಾಂಡೆ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿಲ್ಲ.
ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗುವಂತೆ ಎಂಡಿ ಪಾಂಡೆ ಅವರಿಗೆ ಮುಖ್ಯಮಂತ್ರಿ ಕಚೇರಿಯಿಂದ 8 ಬಾರಿ ಕರೆ ಮಾಡಿದ್ರೂ ಸರಿಯಾಗಿ ಸ್ಪಂದಿಸಿಲ್ಲ. ಹೀಗಾಗಿ ಪಾಂಡೆ ನಡೆಗೆ ಸಿಟ್ಟಾದ ಸಿಎಂ ಸಿದ್ದರಾಮಯ್ಯ ಅವರು ಪಂಕಜ್ ಕುಮಾರ್ ಪಾಂಡೆಯನ್ನು ಸಸ್ಪೆಂಡ್ ಮಾಡುವಂತೆ ಸಿಎಸ್‌ಗೆ ಆದೇಶ ನೀಡಿದ್ದರಂತೆ.
ಶಾಲಿನಿ ರಜನೀಶ್ ಅವರು ಸಸ್ಪೆಂಡ್‌ಗೆ ತಯಾರಿ ನಡೆಸುತ್ತಿರುವ ವಿಚಾರ ಗೊತ್ತಾಗ್ತಿದ್ದಂತೆ ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ್ ಪಾಂಡೆ, ಸಿಎಂ ಕಚೇರಿಗೆ ಓಡೋಡಿ ಬಂದಿದ್ದಾರೆ. ಇದೇ ವೇಳೆ ಪಾಂಡೆ ಮೇಲೆ ಸಿಎಂ ಗರಂ ಆಗಿದ್ದರು. ನನಗೆ ಗೌರವ ಕೊಡದಿದ್ದರೂ ಪರವಾಗಿಲ್ಲ. ಸಿಎಂ ಹುದ್ದೆಗೆ ಗೌರವ ಕೊಡು. ನಿನ್ನನ್ನು ಸಸ್ಪೆಂಡ್ ಮಾಡ್ತಿದ್ದೇನೆ ಎಂದು ಅಧಿಕಾರಿ ಮೇಲೆ ಸಿಎಂ ಸಿಟ್ಟಾಗಿದ್ರು ಎಂದು ಮೂಲಗಳಿಂದ ತಿಳಿದುಬಂದಿದೆ.
ಇತ್ತ ಇಂಧನ ಇಲಾಖೆಯ ಕೆಪಿಟಿಸಿಎಲ್ ಎಂಡಿ ಪಂಕಜ್ ಪಾಂಡೆ ಸಸ್ಪೆಂಡ್ ಮಾಹಿತಿ ಪಡೆದ ಸಚಿವ ಕೆ.ಜೆ. ಜಾರ್ಜ್, ನನಗೆ ತಿಳಿಯದೆ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ ಬಗ್ಗೆ ಕೋಪಗೊಂಡಿದ್ದರು ಎನ್ನಲಾಗ್ತಿದೆ.

ಪಾಂಡೆ ಸಸ್ಪೆಂಡ್ ಮಾಡಿದರೆ ಇಲಾಖೆಯಲ್ಲಿ ನಾನ್ಯಾಕೆ ಇರಬೇಕು? ಪಾಂಡೆ ಸಸ್ಪೆಂಡ್ ಮಾಡುವ ವಿಚಾರದಲ್ಲಿ ನನ್ನನ್ನು ಮೊದಲೇ ಕೇಳಬೇಕಿತ್ತು ಎಂದು ಜಾರ್ಜ್ ಗರಂ ಆಗಿ ರಾಜೀನಾಮೆಯ ನಿರ್ಧಾರವನ್ನೇ ಮಾಡಿಬಿಟ್ಟಿದ್ರು ಎಂದು ಹೇಳಲಾಗ್ತಿದೆ.
ಐಎಎಸ್ ಅಧಿಕಾರಿ ಪರ ನಿಂತ ಸಚಿವ ಕೆಜೆ ಜಾರ್ಜ್, ಇದೇ ಕಾರಣಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಮುಂದಾಗಿದ್ದರು ಎನ್ನಲಾಗ್ತಿದೆ. ಇತ್ತ ಸಿಎಂ ಭೇಟಿಯಾಗದ ಬಗ್ಗೆ ಪಾಂಡೆ ವಿವರಣೆ ಸಹ ನೀಡಿದ್ದಾರೆ. ನನ್ನ ತಾಯಿ ತೀರಿಕೊಂಡಿದ್ದರು. ಹೀಗಾಗಿ ಭೇಟಿಯಾಗಲು ಆಗಿಲ್ಲ. ಮುಂದೆ ಈ ರೀತಿ ನಡೆದುಕೊಳ್ಳುವುದಿಲ್ಲ ಎಂದು ಸಿಎಂ ಬಳಿ ಮನವಿ ಮಾಡಿಕೊಂಡಿದ್ದಾರೆ. ಮನವಿ ಬಳಿಕ ಪಾಂಡೆ ಸಸ್ಪೆಂಡ್ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಕೈಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಾಂಡೆ ಮೇಲೆ ಸಿಎಂ ಸಿಟ್ಟಾಗಲು ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಕಾರಣ ಎನ್ನಲಾಗಿದೆ.

ಕೊಡಗಿನಲ್ಲಿ ರಾಜಕಾರಣಿ ಮಕ್ಕಳು ಸೇರಿ ಯುವತಿಯರೊಂದಿಗೆ ರಾಸಲೀಲೆ ವಿಡಿಯೋ ವೈರಲ್

Gold Rate ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಏರಿಕೆ; ಇಲ್ಲಿದೆ ದರಪಟ್ಟಿ

ಇನ್ಮುಂದೆ ಎಟಿಎಂಗಳಲ್ಲಿ ಸಿಗಲಿದೆ 10, 20, 50 ರೂಪಾಯಿ ನೋಟುಗಳು

ಡಂಬೆಲ್‌ನಿಂದ ಹೊಡೆದು ಸ್ವಾಟ್ ಕಮಾಂಡೋ ಕಾಜಲ್ ಕೊ*ಲೆಗೈದ ಪತಿ!

TAGGED:Energy Minister George was about to resign: What was the reason?
Share This Article
Facebook Twitter Copy Link Print
Previous Article ತಾಯಿಯ ಅಂತ್ಯಸಂಸ್ಕಾರಕ್ಕೂ ಬರಲಾಗದಷ್ಟು ಬ್ಯುಸಿಯಾದ ಮಗ – ವೈರಲ್ ವಿಡಿಯೋ ನೋಡಿ
Next Article 2026ರ ಯುಜಿಸಿ ನಿಯಮಾವಳಿ ಜಾರಿಗೆ ಸುಪ್ರೀಂ ತಾತ್ಕಾಲಿಕ ತಡೆ

Popular Posts

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಮಹತ್ವದ ಹೇಳಿಕೆ!

1 Min Read

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read

Elephant attack ಆನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ‌ ಪತ್ನಿ ಬಲಿ

1 Min Read

You Might Also Like

ಕರ್ನಾಟಕಪ್ರಮುಖ

ರಾಜ್ಯ ಸರ್ಕಾರಿ ನೌಕರರು ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

2 Min Read
ಪ್ರಮುಖಕರ್ನಾಟಕ

Train tragedy ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿದ ಯುವಕ ಸಾವು

1 Min Read
ಕರ್ನಾಟಕದೇಶಪ್ರಮುಖ

FSSAI Vegan logo ಸಸ್ಯಾಹಾರಿ ಆಹಾರ ಪ್ಯಾಕೆಟ್‌ ಗಳ ಮೇಲೆ FSSAI ಲೋಗೋ ಕಡ್ಡಾಯ

1 Min Read
ದೇಶಪ್ರಮುಖವೈರಲ್

ಮಾಜಿ ಪ್ರೇಯಸಿಗೆ 20 ಬಾರಿ ಇರಿದು ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ : ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?