newsics. com
ಮಂಡ್ಯ:ಮಂಡ್ಯಕ್ಕೆ ಕಾಡಾನೆಗಳು ಲಗ್ಗೆಯಿಟ್ಟಿವೆ. ಶ್ರೀರಾಮನಗರ ಬಡಾವಣೆಯ ಪಕ್ಕದಲ್ಲಿರುವ ಕಬ್ಬಿನ ಗದ್ದೆಯಲ್ಲಿ ಗಜಪಡೆ ಬೀಡುಬಿಟ್ಟಿದೆ.
ಕಬ್ಬಿನ ಗದ್ದೆಯಲ್ಲಿರುವ ಕಾಡಾನೆಗಳನ್ನು ದೃಶ್ಯವನ್ನು ಸ್ಥಳೀಯರು ಡ್ರೋಣ್ ಕ್ಯಾಮರದಲ್ಲಿ ಸೆರೆ ಹಿಡಿದಿದ್ದಾರೆ. ಇನ್ನು ಆನೆಗಳು ಬೀಡು ಬಿಟ್ಟಿರುವ ಜಮೀನಿನ ಪಕ್ಕದಲ್ಲಿಯೇ ಬೆಳಗ್ಗೆ ಜನರ ವಾಯ ವಿಹಾರ ಮಾಡುತ್ತಾರೆ. ಜೊತೆಗೆ, ಈ ಕಬ್ಬಿನ ಗದ್ದೆಯ ಪಕ್ಕದಲ್ಲಿ ಶಾಲೆ ಇದ್ದು, ವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳನ್ನು ಮತ್ತೆ ಕಾಡಿಗೆ ಓಡಿಸಲು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಆದರೆ, ಎರಡೂ ಆನೆಗಳು ಗಂಡು ಆನೆಗಳಾಗಿರುವುದರಿಂದ ಡ್ರೋನ್ ಕ್ಯಾಮೆರಾಗಳನ್ನು ನೋಡಿ ಜೊತೆಗೆ ಜನರು ಮತ್ತು ವಾಹನಗಳ ಸಂಚಾರದ ಶಬ್ದಕ್ಕೆ ಆನೆಗಳು ಬೆದರಿವೆ. ಹೀಗಾಗಿ, ಜನರ ಮೇಲೆ ದಾಳಿ ಮಾಡುವ ಸಾಧ್ಯತೆಯೂ ಹೆಚ್ಚಾಗಿದೆ.